‘ಸೆಲ್ಫೀ’ ಮೆಚ್ಚದ, ‘ಸೆಲ್ಫೀ’ಗೆ ಮುಖತೋರದ ತರುಣ ತರುಣಿಯರಿರುವರೇ? ಸೆಲ್‌ಫೋನ್ ಹಿಡಿದವರೆಲ್ಲ ‘ಸೆಲ್ಫೀ’ ಕೋವಿದರೇ! ಯುವ ತಲೆಮಾರಿನ ಪ್ರದರ್ಶನ ಪ್ರಿಯತೆ ಹಾಗೂ ಜೀವನಪ್ರೀತಿಯನ್ನು ಅಭಿವ್ಯಕ್ತಿಸುವಂತಿರುವ ‘ಸೆಲ್ಫೀ’ಗಳು ಈ ತಲೆಮಾರಿನ ಸ್ಥಿತ್ಯಂತರಗಳನ್ನೂ ಹೇಳುವಂತಿವೆ. ಜಾಗತೀಕರಣ, ಉದಾರೀಕರಣ, ಮಾಹಿತಿ ತಂತ್ರಜ್ಞಾನ– ಹೀಗೆ, ವಿವಿಧ ರೀತಿಗಳಲ್ಲಿ ಗುರ್ತಿಸಿಕೊಳ್ಳುವ ವರ್ತಮಾನದ ಕಾಲಘಟ್ಟ ‘ಸೆಲ್ಫೀ ಯುಗ’ವೂ ಹೌದು.

ನೆಚ್ಚಿನ ನಟನಟಿಯರೋ ಕ್ರಿಕೆಟ್ ತಾರೆಗಳೋ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಾಗ, ಅವರ ಹಸ್ತಾಕ್ಷರ ಪಡೆಯಲು ಅಭಿಮಾನಿಗಳು ಮುಗಿಬೀಳುತ್ತಿದ್ದ ದೃಶ್ಯಗಳು ಈಗ ಹಳತಾಗಿವೆ. ಈಗಲೂ ತಾರೆಗಳನ್ನು ಕಂಡರೆ ಅಭಿಮಾನಿಗಳು ಪುಳಕಗೊಂಡು ಮುತ್ತಿಗೆ ಹಾಕುತ್ತಾರೆ, ಆದರೆ ಹಸ್ತಾಕ್ಷರಕ್ಕಾಗಿ ಪೀಡಿಸುವುದಿಲ್ಲ. ಹಾಗೆಂದು, ಈ ತಲೆಮಾರಿನ ಸೆಲೆಬ್ರಿಟಿಗಳು ಅನಕ್ಷರಸ್ಥರು ಎಂದರ್ಥವಲ್ಲ. ಹೆಬ್ಬೆಟ್ಟು-ತೋರುಬೆರಳಿನ ಬಾಗು ಬಳಕುವಿಕೆಗಳಿಂದ ನುಸುಳುತ್ತಿ ರುವ ಅಕ್ಷರಗಳು ಪುಸ್ತಕಕ್ಕಿಂತಲೂ ಹೆಚ್ಚು ಡಿಜಿಟಲ್ ಬಿಂಬಗಳಾಗಿ ಚಲಾವಣೆಯಲ್ಲಿರುವ ಈ ದಿನಗಳಲ್ಲಿ, ಅಭಿಮಾನದ ಅಭಿವ್ಯಕ್ತಿಯ ಸ್ವರೂಪವೂ ಬದಲಾಗಿದೆ; ಹಸ್ತಾಕ್ಷರದ ಜಾಗವನ್ನು ‘ಸೆಲ್ಫೀ’ ಆವರಿಸಿಕೊಂಡಿದೆ. ತಮ್ಮ ಇಷ್ಟದ ವ್ಯಕ್ತಿಯ ಜೊತೆ ಮೈಯೆಲ್ಲ ಬಾಯಾಗಿ ಫೋಟೊ ಕ್ಲಿಕ್ಕಿಸಿಕೊಳ್ಳುವ ಈ ‘ಸೆಲ್ಫೀ’ ಜಮಾನದಲ್ಲಿ, ಕಾಲವೆನ್ನುವ ಮಾಯೆ ಕೂಡ ಕ್ಯಾಮೆರಾದಲ್ಲಿ ಸೆರೆಯಾಗುತ್ತಿದೆ.

