ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆ (ಶ್ರವಣಬೆಳಗೊಳ): ಮಾಹಿತಿ ಮತ್ತು ತಂತ್ರಜ್ಞಾನದಲ್ಲಿ ಸಾಕಷ್ಟು ಕ್ರಾಂತಿ ಆಗಿದ್ದರೂ ಸಹ ಕನ್ನಡ ಭಾಷಾ ತಂತ್ರಜ್ಞಾನ ನಿರೀಕ್ಷಿತ ಮಟ್ಟದಲ್ಲಿ ಬೆಳೆದಿಲ್ಲ ಎಂದು ಡಾ.ಭ. ಮಲ್ಲಿಕಾರ್ಜುನ ಹೇಳಿದರು.

ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ 81ನೇ ಅಖಿಲ ಭಾತರ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ನಡೆದ ‘ಸ್ವಾತಂತ್ರ್ಯೋತ್ತರ ಕರ್ನಾಟಕ –ವರದಿಗಳು ಮತ್ತು ಅನುಷ್ಠಾನ’ ವಿಷಯಕ್ಕೆ ಸಂಬಂದಿಸಿ ನಡೆದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕನ್ನಡ ಭಾಷೆಯನ್ನು ಅಭಿವೃದ್ದಿಗೊಳಿಸಲು ಇದುವರೆಗೆ ಒಟ್ಟು 11 ಸಮಿತಿಗಳು ರಚನೆ ಆಗಿ ವರದಿ ಮಂಡಿಸಿವೆ. ಇವುಗಳಲ್ಲಿ 9 ಸಮಿತಿಗಳನ್ನು ಸರ್ಕಾರ ನೇಮಕ ಮಾಡಿದರೆ, 2 ಸಮಿತಿಗಳು ಸ್ವಯಂ ಪ್ರೇರಿತ ವರದಿಗಳಾಗಿವೆ. ಪ್ರಾಥಮಿಕ, ಪ್ರೌಢ ಶಿಕ್ಷಣ, ಕನ್ನಡಿಗರಿಗೆ ಉದ್ಯೋಗ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸೇರಿದಂತೆ ಗೋಕಾಕ್, ಸರೋ-ಜಿನಿ ಮಹಿಷಿ, ಎಚ್. ನರಸಿಂಹಯ್ಯ, ಕೆ. ನಾರಾಯಣ್ ಮತ್ತು ವೆಂಕಟಸ್ವಾಮಿ, ಡಾ.ಎಲ್.ಎಸ್. ಚಿದಾನಂದಮೂರ್ತಿ –ಇವರೆಲ್ಲರ ವರದಿಗಳಲ್ಲಿ ಶೇ 80 ಭಾಗ ಅನುಷ್ಠಾನಗೊಂಡಿಲ್ಲ. ಅನುಷ್ಠಾನಗೊಂಡರೂ ಹಲವು ಪುಸ್ತಕಕ್ಕೆ ಮಾತ್ರ ಸೀಮಿತವಾಗಿವೆ ಎಂದರು.

ಕರ್ನಾಟಕದಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿ, ಕನಿಷ್ಠ ಒಂದು ಲಕ್ಷ ಮಂದಿ ಕನ್ನಡಿಗರಿಗೆ ಉದ್ಯೋಗ ನೀಡದೆ ಇದ್ದರೆ, ಅಂತಹ ಬಂಡವಾಳ ಹೂಡಿಕೆ ರಾಜ್ಯಕ್ಕೆ ಅಗತ್ಯವಿದೆಯೇ ಎಂದು ಪ್ರಶ್ನೆ ಮಾಡಿದರು.

ಕನ್ನಡಿಗರಿಗೆ ಬದುಕು ಕಟ್ಟಿಕೊಡುವಂತೆ ನೀಡಿರುವ ಸರೋಜಿನಿ ಮಹಿಷಿ ವರದಿ ಯಥಾವತ್ತಾಗಿ ಅನುಷ್ಠಾನಗೊಳ್ಳಬೇಕು ಎಂದರು.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸೂತ್ರಗಳನ್ನು ಅನುಷ್ಠಾನಗೊಳಿಸುವ ಅಧಿಕಾರ ಕೇಂದ್ರದಿಂದ ಕೈಬಿಟ್ಟು ರಾಜ್ಯ ಸರ್ಕಾರಕ್ಕೆ ನೀಡಿದರೆ ಮಾತ್ರ ಭಾಷೆಗೆ ಸೂಕ್ತ ಸ್ಥಾನ ಮಾನ ಸಿಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಆತಂಕ ಹುಟ್ಟಿಸಿದ ಮನಸ್ಥಿತಿ: ನೆಲ, ಜಲ, ಪರಿಸರ ಅಭಿವೃದ್ಧಿ ವಿಷಯ ಕುರಿತು ರಾಧಾಕೃಷ್ಣ ಎಸ್. ಬಡ್ತಿ ಮಾತನಾಡಿ, ನೆಲ, ಜಲ, ಪರಿಸರವನ್ನು ಉಳಿಸಿ, ಸಂರಕ್ಷಣೆ ಮಾಡಬೇಕು ಎಂಬ ಮನಸ್ಥಿತಿ ಮಾಯವಾಗುತ್ತಿರುವುದು ಆತಂಕ ಹುಟ್ಟಿಸಿದೆ. ಎತ್ತಿನಹೊಳೆ (ನೇತ್ರಾವತಿ) ತಿರುವು ಯೋಜನೆಯನ್ನೂ ಸಹ ಚುನಾವಣೆಯ ವಸ್ತುವಾಗಿ ಬಳಸಿಕೊಂಡಿದ್ದಾರೆಯೇ ಹೊರತು ಬಯಲುಸೀಮೆಯ ಜನರ ಬಾಯಾರಿಕೆ ಇಂಗಿಸುವ ಉದ್ದೇಶ ಯೋಜನೆಯಲ್ಲಿ ಇಲ್ಲ ಎಂದು ವಿಷಾದಿಸಿದರು.

