ಬೆಂಗಳೂರು: ಸಮ್ಮೇಳನ ಅಧ್ಯಕ್ಷ ಸ್ಥಾನವನ್ನು ಸೈದ್ಧಾಂತಿಕ ನಿಲುವಿನಿಂದ ತಿರಸ್ಕರಿಸಿದ ದೇವನೂರ ಮಹಾದೇವ ಅವರ ಆಶಯದಂತೆ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಕಾರ್ಯಕಾರಿ ಸಮಿತಿ ತೀರ್ಮಾನಿಸಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಕಡ್ಡಾಯಕ್ಕೆ ಸಮ್ಮೇಳನದ ಮೂಲಕ ಜನಾಂದೋಲನ ಪ್ರಾರಂಭಿಸಲಾಗುವುದು. ಅದರ ಸಾರಥ್ಯ ವಹಿಸಲು ದೇವನೂರ ಅವರಿಗೆ ಆಹ್ವಾನ ನೀಡಲಾಗುವುದು. ಸಮ್ಮೇಳನದ ಏಕ ನಿರ್ಣಯ ಕೂಡಾ ಇದೇ ಆಗಲಿದೆ ಎಂದು ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದರು.

ದಲಿತರಿಂದ ಕನ್ನಡ ಶಾಲೆಗಳು ಉಳಿದಿವೆ

ರಾಜ್ಯದಲ್ಲಿರುವ ಕನ್ನಡ ಶಾಲೆಗಳು ಉಳಿದಿರುವುದೇ ದಲಿತರಿಂದ. ಬಡತನ, ಸಾಮಾಜಿಕ ಅಸಮಾನತೆಯ ಕಾರಣದಿಂದ ದಲಿತ ಮಕ್ಕಳು ಮಾತ್ರ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಓದುತ್ತಿದ್ದಾರೆ. –ಪುಂಡಲೀಕ ಹಾಲಂಬಿ

ನೋಂದಣಿಗೆ ಜ.20 ಕಡೆ ದಿನ
ಸಾಹಿತ್ಯ ಸಮ್ಮೇಳನಕ್ಕೆ ಬರುವ ಪ್ರತಿನಿಧಿಗಳ ನೋಂದಣಿಗೆ ಜ.20 ಕಡೆಯ ದಿನ. ನೋಂದಣಿ ಮಾಡಿಕೊಂಡವರಿಗೆ ಮಾತ್ರ ಅನ್ಯಕಾರ್ಯ ನಿಮಿತ್ತ ರಜೆ ಪ್ರಮಾಣಪತ್ರ (ಒಒಡಿ) ಮತ್ತು ವಸತಿ ವ್ಯವಸ್ಥೆ ಮಾಡಲಾಗುವುದು. ಹಿಂದಿನ ಸಮ್ಮೇಳನಗಳಲ್ಲಿ ನಡೆದ ಗೊಂದಲಗಳ ಪುನರಾವರ್ತನೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು. –ಎಚ್.ಎಲ್. ಜನಾರ್ದನ,
(ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ)

ಕನ್ನಡ ಕಡ್ಡಾಯಗೊಳಿಸಲು ಏನು ಮಾಡಬೇಕು ಎಂಬ ನಿಟ್ಟಿನಲ್ಲಿ ಸಮ್ಮೇಳನದ ಗೋಷ್ಠಿಗಳನ್ನು ರೂಪಿಸಲಾಗುವುದು. ಆಶಯ ನುಡಿಯಿಂದ ನಿಲುವಳಿ ಮಂಡನೆಯವರೆಗೂ ಕನ್ನಡಕ್ಕೆ ಸಂಬಂಧಿಸಿದ ಚರ್ಚೆ ನಡೆಯಲಿವೆ ಎಂದರು.

‘ಸುಪ್ರೀಂಕೋರ್ಟಿನ ತೀರ್ಪಿನಿಂದ ಕನ್ನಡಕ್ಕೆ ಹಿನ್ನಡೆಯಾಗಿದೆ. ಇದಕ್ಕೆ ಸಂವಿಧಾನ ತಿದ್ದುಪಡಿ ಅಗತ್ಯ. ರಾಜ್ಯ ಸರ್ಕಾರದ ಜೊತೆ ಚರ್ಚಿಸಿ, ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಸಂವಿಧಾನ ತಿದ್ದುಪಡಿ ಸಂಬಂಧ ಕೇಂದ್ರದ ಮೇಲೆ ಒತ್ತಡ ಹಾಕಲಾಗುವುದು.

ಸಮ್ಮೇಳನ ಮುಗಿದ ತಕ್ಷಣ ಶಿಕ್ಷಣ ಮತ್ತು ಕಾನೂನು ತಜ್ಞರ ಸಮಿತಿ ರಚನೆ ಮಾಡಿ ಗೋಕಾಕ್ ಹೋರಾಟದ ಮಾದರಿಯಲ್ಲಿ ಜನಾಂದೋಲನ ರೂಪಿಸಲಾಗುವುದು. ಕನ್ನಡ ಮಾಧ್ಯಮ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕಸಾಪದ ನಿಲುವುಗಳನ್ನು ಸರ್ಕಾರ ಪರಿಗಣಿಸದಿದ್ದರೆ ಮುಂದಿನ ಸಮ್ಮೇಳನ ನಡೆಸದಿರಲು ನಿರ್ಧರಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.