ಬೆಂಗಳೂರು: ವೀಯೆಲ್ಲೆನ್– ನಿರ್ಮಾಣ್– ಪುರಂದರ ಪ್ರತಿಷ್ಠಾನದ 2016ನೇ ಸಾಲಿನ ‘ಸಂಗೀತ ರತ್ನ’ ಪ್ರಶಸ್ತಿಗೆ ಸಂಗೀತ ವಿದ್ವಾಂಸ ಮುರುಗೋಡು ಕೃಷ್ಣದಾಸ ಭಾಜನರಾಗಿದ್ದಾರೆ.

ಫೆ.7 ರಂದು ಸಂಜೆ 6ಕ್ಕೆ ನಿಸರ್ಗ ಬಡಾವಣೆಯಲ್ಲಿರುವ ಪುರಂದರ ಮಂಟಪದಲ್ಲಿ ನಡೆಯುವ ಸಮಾರಂಭ ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ₹1 ಲಕ್ಷ ನಗದು, ಸ್ವರ್ಣ ಪದಕ, ಅಭಿನಂದನಾ ಪತ್ರವನ್ನು ಒಳಗೊಂಡಿದೆ. ವಿ.ಲಕ್ಷ್ಮೀನಾರಾಯಣ್, ಅರಳು ಮಲ್ಲಿಗೆ ಪಾರ್ಥಸಾ ರಥಿ ಅವರನ್ನೊಳಗೊಂಡ ಆಯ್ಕೆ ಸಮಿತಿ ಆಯ್ಕೆ ಮಾಡಿದೆ.

ಮುರುಗೋಡಿನಲ್ಲಿ 1923ರಲ್ಲಿ ಜನಿಸಿದ ಕೃಷ್ಣದಾಸರು ಹರಿದಾಸ ಸಾಹಿತ್ಯವನ್ನು ಭಜನೆಗಳ ಮೂಲಕ ಪಸರಿಸುತ್ತಿದ್ದಾರೆ. ಇವರಿಗೆ ‘ಸಂತ ಶಿಶುನಾಳ ಷರೀಫ’, ‘ಹರಿದಾಸಕುಲ ದೀಪಕ’ ಮೊದಲಾದ ಪ್ರಶಸ್ತಿಗಳು ಸಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.