ಮೈಸೂರು: ಹಾಡ್ತಾ, ಹಾಡ್ತಾ ರಾಗ ಬರುವಂತೆ, ಬರೀತಾ ಬರೀತಾ ಬರಹ ಫಲಿಸುತ್ತದೆ ಎಂದು ‘ಅಮೆರಿಕನ್ನಡ’ ಅಂತರ್ಜಾಲ ಪತ್ರಿಕೆ ಸಂಪಾದಕಿ ನಾಗಲಕ್ಷ್ಮೀ ಹರಿಹರೇಶ್ವರ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಮತ್ತು ಮುಖ್ಯಪ್ರಾಣ ಸಾಂಸ್ಕೃತಿಕ ಅಕಾಡೆಮಿ ಸಹಯೋಗದಲ್ಲಿ ನಗರದ ಅರಮನೆ ಉತ್ತರದ್ವಾರದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ‘ಯುಗಾದಿ ಕವಿಗೋಷ್ಠಿ’ಯಲ್ಲಿ ಅವರು ಮಾತನಾಡಿದರು.

ಬರೆದಿದ್ದನ್ನು ಇತರರೊಂದಿಗೆ ಹಂಚಿಕೊಂಡಾಗ ಲೇಖಕರಿಗೆ ಆನಂದ ಉಂಟಾಗುತ್ತದೆ. ಬರಹಕ್ಕೆ ಮನ್ನಣೆ ಮತ್ತು ಪ್ರೋತ್ಸಾಹ ಸಿಕ್ಕಾಗ ಇನ್ನಷ್ಟು ಬರೆಯಬೇಕೆಂಬ ಹುಮ್ಮಸ್ಸು ಬರುತ್ತದೆ. ಕವನಗಳನ್ನು ಬರೆದು ಅವುಗಳನ್ನು ವಾಚಿಸುವುದರಿಂದ ಕವಿಗಳಿಗೆ ಸಂತಸ ಉಂಟಾಗುತ್ತದೆ ಎಂದರು.

ಪ್ರತಿ ವರ್ಷದ ನಿಗದಿತ ದಿನದಂದು ಅಪ್ಪಂದಿರ ದಿನ, ಅಮ್ಮಂದಿರ ದಿನ ಮೊದಲಾದವುಗಳನ್ನು ಆಚರಿಸಿ ಸಂಭ್ರಮಪಡುತ್ತೇವೆ. ಹೆತ್ತವರು ಮಕ್ಕಳು ಪಾಲಿನ ದೇವರು. ವಾಸ್ತವದಲ್ಲಿ ಪ್ರತಿದಿನವೂ ಅಪ್ಪ–ಅಮ್ಮಂದಿರ ದಿನವಾಗಿರುತ್ತದೆ. ಯುಗಾದಿ ಕವಿಗೋಷ್ಠಿ ಎಂದ ಕೂಡಲೇ ಯುಗಾದಿ ದಿನವೇ ಮಾಡಬೇಕು ಎಂದಲ್ಲ. ಅದು ಬರಹಗಾರರಿಗೆ ವೇದಿಕೆ. ಲೇಖಕರು ಇಂಥ ವೇದಿಕೆಗಳನ್ನು ಸದುಪಯೋಗಪಡಿಸಿಕೊಂಡು ಸಾಹಿತ್ಯ ಪ್ರೌಢಿಮೆ ಮೆರೆಯಬೇಕು ಎಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ಎಸ್. ಶೇಖರ್, ಕವಿ ಎಂ.ಬಿ. ಜಯಶಂಕರ್, ಮುಖ್ಯಪ್ರಾಣ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಎಂ.ಎನ್. ವಿಜಯವೆಂಕಟೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ವೈ.ಡಿ. ರಾಜಣ್ಣ, ಗೌರವ ಕೋಶಾಧ್ಯಕ್ಷ ರಾಜಶೇಖರ ಕದಂಬ ಇದ್ದರು.

ಎನ್್.ಆರ್್. ಮೊಹಲ್ಲಾ: ಭದ್ರತಾ ಪಡೆ ಪಥಸಂಚಲನ
ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನರಸಿಂಹರಾಜ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ಪೊಲೀಸರು ಭಾನುವಾರ ಸಂಜೆ ಪಥಸಂಚಲನ ನಡೆಸಿದರು.

ಪಥ ಸಂಚಲನದಲ್ಲಿ ಸಿವಿಲ್್ ಪೊಲೀಸ್್ ಅಧಿಕಾರಿ ಮತ್ತು ಸಿಬ್ಬಂದಿ, ಚೀತಾ , ಗರುಡಾ, ಪಿಸಿಆರ್್ ವಾಹನಗಳು, ಕೇರಳ ಪೊಲೀಸ್್ ಅಧಿಕಾರಿ ಮತ್ತು ಸಿಬ್ಬಂದಿ, ಸಿಐಎಸ್್ಎಫ್್, ಕೆಎಸ್್ಆರ್‌ಪಿ ತುಕಡಿ, ಅಶ್ವಾರೋಹಿ ದಳ, ಸಿಎಆರ್್ ತುಕಡಿಗಳು ಸೇರಿದಂತೆ 500ಕ್ಕೂ ಹೆಚ್ಚಿನ ಪೊಲೀಸರು ಭಾಗವಹಿಸಿದ್ದರು.

ಆರ್್.ಎಸ್್. ನಾಯ್ಡುನಗರ ಬಸ್್ ನಿಲ್ದಾಣದಿಂದ ಆರಂಭವಾದ ಪಥ ಸಂಚಲನ ಧೋಬಿಘಾಟ್್, ಕೆಸರೆ 2ನೇ ಹಂತ ಮುಖ್ಯರಸ್ತೆ, ಇನ್‌ಸ್ಟಿಟ್ಯೂಟ್್ ಆಫ್್ ಎಜುಕೇಷನ್್ ರಸ್ತೆ, ಫಾರೂಕಿಯ ವೖತ್ತ, ರಾಜೇಂದ್ರನಗರ ಮುಖ್ಯರಸ್ತೆ, ಡಿವಿಎನ್್ ವೖತ್ತ, ಶಿವಾಜಿ ಮುಖ್ಯರಸ್ತೆ, ಶಿವಾಜಿ ಪಾರ್ಕ್ ರಸ್ತೆ, ಎನ್.ಆರ್್. ಸರ್ಕಲ್್, ರಬ್ಬಾನಿ ಮಸೀದಿ, ಸಿದ್ಧಾರ್ಥ ಸ್ಕೂಲ್್ ರಸ್ತೆ ಮೂಲಕ ಕರುಣಾಪುರ ಪಾರ್ಕ್ ಬಳಿ ಅಂತ್ಯವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.