ಬೆಂಗಳೂರು: ಮುಂದಿನ ತಿಂಗಳು ಕೊನೆ ಭಾನುವಾರ ನಡೆಯಲಿರುವ ‘ಸೈಕಲ್ ದಿನ’ ಕಾರ್ಯಕ್ರಮಕ್ಕೆ ಬಿಬಿಎಂಪಿ ಎಲ್ಲ ಸದಸ್ಯರನ್ನು ಸೈಕಲ್ ಸವಾರಿಗೆ ಕರೆತರಲು ಯತ್ನಿಸುತ್ತೇನೆ ಎಂದು ಮೇಯರ್ ಬಿ.ಎಸ್. ಸತ್ಯನಾರಾಯಣ ಹೇಳಿದರು.

ಕಬ್ಬನ್ ಪಾರ್ಕ್ ಆವರಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಸೈಕಲ್ ದಿನ ಕಾರ್ಯಕ್ರಮದಲ್ಲಿ ಹೊಸ ಸೈಕಲ್ ಸ್ಟ್ಯಾಂಡ್ ಉದ್ಘಾಟಿಸಿ ಅವರು ಮಾತನಾಡಿದರು.

ಸೈಕಲ್ ಸವಾರಿಯನ್ನೂ ಮಾಡಿದ ಮೇಯರ್, ನಗರದಲ್ಲಿ ಸೈಕಲ್ಗಳು ಹೆಚ್ಚಿ ಇತರ ವಾಹನಗಳು ಕಡಿಮೆ ಆದಷ್ಟು ಸಂಚಾರ ಸಮಸ್ಯೆ ತಗ್ಗಲಿದೆ ಎಂದು ಅಭಿಪ್ರಾಯಪಟ್ಟರು.

ಸುಮಾರು 1,200 ಜನ ಸೈಕಲ್ ಸವಾರಿಯಲ್ಲಿ ಪಾಲ್ಗೊಂಡಿದ್ದರು. 5 ಕಿ.ಮೀ.ಯಷ್ಟು ದೂರ ಅವರು ಸೈಕಲ್ ಮೇಲೆ ಪ್ರಯಾಣ ಮಾಡಿದರು. ಕಬ್ಬನ್ ಪಾರ್ಕ್ ಮಾತ್ರವಲ್ಲದೆ ಕಸ್ತೂರಬಾ ರಸ್ತೆ, ನೃಪತುಂಗ ರಸ್ತೆ ಮತ್ತು ಹಡ್ಸನ್ ಸರ್ಕಲ್ಗಳಲ್ಲಿ ಸೈಕಲ್ ಮೆರವಣಿಗೆ ನಡೆಯಿತು.
ಸ್ಥಳದಲ್ಲಿ ನೂರು ಸೈಕಲ್ಗಳನ್ನು ಬಾಡಿಗೆಗೆ ನೀಡಲು ಇಡಲಾಗಿತ್ತು. ಎಲ್ಲ ನೂರು ಸೈಕಲ್ಗಳನ್ನು ಬಾಡಿಗೆಗೆ ಪಡೆಯಲಾಗಿತ್ತು.

ವೋಲ್ವೊ ಬಸ್ಗಳಲ್ಲಿ ಬೆಳಗಿನ 6ರಿಂದ 11ಗಂಟೆವರೆಗೆ ಸೈಕಲ್ಗಳನ್ನು ಒಯ್ಯಲು ಬಿಎಂಟಿಸಿ ಅನುಮತಿ ನೀಡಿತ್ತು. ನಗರದ ದೂರದ ಪ್ರದೇಶಗಳ ಜನ ತಮ್ಮ ಸೈಕಲ್ಗಳನ್ನು ವೋಲ್ವೊ ಬಸ್ಗಳಲ್ಲೇ ತಂದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಸೈಕಲ್ ಸವಾರರಿಗೆ ಅಗತ್ಯವಾದ ಸೌಲಭ್ಯ ಕಲ್ಪಿಸಿಕೊಡಲಾಗುತ್ತದೆ ಎಂದು ಅಧಿಕಾರಿಗಳು ಭರವಸೆ ನೀಡಿದರು.

ಸೈಕಲ್ ಸವಾರಿ ಮಾಡಿಬಂದವರಿಗೆ ಕರ್ನಾಟಕ ಹಾಲು ಒಕ್ಕೂಟದಿಂದ ನಂದಿನಿ ಹಾಲಿನ ಆತಿಥ್ಯವಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.