ಸೋಮವಾರ, 30 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

20 ಸಾಧಕರಿಗೆ ಉರ್ದು ಅಕಾಡೆಮಿ ಪ್ರಶಸ್ತಿ

Published : 9 ಫೆಬ್ರುವರಿ 2015, 19:30 IST
ಫಾಲೋ ಮಾಡಿ
Comments

ಬೆಂಗಳೂರು: ಕರ್ನಾಟಕ ಉರ್ದು ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳಿಗೆ ಉರ್ದು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಿದ 20 ಸಾಧಕರನ್ನು ಆಯ್ಕೆ ಮಾಡ­ಲಾಗಿದೆ. ಫೆ.11ರಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿಯ ಅಧ್ಯಕ್ಷೆ ಫೌಜಿಯಾ ಚೌಧರಿ ಅವರು ‘ಉರ್ದು ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಅಕಾಡೆಮಿಯ ವತಿಯಿಂದ ಪ್ರತಿ ವರ್ಷ  5 ಸಾಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ’ ಎಂದರು.

2010ನೇ ಸಾಲಿನನಲ್ಲಿ ಮೊಹಿಬ್‌ ಕೌಸರ್‌ (ಕಲಬುರ್ಗಿ), ಕಾಜಿ ಅನೀಸ್ ಉಲ್ ಹಕ್, ಎನ್‌.­ಜಹೀರ್‌ ಅನ್ಸರ್‌, ಸೆಂಟ್ರಲ್‌ ಮುಸ್ಲಿಂ ಅಸೋಸಿಯೇಷನ್‌, ಮೌಲಾನ ಮಫ್ತಿ ಮೊಹಮದ್‌ ಅಶ್ರಫ್‌ ಅಲಿ (ಬೆಂಗಳೂರು) ಆಯ್ಕೆ­ಯಾಗಿದ್ದಾರೆ. 2011ನೇ ಸಾಲಿನ ಪ್ರಶಸ್ತಿಗೆ ಮಝಾರ್ ಮೊಹಿ­ಯು­ದ್ದೀನ್ (ಹುಬ್ಬಳ್ಳಿ), ಡಾ.ಹಲೀಮಾ ಫಿರ್‌ದೌಸ್‌ (ವಿಜಯಪುರ), ಅಜೀಜ್‌ ಉಲ್ಲಾ ಸರ್ಮಸ್ತ್‌, ನ್ಯಾಷನಲ್‌ ಎಜುಕೇಷನ್‌ ಸೊಸೈಟಿ (ಕಲಬುರ್ಗಿ), ಪ್ರೊ.ಬಿ.ಶೇಕ್‌ ಅಲಿ (ಮೈಸೂರು) ಆಯ್ಕೆಯಾಗಿದ್ದಾರೆ.

2012ನೇ ಸಾಲಿನಲ್ಲಿ ನಿಲೂಫರ್‌ ನಯಾಬ್‌ (ಮೈಸೂರು), ರಾವೂಫ್‌ ಖುಸ್ತರ್‌ (ವಿಜಯಪುರ), ಸೈಯದ್‌ ಸರ್ಫುದ್ಧೀನ್‌ (ಚನ್ನಪಟ್ಟಣ), ಸಿಖಾಬ್‌ ಸೊಸೈಟಿ (ವಿಜಯಪುರ), ಹಜರತ್‌ ಸೈಯದ್‌ ಷಾ ಮೊಹಮದ್‌ ಉಲ್‌ ಹುಸೇನ್‌ ಕುಸೂರ್‌ ಪಾಷಾ ಸಜ್ಜದ ನಶೀನ್‌ (ಕಲಬುರ್ಗಿ) ಆಯ್ಕೆ ಮಾಡಲಾಗಿದೆ.

2013ನೇ ಸಾಲಿನಲ್ಲಿ ವಾರ್ಷಿಕ ಪ್ರಶಸ್ತಿಗೆ ಮುಸ್ತಕ್‌ ಸೈಯದ್‌ (ಮೈಸೂರು), ಅಲಿ ಅಹಮದ್‌ ಬರ್ಕ್‌,  ಅಬ್ದುಲ್‌ ಮಜೀದ್‌ ಬಗ್ದಾಡಿ, ಅಜೀಜುಲ್ಲಾ ಬೇಗ್‌ (ಬೆಂಗಳೂರು), ಮೀರ್‌ ಅಲಿ ರಾಜಾ (ಅಲಿಪುರ)ರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ₨10 ಸಾವಿರ ನಗದು ಹಾಗೂ ಫಲಕ ಹೊಂದಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT