ಮುಂಬೈ (ಪಿಟಿಐ): ದೇಶದ ಷೇರುಪೇಟೆ ಇತಿಹಾಸದಲ್ಲೇ ಮುಂಬೈ ಷೇರುಪೇಟೆ ಸೂಚ್ಯಂಕವು ಇದೇ ಮೊದಲ ಬಾರಿಗೆ 1,625 ಅಂಶಗಳಷ್ಟು ಗರಿಷ್ಠ ಕುಸಿತ ಕಂಡಿದೆ. ಈ ಹಿಂದೆ 2008ರ ಜ. 21ರಂದು ಸೂಚ್ಯಂಕವು 1,408 ಅಂಶಗಳಷ್ಟು ಭಾರಿ ಇಳಿಕೆ ಕಂಡಿತ್ತು.

ಈವರೆಗೂ ಒಟ್ಟು 10 ಬಾರಿ ಬಿಎಸ್‌ಇ ಸೂಚ್ಯಂಕ ಗರಿಷ್ಠ ಮಟ್ಟದ ಕುಸಿತಕ್ಕೆ ಒಳಗಾಗಿದೆ. 2008ರಲ್ಲೇ ಏಳು ಬಾರಿ ಸೂಚ್ಯಂಕ ಕುಸಿತ ಕಂಡಿತ್ತು.

ಸೋಮವಾರದ ಕಾಟ: ಷೇರುಪೇಟೆ ಮಟ್ಟಿಗೆ ಸೋಮವಾರ ಕರಾಳ ದಿನ. ಈ ಹಿಂದೆ ಸೂಚ್ಯಂಕ 10 ಬಾರಿ ಗರಿಷ್ಠ ಕುಸಿತ ಅನುಭವಿಸಿದ್ದು, ಇದರಲ್ಲಿ ಏಳು ಪತನಗಳು ಸೋಮವಾರವೇ ಆಗಿವೆ. ಈ ಬಾರಿಯೂ ಸೋಮವಾರವೇ 1,625 ಅಂಶಗಳ ಕುಸಿತ ಕಂಡಿದೆ. ಆ ಮೂಲಕ, ಸೋಮವಾರಕ್ಕೂ ಷೇರುಪೇಟೆಯ ಪತನಕ್ಕೂ ನಂಟಿದೆಯೇನೋ ಎಂಬ ಸಂಶಯ ಮೂಡುವಂತೆ ಮಾಡಿದೆ.

ತೀವ್ರ ಕುಸಿತ ಕಂಡ ರೂಪಾಯಿ ಮೌಲ್ಯ: ಒಂದೆಡೆ ದೇಶದ ಷೇರುಪೇಟೆ ಹಿಂದೆಂದೂ ಕಾಣದಷ್ಟು ಪ್ರಮಾಣದಲ್ಲಿ ಪತನ ಕಂಡಿದ್ದರೆ, ಇನ್ನೊಂದೆಡೆ, ರೂಪಾಯಿ ಮೌಲ್ಯವೂ ತೀವ್ರವಾಗಿ ಕುಸಿದಿದೆ. ಅಮೆರಿಕದ ಡಾಲರ್ ಎದುರು ಎರಡೂವರೆ ವರ್ಷಗಳ ಕನಿಷ್ಠ ಮಟ್ಟಕ್ಕಿಳಿದಿದೆ.

ಇಲ್ಲಿನ ವಿದೇಶಿ ವಿನಿಮಯ ಪೇಟೆಯಲ್ಲಿ ಸೋಮವಾರದ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಬೆಲೆ 82 ಪೈಸೆಗಳಷ್ಟು ಕಡಿಮೆಯಾಯಿತು. ಒಂದು ಡಾಲರ್‌ಗೆ ₨66.65ರಂತೆ ವಿನಿಮಯಗೊಂಡಿತು. ಇದು ಈ ವರ್ಷದಲ್ಲಿ ಒಂದು ದಿನದಲ್ಲಿ ರೂಪಾಯಿ ಕಂಡ ಗರಿಷ್ಠ ಪತನವಾಗಿದೆ.

ಸೋಮವಾರ ಒಂದು ಹಂತದಲ್ಲಿ ಡಾಲರ್‌ಗೆ ರೂಪಾಯಿ ವಿನಿಮಯ ಮೌಲ್ಯ ₨66.74ರವರೆಗೂ ಕುಸಿದಿತ್ತು.

ಚೀನಾದಲ್ಲಿ ಯುವಾನ್ ಮೌಲ್ಯವನ್ನು ತಗ್ಗಿಸಿರುವುದು ಭಾರತದ ರೂಪಾಯಿ ಮೌಲ್ಯದ ಮೇಲೆಯೂ ಪರಿಣಾಮ ಬೀರಿದೆ. ಯುವಾನ್ ಅಪಮೌಲ್ಯಗೊಂಡ ನಂತರದ ಎರಡು ವಾರಗಳಲ್ಲಿ ರೂಪಾಯಿಯೂ 202 ಪೈಸೆಗಳಷ್ಟು ಬೆಲೆ ಕಳೆದುಕೊಂಡಿದೆ.

ಆಮದುದಾರರು ಮತ್ತು ದೊಡ್ಡ ಬ್ಯಾಂಕ್‌ಗಳಿಂದ ಡಾಲರ್‌ಗೆ ಭಾರಿ ಬೇಡಿಕೆ ಬಂದಿದ್ದರಿಂದಲೂ ಅಮೆರಿಕದ ಕರೆನ್ಸಿ ಬೆಲೆ ಏರುತ್ತಾ ಹೋಯಿತು. ಹಲವು ದೇಶಗಳಲ್ಲಿ ಅಮೆರಿಕದ ಡಾಲರ್ ಸಹ ಸೋಮವಾರ ಸಾಕಷ್ಟು ಬೆಲೆ ಕಳೆದುಕೊಂಡಿತು. ಆದರೆ, ಭಾರತದಲ್ಲಿ ಮಾತ್ರ ಅದರ ಮೌಲ್ಯ ಹೆಚ್ಚೇ ಆಯಿತು.

ಷೇರುಪೇಟೆ ಕುಸಿತ, ರೂಪಾಯಿ ಮೌಲ್ಯ ನಷ್ಟ ಕಂಡು ಆತಂಕ ಪಡಬೇಕಾದ ಅಗತ್ಯವಿಲ್ಲ. ದೇಶದ ಅರ್ಥ ವ್ಯವಸ್ಥೆ ಬಲಿಷ್ಠ ತಳಹದಿ ಮೇಲೆ ನಿಂತಿದೆ.
-ರಘುರಾಂ ರಾಜನ್, ಆರ್‌ಬಿಐ ಗವರ್ನರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.