ಬುಧವಾರ, 25 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಪಿಎಚ್.ಡಿ ಕಾನೂನು ಬಾಹಿರವಲ್ಲ’

Published : 6 ಆಗಸ್ಟ್ 2015, 19:30 IST
ಫಾಲೋ ಮಾಡಿ
Comments

ಹೊಸಪೇಟೆ: ತಾವು ಪಡೆದಿರುವ ಪಿಎಚ್‌.ಡಿ ಕಾನೂನು ಬಾಹಿರವಲ್ಲ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಕೆ.ಪ್ರೇಮಕುಮಾರ್‌ ಸ್ಪಷ್ಪಪಡಿಸಿದ್ದಾರೆ.

‘ಪಿಎಚ್‌.ಡಿ ಪ್ರಬಂಧದಲ್ಲಿ ಕೃತಿಚೌರ್ಯ ನಡೆದಿಲ್ಲವೆಂದು ಈಗಾಗಲೇ ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪ ಸಮಿತಿ ವರದಿ ನೀಡಿದೆ. ಅಲ್ಲದೆ ಪಿಎಚ್.ಡಿ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ವಿ.ವಿಯ ನೌಕರರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರು ಹೈಕೋರ್ಟ್‌ 2010ರಲ್ಲಿ ವಜಾಗೊಳಿಸಿದೆ’ ಎಂದು ಅವರು ತಿಳಿಸಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ‘ಪ್ರಭಾರ ಕುಲಪತಿ ಪಿಎಚ್‌.ಡಿಯೇ ಕಾನೂನು ಬಾಹಿರ’ ಲೇಖನಕ್ಕೆ ಪ್ರತಿಕ್ರಿಯಿಸಿರುವ ಅವರು, ‘ಶೇಕ್ಸ್‌ಪಿಯರ್‌ ದುರಂತ ನಾಟಕಗಳ ಕನ್ನಡ ಅನುವಾದಗಳು’ ಎಂಬ ನನ್ನ ಪಿಎಚ್‌.ಡಿ ಪ್ರಬಂಧ ಮೊದಲ ಮೌಲ್ಯಮಾಪಕರಿಂದ ಎರಡು ಬಾರಿ ತಿರಸ್ಕೃತವಾಗಿದ್ದರೂ ಕುಲಪತಿ ಅವರಿಗೆ ಇರುವ ವಿಶೇಷ ಅಧಿಕಾರದಲ್ಲಿ ಬೇರೆ ಮೌಲ್ಯಮಾಪಕರನ್ನು ನೇಮಕ ಮಾಡಿದ್ದರು. ಆ ಮೌಲ್ಯಮಾಪಕರು ನನಗೆ ಪಿಎಚ್‌.ಡಿ ಕೊಡಬಹುದು ಎಂದು ಶಿಫಾರಸು ಮಾಡಿದ್ದರು. ಈ ಕಾರಣದಿಂದ ಕಾನೂನು ಚೌಕಟ್ಟಿನಲ್ಲಿಯೇ ಪದವಿ ಪಡೆದಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಕೃತಿಚೌರ್ಯ ಪ್ರಕರಣಗಳ ತನಿಖೆ ನಡೆಸಲು ಕನ್ನಡ ವಿ.ವಿಯಲ್ಲಿ ರಚನೆಯಾಗಿದ್ದ ಸಿಂಡಿಕೇಟ್‌ ಉಪಸಮಿತಿ ನನ್ನ ಪ್ರಕರಣದಲ್ಲಿ ಕೃತಿಚೌರ್ಯ ನಡೆದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ನನ್ನ ಪಿಎಚ್‌.ಡಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT