ಮುಂಬೈ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಮತ್ತು ರಾಷ್ಟ್ರೀಯ ಷೇರು ಸೂಚ್ಯಂಕ ‘ನಿಫ್ಟಿ’ (ಎನ್‌ಎಸ್‌ಇ) ಶುಕ್ರವಾರದ ವಹಿವಾಟಿನಲ್ಲಿ ಹೊಸ ಸಾರ್ವಕಾಲಿಕ ದಾಖಲೆ ನಿರ್ಮಿಸಿವೆ.

ಬಿಎಸ್‌ಇ ಸೂಚ್ಯಂಕ 519 ಅಂಶಗಳಷ್ಟು ಭಾರಿ ಏರಿಕೆ ಕಂಡಿದ್ದು 27,865 ಅಂಶಗಳ ಗಡಿ ದಾಟಿದೆ. ‘ನಿಫ್ಟಿ’ ಕೂಡ 153 ಅಂಶಗಳಷ್ಟು ಜಿಗಿತ ಕಂಡು 8,322 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿದೆ.

ಕೇಂದ್ರ ಸರ್ಕಾರದ ಆರ್ಥಿಕ ಸುಧಾರಣಾ ಕ್ರಮಗಳ ಹಿನ್ನೆಲೆಯಲ್ಲಿ, ಷೇರುಪೇಟೆಗೆ ಹರಿದುಬರುತ್ತಿರುವ ವಿದೇಶಿ ಹೂಡಿಕೆ ಹೆಚ್ಚಿದೆ. ಸೂಚ್ಯಂಕ ದಿಢೀರ್ ಜಿಗಿತಕ್ಕೆ ಇದು ಪ್ರಮುಖ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಬಿಎಸ್‌ಇ ಸೂಚ್ಯಂಕ ಹಿಂದಿನ ಮೂರು ವಹಿವಾಟು ಅವಧಿಗಳಲ್ಲಿ ಒಟ್ಟು 593 ಅಂಶಗಳಷ್ಟು ಏರಿಕೆ ಕಂಡಿರುವುದು ಗಮನೀಯ. ಮಾರುತಿ ಸುಜುಕಿ ಷೇರು ಮೌಲ್ಯ ಶುಕ್ರವಾರ ಬೆಳಿಗ್ಗೆ ಶೇ 0.40ರಷ್ಟು ಏರಿಕೆ ಕಂಡಿದ್ದು ರೂ 3,255 ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.