ಬೆಂಗಳೂರು: ‘ಯುವ ಇತಿಹಾಸ ಸಂಶೋಧಕರು ಸಂಶೋಧನಾ ಕಾರ್ಯ ಕೈಗೊಳ್ಳುವ ಮುನ್ನ ಆಯಾ ಕ್ಷೇತ್ರದಲ್ಲಿ ಆಳವಾದ ಅಧ್ಯಯನ ಮಾಡುವುದು ಅಗತ್ಯ’ ಎಂದು ಹಿರಿಯ ಪುರಾತತ್ವ ಶಾಸ್ತ್ರಜ್ಞ ಪ್ರೊ.ಅ.ಸುಂದರ ಹೇಳಿದರು.

ಕರ್ನಾಟಕ ಇತಿಹಾಸ ಅಕಾಡೆಮಿಯು ಮಂಗಳವಾರ ನಗರದ ದಿ ಮಿಥಿಕ್ ಸೊಸೈಟಿಯಲ್ಲಿ ಆಯೋಜಿಸಿದ್ದ ಮೂರು ದಿನಗಳ ವಾರ್ಷಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಇತಹಾಸ ಬಲ್ಲ ಯುವಕರ ಸಂಖ್ಯೆ ಕಡಿಮೆಯಿದೆ. ಇಂದಿನ ಬಹುತೇಕ ಯುವಪೀಳಿಗೆಗೆ ದೇಶದ ಬಗೆಗೆ ಅಭಿಮಾನ, ಸ್ತ್ರೀಯರ ಬಗೆಗೆ ಗೌರವ ಇಲ್ಲದಂತಾಗಿದೆ. ಇತಿಹಾಸ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಶೋಧಕರು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದರು.

‘ಈಗ ನಮಗೆ ದೇಶದ ಸಂಪೂರ್ಣ ಇತಿಹಾಸ ತಿಳಿದಿಲ್ಲ. ತಿಳಿದಿರುವುದು ಶೇ 20 ರಿಂದ 25 ರಷ್ಟು ಇತಿಹಾಸ ಮಾತ್ರ. ಅದರಲ್ಲೂ ಹಲವಾರು ದೋಷಗಳಿವೆ. ಕಂಡುಹಿಡಿದ ಇತಿಹಾಸದಲ್ಲಿ ಭಾರತೀಯ ಆತ್ಮ ದರ್ಶನವಾಗುವುದಿಲ್ಲ. ಇದರಿಂದ ದೇಶದ ನಿಜವಾದ ಇತಿಹಾಸ ರಚನೆಯಾಗಬೇಕು’ ಎಂದರು.

ಮಿಥಿಕ್ ಸೊಸೈಟಿಯ ಕಾರ್ಯದರ್ಶಿ ವಿ.ನಾಗರಾಜ ಮಾತನಾಡಿ, ‘ಆಧುನಿಕ ವಿಜ್ಞಾನ-ತಂತ್ರಜ್ಞಾನದ ಉಪಯೋಗದಿಂದ ಪುರಾತತ್ವ ಸಂಶೋಧನೆಯತ್ತ ಗಮನ ಹರಿಸಬೇಕು. ಕರ್ನಾಟಕದ ಇತಿಹಾಸ ಅಧ್ಯಯನದಲ್ಲೂ ಇದರ ಅಳವಡಿಕೆ ಅಗತ್ಯ. ಸಮಾಜದಲ್ಲಿ ಸಾಮರಸ್ಯ ತರುವ ಜವಾಬ್ದಾರಿ ಇತಿಹಾಸಕಾರರ ಮೇಲಿದೆ’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.