ದಕ್ಷಿಣ ಅಮೆರಿಕದ ಅತ್ಯಂತ ದೊಡ್ಡ ರಾಷ್ಟ್ರವಾದ ಬ್ರೆಜಿಲ್‌ನ ಜನತೆ ರಾಷ್ಟ್ರಾಧ್ಯಕ್ಷರ ಆಯ್ಕೆಗೆ ಕಳೆದ ವಾರ ನಡೆದ ಅತ್ಯಂತ ತುರುಸಿನ ಚುನಾವಣೆಯಲ್ಲಿ ಎಡಪಂಥೀಯ ನಾಯಕಿ ಡಿಲ್ಮಾ ರೌಸೆಫ್ ಅವರನ್ನು ಪುನರಾಯ್ಕೆ ಮಾಡಿದ್ದಾರೆ. ಬಡತನದ ಪ್ರಮಾಣ ತಗ್ಗಿಸುವ ಜತೆಗೆ ನಿರುದ್ಯೋಗ ಮಟ್ಟವನ್ನು ಅಂಕೆಯಲ್ಲಿರಿಸಿ ಗಮನಸೆಳೆದ ಡಿಲ್ಮಾ ಅವರು ಮಧ್ಯಪಂಥೀಯ ಎದುರಾಳಿ ಏಸಿಯೊ ನೆವೆಸ್ ವಿರುದ್ಧ ಅತ್ಯಲ್ಪ ಮುನ್ನಡೆ ಸಾಧಿಸಿ ಗೆಲುವಿನ ನಿಟ್ಟುಸಿರು ಬಿಟ್ಟಿದ್ದಾರೆ.

ಡಿಲ್ಮಾ ಅವರೆಡೆಗೆ ಬಡತನ ಹಾಗೂ ನಿರುದ್ಯೋಗ ನಿಯಂತ್ರಿಸಿದ್ದಕ್ಕೆ ಜನಮೆಚ್ಚುಗೆ ಇತ್ತಾದರೂ ಅವರ ನೇತೃತ್ವದ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಹಗರಣದ ಆರೋಪ ಕೂಡ ಜೋರಾಗಿಯೇ ಇತ್ತು. ಅಲ್ಲದೇ ಸುಮಾರು ಹತ್ತು ವರ್ಷಗಳ ಕಾಲ ನಿಬ್ಬೆರಗು ಮೂಡಿಸಿದ್ದ ರಾಷ್ಟ್ರದ ಆರ್ಥಿಕ ಪ್ರಗತಿಯು ಡಿಲ್ಮಾ ಅವರು ಅಧಿಕಾರಕ್ಕೆ ಬಂದಾಗಿನಿಂದ ತೀರಾ ನೀರಸವೆನಿಸುವಷ್ಟು ಮಂದವಾಗಿಬಿಟ್ಟಿತ್ತು. ಇದನ್ನು ಬಹಳ ಚೆನ್ನಾಗಿಯೇ ಬಳಸಿಕೊಂಡ ಏಸಿಯೊ ಅವರು ಸರ್ಕಾರದ ಭ್ರಷ್ಟಾಚಾರ ಹಗರಣ ಹಾಗೂ ಮಂದಗತಿಯ ಆರ್ಥಿಕತೆಗಳನ್ನು ತೀಕ್ಷ್ಣವಾಗಿ ಟೀಕಿಸಿ ಸರ್ಕಾರವನ್ನು ಹರಿದು ಮುಕ್ಕಿದ್ದರು.