ತರುಣ ತರುಣಿಯರ ನಡುವೆ ಚಾಲ್ತಿಯಲ್ಲಿರುವ ಅತ್ಯಂತ ಜನಪ್ರಿಯ ಶಬ್ದಗಳಲ್ಲಿ ‘ಸೆಲ್ಫೀ’ಯೂ ಒಂದು. ನೂರಕ್ಕೆ ಮೂವತ್ತಕ್ಕೂ ಹೆಚ್ಚು ‘ಸೆಲ್ಫೀ’ಗಳು ಹದಿನೆಂಟರಿಂದ ಇಪ್ಪತ್ತನಾಲ್ಕರ ಹುಡುಗ ಹುಡುಗಿಯರವು ಎಂದು ‘ಸ್ಯಾಮ್‌ಸಂಗ್’ ಸಮೀಕ್ಷೆ ಲೆಕ್ಕಹಾಕಿದೆ. ಪಕ್ಕದ ಮನೆ ಹುಡುಗಿ ಹುಡುಗನ ‘ಸೆಲ್ಫೀ’ ಮಾತು ಬಿಡಿ: ಕನಸಿನಲ್ಲಿ ಬಂದು ಕಾಡುವ ಪೂನಂ ಪಾಂಡೆಯಂಥ ಕುದಿ ಜವ್ವನೆಯರೂ, ಐವತ್ತಾರು ಇಂಚಿನ ಎದೆಯ ಮೂಲಕ ಆನ್‌ಲೈನ್ ಸಾಕ್ಷರರಲ್ಲಿ ಪುಳಕ–ಹೆಮ್ಮೆ ಮೂಡಿಸುವ ನರೇಂದ್ರ ಮೋದಿ ಅವರಂಥ ನಾಯಕರು ಕೂಡ ‘ಸೆಲ್ಫಿ’ ಮೋಹಿಗಳೇ. ಸೆಲೆಬ್ರಿಟಿಗಳು ತಮ್ಮ ಹಾಜರಿಯನ್ನು ಕ್ಯಾಮೆರಾಗಳಲ್ಲಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಳ್ಳು ತ್ತಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ಸಂದರ್ಭದ ತಮ್ಮ ‘ಸೆಲ್ಫಿ’ಯನ್ನು ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು. ದೆಹಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ‘ಸೆಲ್ಫಿ ವಿಥ್ ನರೇಂದ್ರ ಮೋದಿ’ ಎನ್ನುವ ಆಂದೋಲನದ ಮೂಲಕ ಯುವಜನರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸಿತ್ತು. ಇದಕ್ಕೆಂದೇ ರೂಪಿಸಲಾಗಿದ್ದ ವಿಶೇಷ ಬೂತ್‌ಗಳಲ್ಲಿ, ‘ವರ್ಚುಯಲ್ ಮೋದಿ’ ಅವರೊಂದಿಗೆ ಆಸಕ್ತರು ತಮ್ಮ ಸೆಲ್ಫಿಯನ್ನು ಕ್ಲಿಕ್ಕಿಸಿಕೊಳ್ಳಬಹುದಿತ್ತು. ಪೂನಂ ಪಾಂಡೆ ಅವರಂಥ ನಟೀಮಣಿಯರಂತೂ ಬಚ್ಚಲಲ್ಲಿ – ಕನ್ನಡಿಯೆದುರು ಬೆತ್ತಲಾಗಿ, ತಮ್ಮನ್ನು ತಾವೇ ಮೋಹಿಸಿಕೊಂಡು, ಏಕಾಂತದ ಆ ಕ್ಷಣಗಳನ್ನು ‘ಸೆಲ್ಫಿ’ಗಳ ಮೂಲಕ ಅಭಿಮಾನಿಗಳ ಮುಂದಿರಿಸಿ ಸುದ್ದಿಯಾಗುವುದಿದೆ. ಪಟ್ಟಣ–ನಗರಗಳ ಮೋಟು ಗೋಡೆಗಳು ಹಾಗೂ ಕಟ್ಟಡಗಳ ಬೆನ್ನನ್ನು ಅಲಂಕರಿಸುವ ಸಿನಿಮಾ ಪೋಸ್ಟರುಗಳಂತೆ ಸಾಮಾಜಿಕ ಜಾಲತಾಣಗಳ ಗೋಡೆಗಳ ತುಂಬೆಲ್ಲ ‘ಸೆಲ್ಫಿ’ಗಳ ಚಿತ್ತಾರ. ಪ್ರತಿ ‘ಸೆಲ್ಫಿ’ಗೂ ಹಲವು ಗೆಳೆಯ–ಗೆಳತಿಯರ ಲೈಕು!

