ಹ್ಯೂಸ್ಟನ್ (ಪಿಟಿಐ): ‘ಫೇಸ್‌ಬುಕ್’ ಗೋಡೆಯಲ್ಲಿ ಪ್ರಕಟಗೊಳ್ಳುವ ಪೋಸ್ಟ್‌ಗಳಿಗೆ ‘ಲೈಕ್’ ಮಾಡುವ ರೀತಿಯಲ್ಲೇ ಇನ್ನು ಮುಂದೆ ಬಳಕೆದಾರರು ‘ಡಿಸ್‌ಲೈಕ್’ ಕೂಡ ಮಾಡಬಹುದು.

ಬಳಕೆದಾರರ ಬೇಡಿಕೆಗೆ ಮಣಿದಿರುವ ಫೇಸ್‌ಬುಕ್ ಕೊನೆಗೂ ‘ಡಿಸ್‌ಲೈಕ್’ ಗುಂಡಿಯನ್ನು ಪರಿಚಯಿಸುವ ನಿರ್ಧಾರ ಕೈಗೊಂಡಿದೆ. ಶೀಘ್ರದಲ್ಲೇ ಇದು ಜಾರಿಗೆ ಬರುವ ನಿರೀಕ್ಷೆ ಇದೆ.

‘ಡಿಸ್‌ಲೈಕ್’ ಎಂದರೆ, ಒಂದು ಚಿತ್ರ/ಬರಹದ (ಪೋಸ್ಟ್) ವಿರುದ್ಧ ಮತ ಹಾಕುವುದು ಎಂದರ್ಥವಲ್ಲ. ಬಳಕೆದಾರನಿಗೆ ಆ ಚಿತ್ರ/ಬರಹ ಇಷ್ಟವಾಗದಿದ್ದಲ್ಲಿ ಆ ಭಾವನೆಯನ್ನು ವ್ಯಕ್ತಪಡಿಸಲು ‘ಡಿಸ್‌ಲೈಕ್’ ಗುಂಡಿ ಪರಿಚಯಿಸಲಾಗಿದೆ. ವಾಸ್ತವದಲ್ಲಿ ‘ಡಿಸ್‌ಲೈಕ್’ ಗುಂಡಿಯ ಬಗ್ಗೆ ಬಳಕೆದಾರನ ಯೋಚನೆ ಏನಿದೆಯೋ ಅದಕ್ಕಿಂತಲೂ ಇದು ಭಿನ್ನವಾಗಿದೆ’ ಎಂದು ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಸ್ಪಷ್ಟಪಡಿಸಿದ್ದಾರೆ.

ಫೇಸ್‌ಬುಕ್‌ನ ಪ್ರಧಾನ ಕಚೇರಿ ಇರುವ ಕ್ಯಾಲಿಫೋರ್ನಿಯಾದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಈ ಗುಣವೈಶಿಷ್ಠ್ಯವನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಫೇಸ್‌ಬುಕ್‌ನಲ್ಲಿ ‘ಲೈಕ್’ ಬಟನ್‌ನಂತೆಯೇ ‘ಡಿಸ್‌ಲೈಕ್’ ಗುಂಡಿಯನ್ನೂ ಪರಿಚಯಿಸಬೇಕು ಎಂದು ಬಳಕೆದಾರರು ಹಲವು ವರ್ಷಗಳಿಂದ ಒತ್ತಡ ಹೇರುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.