ಚುನಾವಣೆಗೆ ಮುನ್ನ ಒಂದು ಹಂತದಲ್ಲಂತೂ, ಅಂದರೆ ಸೆಪ್ಟೆಂಬರ್ ಆರಂಭದಲ್ಲಿ ನಡೆಸಿದ್ದ ಜನಾಭಿಪ್ರಾಯ ಸಮೀಕ್ಷೆಗಳ ಪ್ರಕಾರ ಏಸಿಯೊ ನೆವೆಸ್ ಅವರೇ ಜನಬೆಂಬಲದಲ್ಲಿ ಮುಂದಿದ್ದರು ಕೂಡ. ಆದರೆ ಚುನಾವಣೆ ದಿನ ಹತ್ತಿರವಾದಂತೆ ಜನಾಭಿಪ್ರಾಯ ಡಿಲ್ಮಾ ಅವರೆಡೆಗೆ ತುಸು ವಾಲಿತು. ಅಂತಿಮವಾಗಿ ವರ್ಕರ್‌್ಸ ಪಾರ್ಟಿಯ ಡಿಲ್ಮಾ ಅವರು ಎರಡನೇ ಹಾಗೂ ಅಂತಿಮ ಸುತ್ತಿನ ಚುನಾವಣೆಯಲ್ಲಿ ಶೇ ೫೧.೪ ಮತಗಳನ್ನು ಪಡೆದು ಜಯಶಾಲಿಯಾದರೆ, ಎದುರಾಳಿ ಸೋಷಿಯಲ್ ಡೆಮಾಕ್ರಸಿ ಪಕ್ಷದ ಸೆನೆಟರ್ ಏಸಿಯೊ ಶೇ ೪೮.೫ ಮತಗಳನ್ನು ಪಡೆದು ಅತ್ಯಂತ ಕಡಿಮೆ ಅಂತರದಲ್ಲಿ ಸೋಲುಂಡರು.

ಅಂದಹಾಗೆ ಈ ಚುನಾವಣೆಗೆ ನಡೆದ ಪ್ರಚಾರ ಅಭಿವೃದ್ಧಿಯ ಕಾರ್ಯಕ್ರಮಗಳ ಹೆಸರಿನಲ್ಲೇನೂ ನಡೆಯಲಿಲ್ಲ. ಪರಸ್ಪರ ಭ್ರಷ್ಟಾಚಾರ ಆರೋಪ, ವೈಯಕ್ತಿಕ ನಿಂದನೆ ಹಾಗೂ ಕಾವೇರಿದ ಚರ್ಚೆಗಳ ಮೊರೆತವೇ ಹೆಚ್ಚಾಗಿತ್ತು. ಬ್ರೆಜಿಲ್‌ನಲ್ಲಿ ಹೆಚ್ಚುತ್ತಿರುವ ಧ್ರುವೀಕರಣವನ್ನು ಇವು ಎತ್ತಿ ತೋರಿಸಿದವು. ಜತೆಗೆ ರೌಸೆಫ್ ಅವರ ಈ ಗೆಲುವು ವರ್ಕರ್‌್ಸ ಪಾರ್ಟಿಯು ೧೨ ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದಾಗಿನಿಂದ ಬ್ರೆಜಿಲ್‌ನಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಕೂಡ ಪ್ರತಿಬಿಂಬಿಸಿದೆ.

೧೯೯೦ರ ದಶಕದಲ್ಲಿ ಆಗ ಅಧಿಕಾರದಲ್ಲಿದ್ದ ಸೋಷಿಯಲ್ ಡೆಮಾಕ್ರಟ್‌್ಸ ಪಕ್ಷ ರೂಪಿಸಿದ್ದ ಆರ್ಥಿಕ ಸ್ಥಿರತೆಯ ಯೋಜನೆಗಳನ್ನೇ ಆಧರಿಸಿಯೇ ೨೦೦೩ರಲ್ಲಿ ಮೊದಲ ಬಾರಿಗೆ ಅಧಿಕಾರ ಹಿಡಿದ ವರ್ಕರ್‌್ಸ ಪಾರ್ಟಿ ಕೂಡ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಾ ಬಂದಿದೆ. ಅದರಂತೆ, ಎಂಟು ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ಲೂಯಿಜ್ ಡ ಸಿಲ್ವ ಮತ್ತು ನಂತರ ನಾಲ್ಕು ವರ್ಷ ಆಡಳಿತ ನಡೆಸಿದ ರೌಸೆಫ್ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಆಕ್ರಮಣಕಾರಿಯಾಗಿ ವಿಸ್ತರಿಸಿದರು.