ಸೆಲ್ಫೀ ಎನ್ನುವ ದಾಖಲೆ

ಇಷ್ಟಕ್ಕೂ ಏನಿದು ಸೆಲ್ಫಿ? ರಾತ್ರಿ ಮಲಗುವ ಮುನ್ನ ದಿನಚರಿ ಬರೆದಿಡುವ ರೂಢಿ ಕೆಲವರದಲ್ಲವೇ? ದೈನಿಕದ ಬಹುಮುಖ್ಯ ಘಟನಾವಳಿಗಳನ್ನು ‘ದಿನಚರಿ ಪುಸ್ತಕ’ದಲ್ಲಿ ದಾಖಲಿಸಲಾಗುತ್ತದೆ. ‘ಸೆಲ್ಫಿ’ ಕೂಡ ಇಂಥ ದಾಖಲೆಯೇ. ಡೈರಿಯಲ್ಲಿ ನೆನಪುಗಳು ಅಕ್ಷರ ರೂಪದಲ್ಲಿ ದಾಖಲಾದರೆ, ‘ಸೆಲ್ಫಿ’ ಚಿತ್ರರೂಪದಲ್ಲಿ ದಾಖಲಿಸುತ್ತದೆ. ಈ ಅರ್ಥದಲ್ಲಿ ‘ಸೆಲ್ಫಿ’ಯ ಮೂಲ ‘ಡೈರಿ’ಯಲ್ಲಿ ಇದೆ ಎನ್ನಬಹುದು. ಆದರೆ, ಸೆಲ್ಫಿಗೂ ಡೈರಿಗೂ ಸೂಕ್ಷ್ಮವಾದ ವ್ಯತ್ಯಾಸವೊಂದಿದೆ. ಸಾಮಾನ್ಯವಾಗಿ ದಿನಚರಿ ಪುಸ್ತಕದಲ್ಲಿ ದಾಖಲೆಗಳು ಹೆಚ್ಚು ಪ್ರಾಮಾಣಿಕವಾಗಿರುತ್ತವೆ. ಅಳು–ನಗು, ವಿಷಾದ–ವಿರಸ, ಸೋಲು–ಗೆಲುವು, ಹೀಗೆ ಬದುಕಿನ ಹಲವು ಆಯಾಮಗಳು ‘ಡೈರಿ’ಯ ಪುಟಗಳಲ್ಲಿ ನೆನಪಿನ ನವಿಲುಗರಿಗಳಂತೆ ಸೇರಿಕೊಳ್ಳುತ್ತವೆ. ಆದರೆ, ‘ಸೆಲ್ಫಿ’ಯದು ಸಂಭ್ರಮದ ಮುಖ. ಅಲ್ಲಿ ನಗುಮುಖಗಳೇ ಹೆಚ್ಚು. ಬಹುಪಾಲು ಸೆಲ್ಫಿಗಳಲ್ಲಿನ ನಗು ಕೂಡ ಕೃತಕವಾದುದು. ಜೀವನವನ್ನು ಒಂದು ‘ಸಂಭ್ರಮ’ದ ರೂಪದಲ್ಲಿ ಕಾಣುವ ಮನೋಧರ್ಮ ಚಾಲ್ತಿಯಲ್ಲಿರುವ ಕಾಲದ ಸೃಷ್ಟಿ ಈ ‘ಸೆಲ್ಫಿ’ಗಳು.

