ಪಟ್ನಾ/ಹೈದರಾಬಾದ್/ಬೆಂಗಳೂರು (ಪಿಟಿಐ/ಐಎಎನ್‌ಎಸ್): ವಿಧಾನಸಭೆ ಚುನಾವಣೆಯಲ್ಲಿ ಬಿಹಾರದ ಜನತೆ ನೀಡಿರುವ ತೀರ್ಪನ್ನು ಸ್ವಾಗತಿಸುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಹೇಳಿದ್ದಾರೆ. ಈ ಮೂಲಕ ಅವರು ಚುನಾವಣೆಯಲ್ಲಿ ಎದುರಾದ ಸೋಲನ್ನು ಒಪ್ಪಿಕೊಂಡಿದ್ದಾರೆ.

‘ಬಿಹಾರ ಜನತೆಯ ತೀರ್ಪನ್ನು ನಾವು ಗೌರವಿಸುತ್ತೇವೆ. ಅಭೂತಪೂರ್ವ ಜಯ ಗಳಿಸಿದ ನಿತೀಶ್ ಕುಮಾರ್ ಹಾಗೂ ಲಾಲೂ ಪ್ರಸಾದ್ ಅವರಿಗೆ ಅಭಿನಂದನೆಗಳು’ ಎಂದು ಷಾ ಅವರು ಟ್ವೀಟ್ ಮಾಡಿದ್ದಾರೆ.

ರಾಜಕೀಯ ಕಾರ್ಯತಂತ್ರಕ್ಕೆ ಹೆಸರಾಗಿರುವ ಷಾ ಅವರು ಪಕ್ಷದ ಅಧ್ಯಕ್ಷ ಪಟ್ಟಕ್ಕೆ ಏರಿದ ಬಳಿಕ ದೊರೆತ ಎರಡನೇ ಸೋಲು ಇದಾಗಿದೆ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿಯೂ ಕೇಸರಿ ಪಕ್ಷವು ಹೀನಾಯ ಸೋಲು ಕಂಡಿತ್ತು.

ಆತ್ಮ ವಿಮರ್ಶೆಗೆ ಸಕಾಲ: ‘ಭವಿಷ್ಯದಲ್ಲಿ ಸಂಘಟಿತ ಪ್ರಯತ್ನ, ಸಮನ್ವಯ, ಉತ್ತಮ ತಂತ್ರ ರೂಪಿಸಿಲು, ತಿದ್ದಿಕೊಳ್ಳಲು ಹಾಗೂ ಆತ್ಮ ವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ.ಮತ್ತೊಮ್ಮೆ ಬಿಹಾರಿಗಳಿಗೆ ಸಲಾಮ್’ ಎಂದು ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹ ಅವರು ಟ್ವೀಟ್ ಮಾಡಿದ್ದಾರೆ.

ಅಲ್ಲದೇ, ‘ಈ ಬರಹ ಸದಾ ‘ವಾಲ್’ನಲ್ಲಿ (ಟ್ವಿಟ್ಟರ್ ವಾಲ್) ಇರಲಿದೆ’ ಎಂದೂ ಅವರು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಮೋದಿ ರಥ ನಿಲ್ಲಿಸಿದ ಬಿಹಾರ!: ನಿತೀಶ್, ಲಾಲೂ, ಸೋನಿಯಾ ಹಾಗೂ ರಾಹುಲ್ ಅವರಿಗೆ ಅಭಿನಂದನೆಗಳು. ಬಿಹಾರವು 1991–92ರಲ್ಲಿ ಅಡ್ವಾಣಿ ಅವರ ರಥವನ್ನು ತಡೆದಿತ್ತು. ಇದೀಗ ಮೋದಿ ಅವರ ರಥವನ್ನು ನಿಲ್ಲಿಸಿದೆ. ಬಿಹಾರದ ಜನತೆಗೂ ಅಭಿನಂದನೆಗಳು’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮಾಡಿದ್ದಾರೆ.

ಸ್ಪಷ್ಟ ಬಹುಮತ ನೀಡಿದ್ದು ಒಳ್ಳೆಯದು: ‘ಮಹಾಮೈತ್ರಿಕೂಟಕ್ಕೆ ಜನತೆ ಸ್ಪಷ್ಟ ಬಹುಮತ ನೀಡಿದೆ.ಅತಂತ್ರ ವಿಧಾನಸಭೆ ಸೃಷ್ಟಿಯಾಗದಿರುವುದು ಒಳ್ಳೆಯದು. ರಾಜಕೀಯ ಅನಿಶ್ಚಿತತೆಗೆ ಅದು ಕೊನೆ ಹಾಡಿದೆ. ನಾವು ಜನಾದೇಶವನ್ನು ಒಪ್ಪಿಕೊಳ್ಳುತ್ತೇವೆ.ಅವರ ಎದುರು ಬಾಗುತ್ತೇವೆ’ ಎಂದು ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ತಿಳಿಸಿದ್ದಾರೆ.

ಆಶ್ಚರ್ಯಕರ: ಮತ್ತೊಂದೆಡೆ, ‘ಬಿಹಾರ ಫಲಿತಾಂಶ ಆಶ್ಚರ್ಯಕರ. ಪಕ್ಷದ ಸೋಲಿಕ ಕಾರಣಗಳನ್ನು ವಿಶ್ಲೇಷಣೆ ಮಾಡಲಾಗುವುದು’ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಇದೇ ವೇಳೆ, ‘ಜಾತಿ ಧ್ರುವೀಕರಣದಿಂದ ಮಹಾಮೈತ್ರಿಕೂಟ ಜಯಿಸಿದೆ. ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ದೊರೆತಿಲ್ಲ. ನಾವು ಜನತೆಯ ತೀರ್ಪನ್ನು ಗೌರವಿಸುತ್ತೇವೆ’ ಎಂದು ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.