ಈ ಕಾರ್ಯಕ್ರಮಗಳು ಲಕ್ಷಾಂತರ ಬ್ರೆಜಿಲಿಯನ್ನರನ್ನು ಬಡತನದ ಕೂಪದಿಂದ ಮೇಲಕ್ಕೆತ್ತಿದವು. ಬಡತನ ನಿರ್ಮೂಲನೆಗಾಗಿ ಮಾಡುವ ವೆಚ್ಚದ ಜನಪ್ರಿಯತೆಯನ್ನು ಮನಗಂಡಿದ್ದ ಪ್ರತಿಸ್ಪರ್ಧಿ ನೆವೆಸ್ ಕೂಡ ತಾವು ಈ ಕಾರ್ಯಕ್ರಮಗಳನ್ನು ಕೈಬಿಡುವುದಿಲ್ಲ ಎಂದು ಪ್ರಚಾರದ ವೇಳೆ ಜನರಿಗೆ ಭರವಸೆ ನೀಡಿದ್ದರು. ಡಿಲ್ಮಾ ಅವರು ಬಡವರು ಮತ್ತು ಶ್ರಮಿಕ ವರ್ಗದ ಜನರಿಗಾಗಿ ತಮ್ಮ ಸರ್ಕಾರ ಜಾರಿಗೊಳಿಸಿದ ಕಾರ್ಯಕ್ರಮಗಳನ್ನಷ್ಟೇ ನೆಚ್ಚಿಕೊಂಡಿದ್ದರು.

ಅವರ ಆರ್ಥಿಕ ನೀತಿಗಳು, ಅವರ ಅಧಿಕಾರಾವಧಿಯುದ್ದಕ್ಕೂ ಕಾಡಿದ ಮಂದಗತಿಯ ಆರ್ಥಿಕ ಬೆಳವಣಿಗೆ ಹಾಗೂ ಈ ವರ್ಷ ರಾಷ್ಟ್ರ ಕಂಡ ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಅವರಿಗೆ ಎದುರಾಳಿಗಳಿಂದ ತೀವ್ರ ಟೀಕೆಗಳು ಎದುರಾದವು. ಇದೇ ವೇಳೆ ಬ್ರೆಜಿಲ್‌ನ ಹಣಕಾಸು ಮಾರುಕಟ್ಟೆ ಕೂಡ ವಿಚಿತ್ರ ತುಯ್ದಾಟವನ್ನೂ ಕಂಡಿದ್ದು ರೌಸೆಫ್ ಅವರ ಆರ್ಥಿಕತೆಯ ನಿರ್ವಹಣಾ ವೈಖರಿ ಬಗ್ಗೆ ಸಂಶಯಗಳನ್ನು ಹುಟ್ಟುಹಾಕಿತ್ತು. ಆದರೆ ಒಂದೊಮ್ಮೆ ಮಾರ್ಕ್‌್ಸವಾದಿ ಗೆರೆಲ್ಲಾ ಹೋರಾಟಗಾರ್ತಿಯಾಗಿದ್ದು ಸೇನಾ ಸರ್ವಾಧಿಕಾರತ್ವದ ವಿರುದ್ಧ ಸೆಣಸಿದ್ದ ೬೬ ವರ್ಷದ ಡಿಲ್ಮಾ ರೌಸೆಫ್ ತಮ್ಮ ವಿರುದ್ಧದ ಟೀಕೆಗಳನ್ನು ಅಲ್ಲಗಳೆದರು.