ಸೆಲ್ಫೀಗಳ ಹಿನ್ನೆಲೆಯಲ್ಲಿ ಕಲಾವಿದರ ಸ್ವಭಾವ ಚಿತ್ರಗಳನ್ನೂ (ಸೆಲ್ಫ್ ಪೋರ್ಟ್ರಿಟ್) ಗಮನಿಸಬೇಕು. ಲಿಯಾನಾರ್ಡೊ ಡಾವಿಂಚಿ, ವ್ಯಾನ್‌ಗೋ, ಪಿಕಾಸೊ, ಮುಂತಾದ ಘಟಾನುಘಟಿ ಕಲಾವಿದರೆಲ್ಲ ತಮ್ಮ ಪೋರ್ಟ್ರಿಟ್‌ಗಳನ್ನು ಬರೆದುಕೊಂಡವರೇ. ಬರಹಗಾರರ ಪಾಲಿಗಂತೂ ಅವರ ಕೃತಿಗಳೇ ಸೆಲ್ಫೀಗಳು. ಹಾಗೆ ನೋಡುವು ದಾದರೆ, ಸೆಲ್ಫೀಯ ಪರಿಕಲ್ಪನೆ ನಮ್ಮ ದೇಹದ ನೆರಳುಗಳಲ್ಲೇ ಇದೆ.

ಕೋತಿಯ ಸೆಲ್ಫೀಗಳು!

2011ರಲ್ಲಿ ವೈಲ್ಡ್‌ಲೈಫ್ ಛಾಯಾಗ್ರಾಹಕರೊಬ್ಬರ ಕ್ಯಾಮೆರಾವನ್ನು ಹೆಣ್ಣು ಕೋತಿಯೊಂದು (Black Macaque) ಕಸಿದುಕೊಂಡಿತು. ನಂತರ ಆ ಕ್ಯಾಮೆರಾ ದೊರೆತಾಗ, ಅದರಲ್ಲಿ ಆ ಹೆಣ್ಣು ಕೋತಿಯ ನೂರಾರು ಸೆಲ್ಫೀಗಳಿದ್ದವು. ಆ ಚಿತ್ರಗಳ ಹಕ್ಕುಸ್ವಾಮ್ಯದ ಕುರಿತಂತೆ ಚರ್ಚೆಗಳು ಕೂಡ ನಡೆದವು.

