ನವದೆಹಲಿ (ಐಎಎನ್‌ಎಸ್): ಹಿರಿಯ ಭಾರತೀಯ ಇತಿಹಾಸಕಾರ ಬಿಪನ್ ಚಂದ್ರ ಅವರು ಶನಿವಾರ ಬೆಳಿಗ್ಗೆ ನಿಧನರಾದರು. 86 ವರ್ಷದ ಬಿಪನ್ ಅವರು ಗುಡಗಾಂವ್‌ನ ತಮ್ಮ ನಿವಾಸದಲ್ಲಿ ಮಲಗಿದ್ದಲ್ಲೆ ಚಿರನಿದ್ರೆಗೆ ಜಾರಿದ್ದಾರೆ.

1928ರಲ್ಲಿ ಪಂಜಾಬ್‌ನ ಕಾಂಗ್ರಾದಲ್ಲಿ ಅವರು ಜನಿಸಿದ್ದರು. ಇತಿಹಾಸದ ಪ್ರಾಧ್ಯಾಪಕರಾಗಿ ಹಾಗೂ ಇತಿಹಾಸಕಾರರಾಗಿ ಜನಪ್ರಿಯರಾಗಿದ್ದ ಅವರು ಮಹಾತ್ಮ ಗಾಂಧಿ ಅವರ ಬಗ್ಗೆ ಅಧಿಕೃತವಾಗಿ ಬರೆಯಬಲ್ಲ ಹಾಗೂ ಮಾತನಾಡಬಲ್ಲವರಾಗಿದ್ದರು.

‘ದಿ ಮೇಕಿಂಗ್ ಆಫ್ ಮಾಡರ್ನ್ ಇಂಡಿಯಾ: ಫ್ರಮ್ ಮಾರ್ಕ್ಸ್ ಟು ಗಾಂಧಿ’, ‘ಹಿಸ್ಟರಿ ಆಫ್ ಮಾಡರ್ನ್ ಇಂಡಿಯಾ’, ‘ದಿ ರೈಸ್ ಅಂಡ್ ಗ್ರೋತ್ ಆಫ್ ಎಕನಾಮಿಕ್ ನ್ಯಾಷನಲಿಸಮ್ ಇಂಡಿಯಾ’ ಸೇರಿದಂತೆ ಹಲವು ಮೌಲಿಕ ಪುಸ್ತಕಗಳನ್ನು ಅವರು ರಚಿಸಿದ್ದಾರೆ.

ನವದೆಹಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದ ಅವರು, 2004ರಿಂದ 2012ರವರೆಗೆ ನ್ಯಾಷನಲ್ ಬುಕ್ ಟ್ರಸ್ಟ್‌ನ ಅಧ್ಯಕ್ಷರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.