ಮುಂಬೈ(ಪಿಟಿಐ): ಭಾರತ 2014 ರಲ್ಲಿ ಶೇ 5.4ರಷ್ಟು ಆರ್ಥಿಕ ಪ್ರಗತಿ ದಾಖಲಿಸಲಿದೆ ಎಂದು ಅಂತರ ರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂ ಎಫ್) ಭವಿಷ್ಯ ನುಡಿದಿದ್ದನ್ನು ಕೇಳಿ ಬುಧವಾರ ದೇಶದ ಷೇರುಪೇಟೆಯಲ್ಲಿ ಉತ್ಸಾಹ ಮೇರೆ ಮೀರಿತು. ಸೂಚ್ಯಂಕ ಗಳು ಮೇಲೇರಿ ನಿಂತವು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಭಾರಿ ಪ್ರಮಾಣದಲ್ಲಿ ಹಣ ತೊಡಗಿಸಿ ಷೇರುಗಳನ್ನು ಖರೀದಿಸ ಲಾರಂಭಿಸಿದರು. ಇದೂ ಕೂಡ ಷೇರು ಪೇಟೆಯಲ್ಲಿ ಭಾರಿ ಉತ್ತೇಜನ ಉಂಟು ಮಾಡಿತು.

ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್ಇ) ಮತ್ತು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್ಎಸ್ಇ) ಸೂಚ್ಯಂಕಗಳೆರಡೂ ಮತ್ತೊಮ್ಮೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿ ಹೂಡಿಕೆದಾರರಲ್ಲಿ ಹರ್ಷದ ಹೊನಲು ಹರಿಯುವಂತೆ ಮಾಡಿದವು.

‘ಬಿಎಸ್ಇ’ ದಿನದ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 358.89 ಅಂಶಗಳ ಏರಿಕೆ ದಾಖಲಿಸಿ 22,702 ಅಂಶಗಳ ಗರಿಷ್ಠ ಮಟ್ಟಕ್ಕೇರಿತು. ‘ಎಫ್ಐಐ’ಗಳ ಖರೀದಿ ಭರಾಟೆಯ ಪರಿಣಾಮವಾಗಿ ದಿನದ ಒಂದು ಹಂತದಲ್ಲಿ ಸೂಚ್ಯಂಕ 22,740 ಅಂಶಗಳವರೆಗೂ ಏರಿಕೆ ಕಂಡಿತ್ತು ಎಂಬುದು ಗಮನಾರ್ಹ. ಮಾ. 7ರ ನಂತರ ಈಗಿನದೇ ಅತ್ಯಂತ ಗರಿಷ್ಠ ಪ್ರಮಾಣದ ಸೂಚ್ಯಂಕ ಹೆಚ್ಚಳ ವಾಗಿದೆ.

ಸನ್ಫಾರ್ಮಾ ಶೇ 6.91
ಸನ್ಫಾರ್ಮಾ ಕಂಪೆನಿಯು ರ್್ಯಾನ್ ಬಕ್ಸಿ ವಶವಾದ ನಂತರ ಅದರ ಷೇರುಗ ಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಬಂದಿದೆ. ಸನ್ಫಾರ್ಮಾ ಷೇರುಗಳು ಬುಧವಾರ ಶೇ 6.91ರಷ್ಟು ಗರಿಷ್ಠ ಪ್ರಮಾಣದಲ್ಲಿ ಮೌಲ್ಯ ಹೆಚ್ಚಿಸಿಕೊಂಡವು.

ಬ್ಯಾಂಕಿಂಗ್ ವಲಯದ ಷೇರುಗ ಳಲ್ಲೂ ಉತ್ತಮ ಸಾಧನೆ ಕಂಡು ಬಂದಿತು. ಆಕ್ಸಿಸ್ ಬ್ಯಾಂಕ್ ಷೇರು ಶೇ 4.44ರಷ್ಟು ಮೌಲ್ಯ ಹೆಚ್ಚಿಸಿಕೊಂಡಿತು. ಐಸಿಐಸಿಐ ಬ್ಯಾಂಕ್ ಶೇ 4.18ರಷ್ಟು, ಎಸ್ಬಿಐ ಶೇ 3.23 ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಷೇರು ಶೇ 2.61ರಷ್ಟು ಬೆಲೆ ಹೆಚ್ಚಿಸಿಕೊಂಡವು.

ನಿಫ್ಟಿ ದಾಖಲೆ
ಇನ್ನೊಂದೆಡೆ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್ಎಸ್ಇ) ‘ನಿಫ್ಟಿ’ ಸಹ ದಿನದ ವಹಿವಾಟಿನಲ್ಲಿ 101.15 ಅಂಶಗಳ ಉತ್ತಮ ಏರಿಕೆ ದಾಖಲಿಸಿತು. ಆ ಮೂಲಕ 6,796.20 ಅಂಶಗಳಿಗೇರಿತು. ವಹಿ ವಾಟಿನ ಒಂದು ಘಟ್ಟದಲ್ಲಿ ನಿಫ್ಟಿ 6,808.70 ಅಂಶಗಳವರೆಗೂ ಏರಿಹೋಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.