ಆ ನೆರಳುಗಳನ್ನು ನೇವರಿಸಲು, ಮುದ್ದು ಮಾಡಲು ಅಥವಾ ತುಳಿಯಲು ನಾವೆಲ್ಲರೂ ಪ್ರಯತ್ನಿಸಿದವರೇ. ಮರಳ ಮಡಕೆಯಲ್ಲಿ ನೀರು ತರಲು ಹೋದ ಅಹಲ್ಯೆ, ಹೊಳೆಕನ್ನಡಿಯಲ್ಲಿ ಗಂಧರ್ವರ ಮಿಲನದ ಬಿಂಬ ಕಂಡು, ಆ ನೆರಳುಗಳಲ್ಲಿ ತಾನು ಹಾಗೂ ತನ್ನ ಪತಿ ಜಮದಗ್ನಿಯನ್ನು ಕಲ್ಪಿಸಿಕೊಂಡಿದ್ದೂ ಒಂದು ಸೆಲ್ಫೀಯಲ್ಲವೇ? ಪರವಶಳಾಗಿ ಪತಿಯ ಆಗ್ರಹಕ್ಕೆ ತುತ್ತಾದ ಅಹಲ್ಯೆಯ ಮಾತು ಬಿಡಿ; ನೀರಿನಲ್ಲೋ ಕನ್ನಡಿಯಲ್ಲೋ ತನ್ನನ್ನು ತಾನು ನೋಡಿಕೊಂಡು ಮೋಹಗೊಳ್ಳುವ ರಾಜಕುವರಿಯರು, ದೇವಕನ್ನಿಕೆಯರ ಕಥೆಗಳು ನಮ್ಮಲ್ಲಿ ಎಷ್ಟಿಲ್ಲ? ಬೇಲೂರಿನ ದೇಗುಲದ ‘ದರ್ಪಣ ಸುಂದರಿ’ ಗಿಂತಲೂ ಸೆಲ್ಫೀಗೆ ಇನ್ನೊಂದು ಉದಾಹರಣೆ ಬೇಕೆ? ಮಂಗಳ ಗ್ರಹದಲ್ಲಿ ಅಧ್ಯಯನ ವಿಹಾರ ನಡೆಸುತ್ತಿರುವ ‘ನಾಸಾ’ದ ‘ಕ್ಯೂರಿಯಾಸಿಟಿ ರೋವರ್’ ಗಗನನೌಕೆ ಕಳೆದ ಫೆಬ್ರುವರಿಯಲ್ಲಿ ಕೆಂಪು ಗ್ರಹದ ಮೇಲೆ ಕ್ಲಿಕ್ಕಿಸಿಕೊಂಡ ‘ಸೆಲ್ಫೀ’ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ಬಯಲುಗೊಳ್ಳುವ ಹಂಬಲ
ಇತಿಹಾಸ – ಪುರಾಣಗಳಲ್ಲಿ ಸ್ವಭಾವಚಿತ್ರಗಳ ನೆರಳನ್ನು ಹುಡುಕ ಬಹುದಾದರೂ ವರ್ತಮಾನದ ‘ಸೆಲ್ಫೀ’ ಮೊಬೈಲ್ ಫೋನ್‌ನ ಕ್ಯಾಮೆರಾದೊಂದಿಗೆ ತಳಕು ಹಾಕಿಕೊಂಡಿರುವಂತ ಹದ್ದು. ನಮ್ಮೊಂದಿಗೇ ಸಂಚರಿಸುವ ಮೊಬೈಲ್ ಫೋನ್, ವ್ಯಕ್ತಿಯ ಖಾಸಗೀತನವನ್ನು ಅಣಕ ಮಾಡುವಂತಹದ್ದು. ‘ಸೆಲ್ಫೀ’ ಕೂಡ ಅಷ್ಟೇ– ಅದೊಂದು ಖಾಸಗಿ ಚಿತ್ರ; ಆದರೆ, ಸಾರ್ವಜನಿಕಗೊಳ್ಳಲು ಬಯಸುವ ಚಿತ್ರ! ‘ಸ್ವಭಾವಚಿತ್ರ’ ಎಂದು ‘ಸೆಲ್ಫೀ’ಯನ್ನು ಗುರ್ತಿಸಲಾಗುತ್ತದಾದರೂ ಅದಕ್ಕೂ ಮಿಗಿಲಾಗಿ ಅದು ನಮ್ಮ ಮನಸ್ಸಿನ ಅಥವಾ ಈ ಹೊತ್ತಿನ ಸಮಾಜದ ಚಹರೆಗಳನ್ನು ಸೂಚಿಸುವಂತಿದೆ. ಸಮೂಹ ಪ್ರಜ್ಞೆಯಿಂದ ಸ್ವಪ್ರಜ್ಞೆಯತ್ತ ಮನುಷ್ಯ ವಾಲುತ್ತಿರುವುದನ್ನು ಈ ಸೆಲ್ಫೀ ಸೂಚಿಸುವಂತಿದೆ. ಮೊದಲೆಲ್ಲ ಗ್ರೂಪ್ ಫೋಟೊಗಳು ಮನೆಗಳ ಗೋಡೆಗಳನ್ನು ಅಲಂಕರಿಸು ತ್ತಿದ್ದವು. ಈಗ ಸೆಲ್ಫೀಗಳ ದೆಸೆಯಿಂದಾಗಿ ಕೋಟು–ಪೇಟ, ರೇಷ್ಮೆ ಸೀರೆ–ಕಾಸಿನ ಸರಗಳಲ್ಲಿ ಕಂಗೊಳಿಸುವ ಯಜಮಾನ ಯಜಮಾನತಿ ಯರ ಚಿತ್ರಪಟಗಳೆಲ್ಲ ಆಲ್ಬಂ ಸೇರಿವೆ. ಮನುಷ್ಯರ ಮಾತಿರಲಿ, ಆಧುನಿಕ ಮನೆಗಳ ಪೂಜಾಕೋಣೆಗಳಲ್ಲಿ ಇಣುಕಿ ನೋಡಿದರೆ, ಅಲ್ಲಿದ್ದ ಮುಕ್ಕೋಟಿ ದೇವರುಗಳ ಪ್ರತಿನಿಧಿಗಳೆಲ್ಲ ದಿಕ್ಕಾಪಾಲಾಗಿ ಒಬ್ಬರೋ ಒಬ್ಬರೋ ದೇವರುಗಳು ಉಳಿದುಕೊಂಡಿದ್ದಾರೆ.

ಸೆಲ್ಫೀಯ ಜಾಡು ಹಿಡಿದು...

