ಮುಂಬೈ (ಪಿಟಿಐ): ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್‌ನ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಭಾರತದ 30 ಸದಸ್ಯರ ಸಂಭಾವ್ಯರ ತಂಡವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗುರುವಾರ ಪ್ರಕಟಿಸಿದೆ. ರಾಜ್ಯದ ರಾಬಿನ್ ಉತ್ತಪ್ಪ, ಮನೀಶ್‌ಪಾಂಡೆ, ಸ್ಟುವರ್ಟ್ ಬಿನ್ನಿ ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಸಂದೀಪ್ ಪಾಟೀಲ್ ನೇತೃತ್ವದ ಐವರು ಸದಸ್ಯರ ಆಯ್ಕೆ ಸಮಿತಿ ಇಂದು ಸಭೆ ಸೇರಿ ಸಂಭಾವ್ಯ ಆಟಗಾರರ ತಂಡವನ್ನು ಪ್ರಕಟಿಸಿತು. ನಿರೀಕ್ಷೆಯಂತೆ ಕಳೆದ ಟೂರ್ನಿಯಲ್ಲಿ ಸ್ಥಾನಪಡೆದಿದ್ದ ಐವರು ಹಿರಿಯ ಆಟಗಾರರಾದ ಜಹೀರ್ ಖಾನ್, ಯುವರಾಜ್ ಸಿಂಗ್, ವಿರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಮತ್ತು ಹರಭಜನ್ ಸಿಂಗ್ ಅವರನ್ನು ಸಂಭ್ಯಾವರ ಪಟ್ಟಿಯಿಂದ ಕೈಬಿಡಲಾಗಿದೆ.

ಸಂಭಾವ್ಯ ಆಟಗಾರರ ಪಟ್ಟಿ: ಮಹೇಂದ್ರ ಸಿಂಗ್ ದೋನಿ, ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಂಜಿಕ್ಯಾ ರಹಾನೆ, ರಾಬಿನ್ ಉತ್ತಪ್ಪ, ಸುರೇಶ್ ರೈನಾ, ಅಂಬಟಿ ರಾಯುಡು, ಕೇದಾರ್ ಜಾಧವ್, ಮನೋಜ್ ತಿವಾರಿ, ಮನೀಶ್ ಪಾಂಡೆ, ವೃದ್ಧಿಮಾನ್ ಸಹ, ಸಂಜು ಸ್ಯಾಮ್‌ಸನ್, ಆರ್, ಅಶ್ವಿನ್, ಪರ್ವೇಜ್ ರಸೂಲ್, ಕರಣ್ ಶರ್ಮಾ, ಅಮಿತ್ ಮಿಶ್ರಾ, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ವರುಣ್ ಆರಾನ್, ಧವಳ್ ಕುಲಕರ್ಣಿ, ಸ್ಟುವರ್ಟ್ ಬಿನ್ನಿ, ಮೋಹಿತ್ ಶರ್ಮಾ, ಅಶೋಕ್ ದಿಂಡಾ, ಕುಲ್‌ದೀಪ್ ಯಾದವ್, ಮುರಳಿ ವಿಜಯ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.