ಪಟ್ನಾ (ಪಿಟಿಐ): ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಬಿರುಸಿನಿಂದ ಸಾಗಿದೆ. ಮೊದಲೆರಡು ಗಂಟೆಗಳಲ್ಲಿ ಶೇಕಡ 13ರಷ್ಟು ಮತದಾರರು ತಮ್ಮ ಹಕ್ಕು ಚುಲಾಯಿಸಿದ್ದಾರೆ.

ಐದು ಹಂತಗಳ ಪೈಕಿ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿರುವ ಎಲ್ಲಾ 49 ಕ್ಷೇತ್ರಗಳಲ್ಲಿ ಶಾಂತಿಯುತ ವಾತಾವರಣ ವರದಿಯಾಗಿದೆ.

‘ಬೆಳಿಗ್ಗೆ 9 ಗಂಟೆಯ ವರೆಗೆ ಶೇ 13ರಷ್ಟು ಮತದಾನವಾಗಿದೆ. ಶಾಂತ ವಾತಾವರಣವಿದ್ದು, ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ’ ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಆರ್.ಲಕ್ಷ್ಮಣನ್ ಅವರು ತಿಳಿಸಿದ್ದಾರೆ.

ಬಂಕಾದಲ್ಲಿ ಹೆಚ್ಚು ಮತದಾನ: ಮೊದಲೆರಡು ಗಂಟೆಗಳಲ್ಲಿ ಬಂಕಾ ಕ್ಷೇತ್ರದಲ್ಲಿ ಅತಿಹೆಚ್ಚು ಶೇ 14ರಷ್ಟು ಮತದಾನವಾಗಿದೆ. ಸಮಷ್ಟೀಪುರದಲ್ಲಿ ಅತಿ ಕಡಿಮೆ ಶೇ 7ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

10 ಜಿಲ್ಲೆಗಳಲ್ಲಿ ವ್ಯಾಪಿಸಿರುವ 49 ವಿಧಾನಸಭೆ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಒಟ್ಟು 1.35 ಕೋಟಿ ಮತದಾರರು ಹಕ್ಕು ಚಲಾಯಿಸುವ ನಿರೀಕ್ಷೆಗಳಿವೆ. 54 ಮಹಿಳೆಯರು ಸೇರಿದಂತೆ ಒಟ್ಟು 583 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.