ಮೊದಲ ಸೆಲ್ಫೀ ಎಂದು ಅಧಿಕೃತವಾಗಿ ಗುರ್ತಿಸುವುದು 1839ರಲ್ಲಿ ರಾಬರ್ಟ್ ಕಾರ್ನೆಲಿಯಸ್ ಎನ್ನುವ ಅಮೆರಿಕನ್ ಕ್ಲಿಕ್ಕಿಸಿಕೊಂಡ ತನ್ನದೇ ಛಾಯಾಚಿತ್ರವನ್ನು. ಬೆಳ್ಳಿ ಲೇಪನದ ತಾಮ್ರದ ತಗಡಿನ ಮೇಲೆ ಪಾದರಸದ ಆವಿಯನ್ನು ಬಳಸಿಕೊಂಡು ಛಾಯಾಚಿತ್ರ ತೆಗೆಯುವ ‘ಡಗೆರೊಟೈಪ್’ ಎನ್ನುವ ತಂತ್ರಜ್ಞಾನವನ್ನು ಬಳಸಿ ನೂರಾ ಎಪ್ಪತ್ತೈದು ವರ್ಷಗಳ ಹಿಂದೆ ರಾಬರ್ಟ್ ತಯಾರಿಸಿದ ಈ ಫೋಟೊ, ಛಾಯಾಗ್ರಹಣ ಚರಿತ್ರೆಯ ಐತಿಹಾಸಿಕ ಕ್ಷಣಗಳಲ್ಲೊಂದು. 1900ರಲ್ಲಿ ಕೊಡಾಕ್ ಸಂಸ್ಥೆ ‘ಕೊಡಾಕ್ ಬ್ರೌನಿ’ ಎನ್ನುವ ಕ್ಯಾಮೆರಾ ಸ್ವಭಾವ ಚಿತ್ರಗಳ ತಯಾರಿಕೆಗೆ ಹೇಳಿಮಾಡಿಸಿದಂತಿತ್ತು. ‘ಆಸ್ಟ್ರೇಲಿಯನ್ ಇಂಟರ್ನೆಟ್ ಫೋರಂ’ನಲ್ಲಿ ‘ಸೆಲ್ಫೀ’ ಎನ್ನುವ ಪದ 2002ರಲ್ಲಿ ಬಳಕೆಯಾಯಿತು. ಹೀಗೆ ಜನಪ್ರಿಯಗೊಳ್ಳುತ್ತ ಬಂದ ‘ಸೆಲ್ಫೀ’ಯನ್ನು 2012ರಲ್ಲಿ ವರ್ಷದ 10 ಜನಪ್ರಿಯ ಶಬ್ದಗಳಲ್ಲೊಂದಾಗಿ ‘ಟೈಮ್’ ನಿಯತಕಾಲಿಕೆ ಗುರ್ತಿಸಿತು. ಮರು ವರ್ಷ ಆಕ್ಸ್‌ಫರ್ಡ್ ಇಂಗ್ಲಿಷ್ ಶಬ್ದಕೋಶದ ಅಂತರ್ಜಾಲ ಆವೃತ್ತಿಯಲ್ಲಿ ಸೇರ್ಪಡೆಯಾದ ಸೆಲ್ಫೀ, 2013ರ ಅತ್ಯಂತ ಜನಪ್ರಿಯ ಪದ ಎನ್ನಿಸಿಕೊಂಡಿತು.

