ಬೆಂಗಳೂರು: ಸಂಗೀತ ನಾಟಕ ಅಕಾಡೆಮಿಯ 2013–14ನೇ ಸಾಲಿನ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಕ್ಕೆ ರಾಜ್ಯದ ನಾಲ್ವರು ಕಲಾವಿದರು ಆಯ್ಕೆ ಆಗಿದ್ದಾರೆ.

ಸಂಗೀತ ಕ್ಷೇತ್ರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಿಂದೂಸ್ತಾನಿ ಸಂಗೀತ ಕಲಾವಿದ ಧನಂಜಯ ಹೆಗಡೆ, ಬೆಂಗಳೂರಿನ ಕರ್ಣಾಟಕ ಸಂಗೀತ ಕಲಾವಿದ ಟಿ.ಎಸ್.ಪಟ್ಟಾಭಿರಾಮ ಪಂಡಿತ್, ರಂಗಭೂಮಿ ಕ್ಷೇತ್ರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಕಲಾವಿದ ಅನಂತ ಹೆಗಡೆ, ಹಾಗೂ ನೃತ್ಯ ಕ್ಷೇತ್ರದಲ್ಲಿ ಬೆಂಗಳೂರಿನ ಕೂಚಿಪುಡಿ ಕಲಾವಿದೆ ಪ್ರತೀಕ್ಷಾ ಕಾಶಿ ಅವರನ್ನು ಆಯ್ಕೆ ಮಾಡಲಾಗಿದೆ.

ಸಂಗೀತ ನಾಟಕ ಅಕಾಡೆಮಿ 2013 -2014ನೇ ಸಾಲಿನ ಪುರಸ್ಕಾರಕ್ಕೆ ಒಟ್ಟು 64 ಕಲಾವಿದರನ್ನು ಆಯ್ಕೆ ಮಾಡಿದೆ. 40 ವರ್ಷದೊಳಗಿನ ಕಲಾವಿದರಿಗೆ ನೀಡಲಾಗುವ ಈ ಪುರಸ್ಕಾರವು ₹ 25 ಸಾವಿರ ನಗದನ್ನೂ ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.