ಅಭಿನವ ನೃತ್ಯ ಕಂಪನಿ ‘ಉಪಗತಿ’ ಎಂಬ ವಿಶೇಷ ನೃತ್ಯ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿದೆ. ಉದಯೋನ್ಮುಖ ನೃತ್ಯ ಕಲಾವಿದರಿಗೆ ಎರಡು ವಾರಗಳ ನೃತ್ಯ ತರಬೇತಿ ಕಾರ್ಯಾಗಾರವು ಕಥಕ್ ನೃತ್ಯ ಜೋಡಿ ನಿರುಪಮಾ ರಾಜೇಂದ್ರ ನೇತೃತ್ವದಲ್ಲಿ ನಡೆಯಲಿದೆ.

ಪ್ರಾಚೀನ ಭಾರತೀಯ ನಾಟ್ಯಶಾಸ್ತ್ರದ ಆಧಾರದ ಮೇಲೆ ‘ಉಪಗತಿ’ ಎಂಬ ಈ ವಿಶೇಷ ನೃತ್ಯ ತರಬೇತಿ ಕಾರ್ಯಾಗಾರವನ್ನು ರೂಪಿಸಲಾಗಿದೆ. ಈ ವಿಶೇಷ ಕಾರ್ಯಗಾರದಲ್ಲಿ ನೃತ್ಯದ ವಿವಿಧ ಆಯಾಮ ಅಭಿನಯ, ತಾಳ, ಗುಟ್ಟು- ಪಟ್ಟುಗಳನ್ನು ಕಲಿಯಲು ಆಸಕ್ತಿ ಇರುವವರಿಗಾಗಿ ಉತ್ತಮ ವೇದಿಕೆ ಕಲ್ಪಿಸಲಿದೆ.

ಅನುಭವ ಮತ್ತು ಅಭಿಮಾನ ಎಂಬ ವಿಶಾಲ ಅಡಿಪಾಯದ ಮೇಲೆ ನಿರುಪಮಾ ರಾಜೇಂದ್ರ ಜೋಡಿ ನೃತ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೂ ಧಾರೆ ಎರೆಯುತ್ತಿದ್ದಾರೆ.

ನೂರಾರು ವಿದ್ಯಾರ್ಥಿಗಳು, ಮಹಿಳೆಯರು, ಉದ್ಯೋಗಸ್ಥರು ಅಭಿನವ ನೃತ್ಯ ಕಂಪನಿಯಲ್ಲಿ ನಿರಂತರ ತರಬೇತಿ ಪಡೆಯುತ್ತಿದ್ದಾರೆ. ಮೇ 9ರಿಂದ 14ರವರೆಗೆ ಮತ್ತು ಮೇ16ರಿಂದ 21ರವರೆಗೆ ಎರಡು ವಾರಗಳ ಕಾರ್ಯಗಾರ ಆಯೋಜನೆಗೊಂಡಿದೆ. ಯಾವುದೇ ಶಾಸ್ತ್ರೀಯ ನೃತ್ಯ ಕಲಿಕೆಯಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಇರುವವರು, ಕನಿಷ್ಠ 15 ವರ್ಷ ಮೇಲ್ಪಟ್ಟವರು ಕಾರ್ಯಗಾರದಲ್ಲಿ ತರಬೇತಿ ಪಡೆಯಬಹುದು.

ಈ ತರಬೇತಿ ಕಾರ್ಯಾಗಾರ ಶಾಸ್ತ್ರ ಮತ್ತು ಪ್ರಯೋಗ ಎರಡರ ಸಂಗಮ. ನೃತ್ಯದ ಕುರಿತು ಉಪನ್ಯಾಸದ ಜತೆ ಜತೆಗೆ ಅಭ್ಯಾಸ ತರಗತಿಗಳನ್ನೂ ನಡೆಸಲಾಗುತ್ತದೆ. ಖ್ಯಾತ ನೃತ್ಯಗಾರ್ತಿ ಪದ್ಮಾ ಸುಬ್ರಹ್ಮಣ್ಯಂ ಹಾಗೂ ಹಲವು ವಿದ್ವಾಂಸರು ನೃತ್ಯದ ಕುರಿತು ನಡೆಸಿರುವ ಸಂಶೋಧನೆಯನ್ನಾಧರಿಸಿ ತರಬೇತಿ ನೀಡುತ್ತಿರುವುದು ಈ ಕಾರ್ಯಗಾರದ ಮತ್ತೊಂದು ವಿಶೇಷತೆ.

ಪ್ರೇಕ್ಷಕರ ಜತೆ ಸಂವಹನ ನಡೆಸಲು ನೃತ್ಯಪಟುವಿಗೆ ಇರಬೇಕಾದ ಕಲ್ಪನಾ ಸಾಮರ್ಥ್ಯ, ಕ್ರಿಯಾಶೀಲತೆಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆಯೂ ತಿಳಿವಳಿಕೆ ನೀಡಲಾಗುವುದು. ನೋಂದಣಿಗಾಗಿ ಸಂಪರ್ಕಿಸಿ: 98801 00064

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.