ನವದೆಹಲಿ (ಪಿಟಿಐ): ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸರಳ ಬಹುಮತದತ್ತ ದಾಪುಗಾಲಿಟ್ಟಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ‘ಮಹಾನಾಯಕ’ ಎಂದು ಶಿವಸೇನೆ ಹೊಗಳಿದೆ.

ಇದರಿಂದ ಚುನಾವಣೆಯಲ್ಲಿ ಹಿನ್ನಡೆ ಕಂಡಿರುವ ಬಿಜೆಪಿ ಗಾಯದ ಮೇಲೆ ಶಿವಸೇನೆ ಉಪ್ಪು ಸವರಿದಂತಾಗಿದೆ.

ಬಿಹಾರ ಚುನಾವಣೆ ಫಲಿತಾಂಶವು ದೇಶದ ರಾಜಕಾರಣದಲ್ಲಿ ಒಂದು ‘ಹೊಸ ತಿರುವು’ ತರಲಿದೆ ಎಂದು ಶಿವಸೇನೆ ಮುಖಂಡ ಸಂಜಯ್ ರಾವುತ್ ಪ್ರತಿಪಾದಿಸಿದ್ದಾರೆ.

‘ನಿತೀಶ್ಕುಮಾರ್ ಅವರು ಮಹಾನಾಯಕನಾಗಿ (ಸೂಪರ್ ಹೀರೊ) ಹೊರಹೊಮ್ಮಿದ್ದಾರೆ. ಬಿಹಾರಕ್ಕೆ ಅವರ ಅಗತ್ಯವಿತ್ತು. ಬಿಹಾರದಲ್ಲಿ ಅವರು ಉತ್ತಮ ಕೆಲಸ ಮಾಡಿದ್ದಾರೆ. ಶಿವಸೇನೆಯ ಪರವಾಗಿ ನಾನು ಅವರನ್ನು ಅಭಿನಂದಿಸುವೆ.ದೇಶದ ರಾಜಕಾರಣದಲ್ಲಿ ಬಿಹಾರ ಫಲಿತಾಂಶವು ಒಂದು ಹೊಸ ತಿರುವು ತರಲಿದೆ’ ಎಂದು ಅವರು ನುಡಿದಿದ್ದಾರೆ.

ಅಲ್ಲದೇ, ‘ಬಿಜೆಪಿಯು ಬಿಹಾರ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಎದುರಿಸಿತ್ತು. ಇದನ್ನು ಬಿಜೆಪಿ ಒಪ್ಪಿಕೊಳ್ಳಬೇಕು. ಈ ಸೋಲು ನಾಯಕನೊಬ್ಬನ ಅವನತಿಯಾಗಿದೆ. ಸದ್ಯ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆದರೇ ಬಿಹಾರದಂಥದ್ದೇ ಫಲಿತಾಂಶ ದೊರೆಯುತ್ತದೆ’ ಎನ್ನುವ ಮೂಲಕ ಪರೋಕ್ಷವಾಗಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.