ಬಜ್ಪೆ:  ಬಲೇ ತೆಲಿಪಾಲೆ ಹಾಸ್ಯ ಸರಣಿ 2 ಫೈನಲ್ ವಿಭಾಗದಲ್ಲಿ ಕಾಪುವಿನ ‘ಪ್ರಶಂಸಾ’ ತಂಡ ಪ್ರಥಮ ಪ್ರಶಸ್ತಿಯೊಂದಿಗೆ ಎರಡು ಲಕ್ಷ ರೂಪಾಯಿ ನಗದನ್ನು ಗೆದ್ದುಕೊಂಡಿದೆ. ಸೀಸನ್ ಒಂದರಲ್ಲೂ ಇದೇ ತಂಡ ಪ್ರಶಸ್ತಿಯನ್ನು ಗೆದ್ದಿತ್ತು.

ಶಾಸ್ತಾವು ಭೂತನಾಥೇಶ್ವರ ದೇವಳದ ಸನ್ನಿಧಿಯಲ್ಲಿ ಭಾನುವಾರ ನಮ್ಮ ಟಿವಿ ವಾಹಿನಿಯ ಸಹಭಾಗಿತ್ವದಲ್ಲಿ ತುಳು ರಿಯಾಲಿಟಿ ಶೋ ಬಲೇ ತೆಲಿಪಾಲೆ ಸೀಸನ್ ಎರಡರ ಫೈನಲ್ ಪಂದ್ಯ ಜರಗಿತು. ಫೈನಲ್‌ನಲ್ಲಿ ಒಟ್ಟು 10 ತಂಡಗಳು ಭಾಗವಹಿಸಿದ್ದವು.

ತೆಲಿಕೆದ ತೆನಾಲಿ ಕಾರ್ಕಳ ₨1.50ಲಕ್ಷ ಬಹುಮಾನದೊಂದಿಗೆ ದ್ವಿತೀಯ ಸ್ಥಾನವನ್ನು ಪಡೆಯಿತು. ಶೋಭಾ ರೈ ನೇತೃತ್ವದ ತಂಡ ಒಂದು ಲಕ್ಷ ಬಹುಮಾನದೊಂದಿಗೆ ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿತು. 75 ಸಾವಿರದ ನಾಲ್ಕನೇ ಪ್ರಶಸ್ತಿಯನ್ನು ಉಮೇಶ್ ಮೀಜಾರು ತಂಡ ಗಳಿಸಿದೆ.

ಐದನೇ ಸ್ಥಾನವನ್ನು 50 ಸಾವಿರ ನಗದಿನೊಂದಿಗೆ ಮಂಜು ರೈ ನೇತೃತ್ವದ ಸಾರಥಿ ಕುಡ್ಲ ಪಡೆದಿದೆ. ಆರನೇ ಸ್ಥಾನ 25 ಸಾವಿರ ನಗದಿನೊಂದಿಗೆ ಅಭಿನಯ ಉಡುಪಿ ಪ್ರಶಸ್ತಿಯನ್ನು ಗಳಿಸಿದೆ. ರಂಜನ್ ಬೋಳೂರು ಮತ್ತು ಅರುಣ್ ಚಂದ್ರ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡರು.

ಕಾರ್ಯಕ್ರಮದ ಪ್ರಧಾನ ಸಂಘಟಕ ವಿಜಯನಾಥ ವಿಠಲ ಶೆಟ್ಟಿ, ನಮ್ಮ ಟಿ.ವಿ.ಯ ಮುಖ್ಯಸ್ಥ ಡಾ. ಶಿವಚರಣ್ ಶೆಟ್ಟಿ, ಮತ್ತು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ತೀರ್ಪುಗಾರರಾಗಿದ್ದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ಸಂಯೋಜಿಸಿದರು. ಪ್ರಥಮ ಪ್ರಶಸ್ತಿ ಪಡೆದ ಪ್ರಶಂಸ ಕಾಪು ತಂಡದಲ್ಲಿ ಪ್ರಸನ್ನ ಶೆಟ್ಟಿ, ಸಂದೀಪ್ ಶೆಟ್ಟಿ, ಮರ್ವಿನ್ ಅಭಿನಯಿಸಿದ್ದರು. ಶರತ್ ಉಚ್ಚಿಲ ಸಂಗೀತ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.