ಬಹುತೇಕ ಚಳವಳಿಗಳು ಇಂದು ತನ್ನ ಸಾಚಾತನ ಉಳಿಸಿಕೊಂಡಿಲ್ಲ ಎಂದ ಅವರು, ವಿದೇಶಿ ಕಂಪೆನಿಗಳ, ಬಂಡವಾಳಶಾಹಿಗಳ, ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆಗಳಾಗಿವೆ. ಹೋರಾಟಗಳು ಚಳವಳಿಗಳು ರಾಜಕೀಯ ಬಣ್ಣ ಬಳಿದುಕೊಂಡಿರುವುದರಿಂದ ನಿಜವಾಗಿಯೂ ಕಾಳಜಿ ಇಟ್ಟುಕೊಂಡು ಪರಿಸರ ಸಂರಕ್ಷಣೆ ಮಾಡಲು ಹೋರಾಟ ಮಾಡುವವರನ್ನು ಕೀಳಾಗಿ ಕಾಣಲಾಗುತ್ತಿದೆ. ಇಂತಹ ಬೆಳವಣಿಗೆಯನ್ನು ನೋಡಿಕೊಂಡು ಮಧ್ಯಮ ವರ್ಗದವರು ಎಲ್ಲಿಯವರೆಗೆ ಸುಮ್ಮನಿರುತ್ತಾರೋ ಅಲ್ಲಿಯವರೆಗೆ ಮೋಸ, ವಂಚನೆ, ಪರಿಸರ ನಾಶಕ್ಕೆ ಕೊನೆ ಇಲ್ಲ ಎಂದರು.

ಗಡಿ ವಿವಾದ; ಸರ್ಕಾರಕ್ಕೆ ಇಲ್ಲದ ಕಾಳಜಿ: ಡಾ.ಸರಜೂ ಕಾಟ್ಕರ್ ಗಡಿ ವರದಿಗಳ ಬಗ್ಗೆ ಮಾತನಾಡುತ್ತಾ, ಕರ್ನಾಟಕ ಮಹಾರಾಷ್ಟ್ರ ಗಡಿ ಸಮಸ್ಯೆ ಸಂಬಂಧ 1966ರಲ್ಲಿಯೇ ಮಹಾಜನ್ ವರದಿ ನೀಡಲಾಗಿದೆ. ಕರ್ನಾಟಕದ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ವಿ.ಪಿ. ನಾಯಕ್ ಇಬ್ಬರೂ ವರದಿಯನ್ನು ಒಪ್ಪಿ ಸಹಿ ಹಾಕಿದ್ದಾರೆ. ಸದರಿ ವರದಿಜಾರಿಗೊಳಿಸುವಂತೆ ಕಳೆದ ನಾಲ್ಕು ದಶಕಗಳಿಂದಲೂ ಕರ್ನಾಟಕ ಸರ್ಕಾರ ಸುಪ್ರಿಂ ಕೋರ್ಟ್ಗೆ ಮೊರೆ ಹೋಗಿಲ್ಲ. ಮಹಾರಾಷ್ಟ್ರಕ್ಕೆ ಇರುವ ಕಾಳಜಿ ಕರ್ನಾಟಕ ಸರ್ಕಾರಗಳಿಗೆ ಇಲ್ಲ ಎಂದರು. ಸಮ್ಮೇಳನಾಧ್ಯಕ್ಷ ಡಾ.ಸಿದ್ದಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಚ.ನಾ. ಅಶೋಕ್ ಸ್ವಾಗತಿಸಿದರು, ಲೀಲಾ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು, ಸೋಮಶೇಖರ್ ಬಿಸಲ್ವಾಡಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.