‘ಸೆಲ್ಫಿ’ಗಳೊಂದಿಗಿನ ನಗುವಿನ ಎಳೆಗಳನ್ನು ಮತ್ತಷ್ಟು ಹಿಂಜಿ ನೋಡಬಹುದು. ನಗು ಇಲ್ಲದ ಸೆಲ್ಫೀ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಹಾಗೆ ನೋಡಿದರೆ ಫೋಟೊಗಳಿಗೂ ನಗುವಿಗೂ ಜನ್ಮ ಜನ್ಮಾಂತರದ ನಂಟಿರುವಂತಿದೆ. ಕ್ಯಾಮೆರಾ ಕಣ್ಣಿಗೆ ಎದುರಾದರೆ ಸಾಕು, ಎದುರಿನವರ ಮೋರೆಗಳಲ್ಲಿ ನಗು ಕಾಣಿಸಿಕೊಳ್ಳುತ್ತದೆ. ಹೆಣ್ಣುಮಕ್ಕಳಾದರಂತೂ ಮುಗಿದೇ ಹೋಯಿತು. ಮುಖದ ಆ ತುದಿಯಿಂದ ಈ ತುದಿಗೆ ತುಟಿಗಳು ಅರಳಿಕೊಂಡು ತುಟಿರಂಗಿನ ಜೊತೆ ಹಲ್ಲುಗಳ ಬಿಳುಪು ಸ್ಪರ್ಧಿಸುತ್ತದೆ. ‘ಸುಮ್ ಸುಮ್ನೆ’ ನಗ್ತಾಳೆ ಎನ್ನುವ ಉಪೇಂದ್ರರ ‘ಎ’ ಸಿನಿಮಾದ ಹಾಡು ಸೆಲ್ಫೀ ಸುಂದರಿಯರನ್ನೇ ಉದ್ದೇಶಿಸಿದಂತಿದೆ. ಮಾತಿಗೆ ಮೊದಲು ನಗು ತುಳುಕಿಸುವ ಹುಡುಗಿಯರಿಗೆ, ಕ್ಯಾಮೆರಾದ ಎದುರು ನಿಂತೊಡನೆಯೇ ಮುಖದಲ್ಲಿ ನಗೆಬಿಲ್ಲು ಅರಳಿಬಿಡುತ್ತದೆ. ಹೆಚ್ಚು ನಗುವ ಹುಡುಗಿಯರನ್ನು ‘ಗಂಡುಬೀರಿಗಳು’, ‘ಚೆಲ್ಲು’ ಎಂದು ಈಗ ಹೇಳುವಂತಿಲ್ಲ. ನಗು ಎನ್ನುವುದೀಗ ಸೌಂದರ್ಯದ ಸಂಕೇತ, ಆತ್ಮವಿಶ್ವಾಸದ ರೂಪಕ.

ಪ್ರದರ್ಶನ ಪ್ರಿಯತೆಯ ಅಭಿವ್ಯಕ್ತಿ
ಕ್ಯಾಮೆರಾ ಬಗೆಗಿನ ನಮ್ಮ ಮೋಹ ಅಥವಾ ಎಚ್ಚರದ ಸ್ಥಿತಿ ಈ ಕಾಲಕ್ಕಷ್ಟೇ ವಿಶೇಷವಾದ ಲಕ್ಷಣವಲ್ಲ. ಕ್ಯಾಮೆರಾ ಕಣ್ಣು ಮಿಟುಕಿಸತೊಡಗಿದ ಕ್ಷಣದಿಂದಲೇ ನಮ್ಮ ಕಣ್ಣರೆಪ್ಪೆಗಳ ಮಿಟುಕಾಟದ ಮೇಲೊಂದು ಹತೋಟಿ ಶುರುವಾಯಿತೆನ್ನಿಸುತ್ತದೆ. ಈ ಕ್ಯಾಮೆರಾ ಮೋಹಕ್ಕೆ ಒಳ್ಳೆಯ ಉದಾಹರಣೆ– ವರನಟ ರಾಜಕುಮಾರ್ ನಾಯಕನಟರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ‘ಬೇಡರ ಕಣ್ಣಪ್ಪ’ ಸಿನಿಮಾದ ಕ್ಲೈಮ್ಯಾಕ್ಸ್. ಈ ಸನ್ನಿವೇಶದ ಫೋಟೊ ಗಮನಿಸಿ: ಕಣ್ಣಪ್ಪನ ಭಕ್ತಿಗೆ ಮಾರುಹೋಗಿ ಪಾರ್ವತಿ ಸಮೇತನಾಗಿ ಶಿವ ಪ್ರತ್ಯಕ್ಷನಾಗಿದ್ದಾನೆ. ಕಣ್ಣಪ್ಪ ಭಕ್ತಿಪರವಶತೆಯಿಂದ ಶಿವನ ಕಾಲಿಗೆರಗಿದ್ದಾನೆ. ಭಕ್ತ ಕಾಲಿಗೆ ಎರಗಿದಾಗ ದೇವರ ಕಣ್ಣು ಭಕ್ತನತ್ತ ಇರಬೇಕಲ್ಲವೇ? ಫೋಟೊದಲ್ಲಿನ ಶಿವ ಕಣ್ಣಪ್ಪನನ್ನು ನೋಡುವು ದರ ಬದಲಾಗಿ ಎದುರಿನ ಶೂನ್ಯದತ್ತ ದೃಷ್ಟಿ ಹರಿಸಿದ್ದಾನೆ. ಚಿತ್ರದಲ್ಲಿ ಕಾಣಿಸದ ಆ ಶೂನ್ಯವೇ ಕ್ಯಾಮೆರಾ! ದೈವವನ್ನೇ ಸೆಳೆಯುತ್ತದೆಂದರೆ ಕ್ಯಾಮೆರಾದ ಚುಂಬಕಶಕ್ತಿ ಇನ್ನೆಷ್ಟು ಶಕ್ತಿಯುತವಾಗಿರಬೇಕು?

