ನವದೆಹಲಿ (ಪಿಟಿಐ): ಶಿಕ್ಷಣವನ್ನು ಕೇಸರೀಕರಣ ಮಾಡಲಾಗುತ್ತಿದೆ ಎಂಬ ಆರೋಪ ಅಲ್ಲಗಳೆದಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಪಠ್ಯದಲ್ಲಿ ಸಂಸ್ಕೃತ ಕಡ್ಡಾಯಗೊಳಿಸುವ ಬೇಡಿಕೆಯನ್ನೂ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

ಸುದ್ದಿಸಂಸ್ಥೆಯಲ್ಲಿ ಭಾನುವಾರ ನಡೆದ ಸಂವಾದದಲ್ಲಿ ಮಾತನಾಡಿ, ‘ನನ್ನನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮುಖವಾಡ ಅಥವಾ ಪ್ರತಿನಿಧಿ ಎಂದು ಆರೋಪ ಮಾಡುವ ವ್ಯಕ್ತಿಗಳು ನಾವು ಮಾಡಿರುವ ಒಳ್ಳೆಯ ಕೆಲಸ ಮರೆಮಾಚಲು ಈ ರೀತಿ ದಿಕ್ಕುತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

ಕೇಂದ್ರೀಯ ವಿದ್ಯಾಲಯಗಳ ಪಠ್ಯದಲ್ಲಿ ಜರ್ಮನ್ ಭಾಷೆ ಬದಲಿಗೆ ಸಂಸ್ಕೃತವನ್ನು ಅಳವಡಿಸುವ ವಿವಾದಿತ ನಿರ್ಧಾರದ ಬಗ್ಗೆ

ರಾಯಭಾರಿ ನಡವಳಿಕೆಗೆ ಸರ್ಕಾರ ಕೆಂಗಣ್ಣು

500 ಕೇಂದ್ರೀಯ ವಿದ್ಯಾಲಯಗಳಲ್ಲಿ ತೃತೀಯ ಭಾಷೆಯನ್ನಾಗಿ ಜರ್ಮನ್ ಬದಲು ಸಂಸ್ಕೃತವನ್ನು ಕಲಿಸಬೇಕು ಎಂಬ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿ ಭಾರತದಲ್ಲಿರುವ ಜರ್ಮನಿ ರಾಯಭಾರಿ ಮೈಕೆಲ್ ಸ್ಟೈನರ್ ಅವರು ನಡೆದುಕೊಂಡ ರೀತಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಸರ್ಕಾರದ ಈ ನಿರ್ಧಾರದ ಬಳಿಕ ಮೈಕೆಲ್ ಅವರು ಸಂಸ್ಕೃತ ಶಿಕ್ಷಕ ಸಂಘ, ಹಾಗೂ ಖಾಸಗಿ ಶಾಲೆಗೆ ಸಂಬಂಧಿಸಿದ ವ್ಯಕ್ತಿಗಳನ್ನು ಭೇಟಿ ಮಾಡಿದ್ದರು. ರಾಯಭಾರಿಯೊಬ್ಬರು ಈ ರೀತಿ ನಡೆದುಕೊಂಡಿರುವುದು ಅನಪೇಕ್ಷಿತ ನಡವಳಿಕೆ ಎಂಬ ಆಕ್ಷೇಪ ಕೇಳಿ ಬಂದಿದೆ.

ಸುದ್ದಿಗಾರರು ಕೇಳಿದ ಪ್ರಶ್ನೆಗೆ, ‘೨೦೧೧ರಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ ಜರ್ಮನ್ ಭಾಷೆ ಬೋಧನೆಯು ಸಂವಿಧಾನದ ಉಲ್ಲಂಘನೆಯಾಗಿದೆ. ಈ ಒಪ್ಪಂದಕ್ಕೆ ಹೇಗೆ ಸಹಿ ಹಾಕಲಾಯಿತು ಎನ್ನುವುದನ್ನು ತನಿಖೆಗೆ ಒಳಪಡಿಸಲಾಗುತ್ತಿದೆ’ ಎಂದರು.

ಸಂಸ್ಕೃತವನ್ನು ಕಡ್ಡಾಯ ಭಾಷೆಯಾಯನ್ನಾಗಿ ಮಾಡಬೇಕೆನ್ನುವ ಬೇಡಿಕೆ ಕುರಿತು ಕೇಳಿದ ಪ್ರಶ್ನೆಗೆ, ‘ಸಂವಿಧಾನದ ೮ನೇ ಅನುಸೂಚಿಯಲ್ಲಿ ಸೇರಿಸಲಾದ ಭಾರತದ ೨೩ ಭಾಷೆಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು’ ಎಂದು ಹೇಳಿದರು.

ಜರ್ಮನ್ ಭಾಷೆಯನ್ನು ವಿದೇಶಿ ಭಾಷೆಯನ್ನಾಗಿ ಕಲಿಸುವುದು ಮುಂದುವರಿಯುತ್ತದೆ ಎಂದೂ ಅವರು ಪುನರುಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.