ಬೆಂಗಳೂರು: ಹಿರಿಯ ನಟ ಎಚ್.ಜಿ. ದತ್ತಾತ್ರೇಯ ಇತ್ತೀಚೆಗೆ ಫಿಜಿಯಲ್ಲಿ ನಡೆದ ‘ಫಿಜಿ ಅಂತರರಾಷ್ಟ್ರೀಯ ಚಿತ್ರೋತ್ಸವ’ದಲ್ಲಿ ‘ಭಾರತ್ ಸ್ಟೋರ್ಸ್’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ಅಂತರರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದಾರೆ. ಪ್ರಶಸ್ತಿಯು ಚಿನ್ನದ ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಪಿ. ಶೇಷಾದ್ರಿ ನಿರ್ದೇಶನದ ‘ಭಾರತ್ ಸ್ಟೋರ್ಸ್’ ಇತ್ತೀಚೆಗೆ ‘ಫಿಜಿ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು.

ಬಸಂತ್‌ಕುಮಾರ್ ಪಾಟೀಲ್ ನಿರ್ಮಾಣದ ಈ ಚಿತ್ರ ಈ ಸಾಲಿನ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಗಳಿಸಿದ್ದಲ್ಲದೆ, ನಟ ದತ್ತಣ್ಣ ಈ ಚಿತ್ರದ ಅಭಿನಯಕ್ಕಾಗಿ ಭಾರತ ಸರ್ಕಾರದ ‘ಜ್ಯೂರಿ ಪ್ರಶಸ್ತಿ’ಯ ಮನ್ನಣೆಗೂ ಪಾತ್ರರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.