ಅಂದಹಾಗೆ, ಒಂದು ‘ಸೆಲ್ಫೀ’ ಹೇಗೆ ರೂಪುಗೊಳ್ಳುತ್ತದೆ. ಭುಜದ ನೇರಕ್ಕೆ ಕ್ಯಾಮೆರಾ– ಸಾಮಾನ್ಯವಾಗಿ ಮೊಬೈಲ್ ಫೋನ್ ಕ್ಯಾಮೆರಾವನ್ನು– ಹಿಡಿದುಕೊಂಡು ನಮ್ಮನ್ನು ನಾವೇ ಕ್ಲಿಕ್ಕಿಸಿಕೊಳ್ಳುವ ಮೂಲಕ ‘ಸೆಲ್ಫೀ’ ರೂಪುಗೊಳ್ಳುತ್ತದೆ.

ಹೀಗೆ ಭುಜಬಲ ಪರಾಕ್ರಮದೊಂದಿಗೆ ಕ್ಲಿಕ್ ಕ್ಲಿಕ್ಕೆಂದು ತಯಾರಾಗುವ ಛಾಯಾಚಿತ್ರಗಳು ಫೇಸ್‌ಬುಕ್ ಗೋಡೆಯ ಮೇಲೋ ಟ್ವಿಟ್ಟರ್ ಅಂಗಳದಲ್ಲೋ ಪ್ರದರ್ಶನಗೊಳ್ಳುತ್ತವೆ. ಇದೊಂದು ರೀತಿ ನಮ್ಮನ್ನು ನಾವು ಪ್ರದರ್ಶನಕ್ಕೆ ಒಡ್ಡಿಕೊಳ್ಳುವ ಬಗೆ. ಈ ಪ್ರದರ್ಶನ ಪ್ರಿಯತೆ ದುರಂತದಲ್ಲಿ ಕೊನೆಗೊಂಡ ಉದಾಹರಣೆಗಳೂ ಇಲ್ಲದಿಲ್ಲ. ರೋಚಕವಾದ ಸೆಲ್ಫೀಗಳನ್ನು ತೆಗೆಯುವ ಯುವಜನರ ಉತ್ಸಾಹ ಅವರ ಪ್ರಾಣಕ್ಕೇ ಎರವಾದ ಸಚಿತ್ರ ಉದಾಹರಣೆಗಳು ಅಂತರ್ಜಾಲದಲ್ಲಿ ಸಾಕಷ್ಟಿವೆ.

‘ಸೆಲ್ಫೀ’ಗಳ ಜನಪ್ರಿಯತೆ ಹಾಗೂ ವ್ಯಾಪಕತೆ ಎಷ್ಟು ಪ್ರಖರವಾಗಿದೆಯೆಂದರೆ, ಈ ಹೊತ್ತಿನ ಕಾಲಸಂದರ್ಭವನ್ನೇ ‘ಸೆಲ್ಫೀಯುಗ’ ಎನ್ನ ಬಹುದು. ಇದು ಆಧುನಿಕತೆಯ, ಜೀವನ ಪ್ರೀತಿಯ ಹಾಗೂ ಪ್ರದರ್ಶನ ಪ್ರಿಯತೆಯ ರೂಪಕ. ಈ ‘ಸೆಲ್ಫೀ’ ಸಂದರ್ಭ ಮನುಷ್ಯನ ಸ್ವಲೋಲುಪತೆ ಹಾಗೂ ವಿಘಟನೆಯ ಕಥನವನ್ನೂ ಒಳಗೊಂಡಿರುವಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.