ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರ 857 ಅಶ್ಲೀಲ ಮತ್ತು ಕಾಮಪ್ರಚೋದಕ ಜಾಲತಾಣಗಳನ್ನು (ವೆಬ್‌ಸೈಟ್) ನಿಷೇಧಿಸಿದೆ.

ಸರ್ಕಾರ ಇಂಥ ತಾಣಗಳನ್ನು ನಿಷೇಧಿಸುವ ಮೂಲಕ ವಯಸ್ಕರ ಸ್ವಾತಂತ್ರ್ಯ ಮತ್ತು ಹಕ್ಕನ್ನು ಕಸಿದುಕೊಂಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಕಳೆದ ಎರಡು ದಿನಗಳಿಂದ ಅಂತರ್ಜಾಲದಲ್ಲಿ ತಮಗೆ ಬೇಕಾದ ಜಾಲತಾಣಗಳಲ್ಲಿ ಖಾಲಿ ಪುಟಗಳು ಕಾಣುತ್ತಿವೆ ಎಂದು ಕೆಲ ಯುವಕ– ಯುವತಿಯರು ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ವೊಡಾಫೋನ್, ಎಂಟಿಎನ್‌ಎಲ್, ಬಿಎಸ್‌ಎನ್‌ಎಲ್ ಸೇರಿದಂತೆ ಅಂತರ್ಜಾಲ ಸೇವೆ ಒದಗಿಸುವ ಸಂಸ್ಥೆಗಳು ಶನಿವಾರದಿಂದ ಕಾಮಪ್ರಚೋದಕ ಹಾಗೂ ಅಶ್ಲೀಲ ಜಾಲತಾಣಗಳ ಸಂಪರ್ಕ ಕಡಿತಗೊಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.