ಮೈಸೂರು: ಕನ್ನಡ ಭಾಷೆಯ ಅಭಿ ವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ಈ ಹಿಂದೆ ಬಿಡುಗಡೆಯಾಗಿದ್ದ ₹ 2 ಕೋಟಿ ಹಣವನ್ನು ಬಳಸದೆ ವಾಪಸ್ ಕಳುಹಿಸಿ ರುವುದು ಭಾರತೀಯ ಭಾಷಾ ಸಂಸ್ಥಾ ನದ ಅಧಿಕಾರಿಗಳಲ್ಲಿ ದಕ್ಷತೆ ಇಲ್ಲ ಎಂಬು ದಕ್ಕೆ ದ್ಯೋತಕ ಎಂದು ಸಾಹಿತಿ ಡಾ.ದೇ. ಜವರೇಗೌಡ ಚಾಟಿ ಬೀಸಿದರು.

ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಹಾಗೂ ಮೈಸೂರು ವಿಶ್ವ ವಿದ್ಯಾ ಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ಇಲ್ಲಿನ ಭಾರತೀಯ ಭಾಷಾ ಸಂಸ್ಥಾನದ ಸಭಾಂಗಣದಲ್ಲಿ ‘ಕನ್ನಡ ಭಾಷೆ ಸಾಹಿತ್ಯ: ಬಹುಶಿಸ್ತೀಯ ನೆಲೆಗಳು’ ಕುರಿತು ಏರ್ಪಡಿಸಿರುವ 7 ದಿನಗಳ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನೂರಾರು ಒಳ್ಳೆಯ ಕೃತಿಗಳು ಇನ್ನೂ ಭಾಷಾಂತರದ ಭಾಗ್ಯವನ್ನೇ ಕಂಡಿಲ್ಲ. ಕೇಂದ್ರದಿಂದ ಬಿಡುಗಡೆಯಾಗಿದ್ದ ಹಣ ವನ್ನು ಕನಿಷ್ಠ ಭಾಷಾಂತರ ಕಾರ್ಯ ಕ್ಕಾ ದರೂ ಬಳಸಬಹುದಿತ್ತು. ಹಣ ವಾಪಸ್ ಹೋಗಿರುವ ಕುರಿತು ನನಗಿನ್ನೂ ಕೋಪ ವಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.