ಹುಬ್ಬಳ್ಳಿ: ‘ಆದಿಕವಿ ಪಂಪನನ್ನು ಜಗತ್ತಿಗೇ ಪರಿಚಯಿಸುವ ನಿಟ್ಟಿನಲ್ಲಿ ಹೆಚ್ಚಿನ ಅಧ್ಯಯನ ಆಗಬೇಕಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಇಲ್ಲಿಯ ದಿಗಂಬರ ಜೈನ ಬೋರ್ಡಿಂಗ್‌ನ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಜೈನ ಶಿಕ್ಷಕರ ವೇದಿಕೆಯ ಆಶ್ರಯದಲ್ಲಿ ಭಾನುವಾರ ನಡೆದ ಜೈನ ಶಿಕ್ಷಕರ 6ನೇ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಪಂಪನನ್ನು ಜೈನ ಧರ್ಮಕ್ಕೆ ಸೀಮಿತಗೊಳಿಸದೆ, ಅವನನ್ನು ಕನ್ನಡದ ಪಂಪನನ್ನಾಗಿ ಪರಿಗಣಿಸಬೇಕು. ಕ.ವಿ.ವಿ.ಯಲ್ಲಿ ಜೈನ ಅಧ್ಯಯನ ಪೀಠ ಸ್ಥಾಪನೆಯಾಗಿದ್ದರೂ, ಜೈನ ತತ್ವಗಳ ಬಗ್ಗೆ ಹೆಚ್ಚಿನ ಅಧ್ಯಯನವಾಗಿಲ್ಲ. ಆ ಕಾರ್ಯ ಆಗಬೇಕಿದೆ’ ಎಂದರು.

‘ಜೈನರು ಆಯಾ ಸಮಾಜದವರೊಂದಿಗೆ ಅವರಂತೆಯೇ ಇರುತ್ತಾರೆ. ಎಲ್ಲರೊಳಗೊಂದಾಗುವ ಇಂತಹ ಗುಣ ಜೈನರ ದೊಡ್ಡತನ’ ಎಂದು ಅವರು ಪ್ರಶಂಸಿಸಿದರು.

‘ಕ್ರೈಸ್ತರು, ಮುಸ್ಲಿಮರನ್ನು ಮಾತ್ರ ಅಲ್ಪಸಂಖ್ಯಾತರು ಎಂದು ಪರಿಗಣಿಸುವ ಪರಿಸ್ಥಿತಿ ದೇಶದಲ್ಲಿದೆ. ಜೈನರನ್ನೂ ಇದೇ ರೀತಿ ಪರಿಗಣಿಸಬೇಕು ಮತ್ತು ಅಲ್ಪಸಂಖ್ಯಾತರ ಆಯೋಗಕ್ಕೆ ಜೈನರನ್ನು ನೇಮಕ ಮಾಡಬೇಕು’ ಎಂದು ಸಮ್ಮೇಳನದ ಸಂಘಟನಾ ಅಧ್ಯಕ್ಷ ಜಿ.ಜಿ. ಲೋಬೋಗೊಳ ಸಚಿವರಲ್ಲಿ ಮನವಿ ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.