ಅಲ್ಲದೇ, ಆರ್ಥಿಕತೆಯ ಮೇಲೆ ಸರ್ಕಾರದ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸುವ ತಮ್ಮ ನೀತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ತಮ್ಮ ಹಿಂದಿನ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಜನಪ್ರಿಯರಲ್ಲದ ಗಿಡೊ ಮ್ಯಾನ್‌ಟೆಗಾ ಸೇರಿದಂತೆ ಯಾರನ್ನೇ ಆದರೂ ಬದಲಾಯಿಸಲು ತಾವು ಮುಕ್ತ ಮನಸ್ಸು ಹೊಂದಿರುವುದಾಗಿಯೂ ಹೇಳಿದ್ದರು. ಹೀಗೆ ತೀವ್ರ ಪೈಪೋಟಿಯ ಸ್ಪರ್ಧೆಯಲ್ಲಿ ಮರುಆಯ್ಕೆ ಆಗಿರುವ ಡಿಲ್ಮಾ ಅವರ ಮುಂದೆ ಈಗ ದೊಡ್ಡ ಸವಾಲೇ ಇದೆ.

ಡಿಲ್ಮಾ ಅವರು ಹಣಕಾಸು ಮಾರುಕಟ್ಟೆಯಲ್ಲಿನ ತಲ್ಲಣಗಳನ್ನು ನಿಭಾಯಿಸುವ ಜತೆಗೆ ವರ್ಕರ್ಸ್ ಪಾರ್ಟಿಯ ವಿಶ್ವಾಸವನ್ನೇ ಕಂಗೆಡಿಸಿರುವ ರಾಷ್ಟ್ರೀಯ ತೈಲ ಕಂಪೆನಿ ಪೆಟ್ರೊಬ್ರ್ಯಾಸ್‌ನ ಲಂಚ ಹಾಗೂ ಅಕ್ರಮ ಲೇವಾದೇವಿ ಪ್ರಕರಣದ ವಿಚಾರಣೆ ಎದುರಿಸಬೇಕಾಗಿದೆ. ಡಿಲ್ಮಾ ಅವರಿಗೆ ಎದುರಾದ ತೀವ್ರ ಪೈಪೋಟಿಯು ಭ್ರಷ್ಟಾಚಾರದ ಬಗ್ಗೆ ಜನ ಬೇಸತ್ತಿರುವುದನ್ನು ನಿಚ್ಚಳವಾಗಿ ತೋರಿಸಿದೆ. ‘ವರ್ಕರ್‌್ಸ ಪಾರ್ಟಿಗೂ ಬೇರೆ ಪಕ್ಷಗಳಿಗೂ ಈಗ ವ್ಯತ್ಯಾಸವೇನೂ ಉಳಿದಿಲ್ಲ’ ಎನ್ನುವ ಜೋಸ್ ಅಬೆಲ್ ಅವರ ಮಾತು ಇದಕ್ಕೆ ನಿದರ್ಶನ.

ಆರ್ಥಿಕ ಹಿಂಜರಿತದಲ್ಲಿಯೂ ನಿರುದ್ಯೋಗ ಪ್ರಮಾಣ ಅತ್ಯಂತ ಕಡಿಮೆ ಮಟ್ಟದಲ್ಲಿ ಇದ್ದುದು, ಜನರು ಲಂಚಗುಳಿತನಕ್ಕಿಂತ ಆರ್ಥಿಕ ಸ್ಥಿರತೆಗೆ ಆದ್ಯತೆ ನೀಡಿದ್ದು ಹಾಗೂ ಸರ್ಕಾರ ಬದಲಾದರೆ ಸಮಾಜ ಕಲ್ಯಾಣ ಕಾರ್ಯಕ್ರಮಗಳು ಕೂಡ ಬದಲಾಗುತ್ತವೆ ಎಂಬ ಜನರ ಅನಿಸಿಕೆ ಡಿಲ್ಮಾ ಅವರನ್ನು ಸೋಲಿನಿಂದ ಪಾರುಮಾಡಿವೆ ಎನ್ನಬಹುದು. ‘ಡಿಲ್ಮಾ ಅವರು ಮಹಾನ್ ನಾಯಕಿಯಲ್ಲದೇ ಇರಬಹುದು. ಆದರೆ ಕಾರ್ಮಿಕ ವರ್ಗದ ಬಗ್ಗೆ ಅಷ್ಟೇನೂ ಕಾಳಜಿ ಇಲ್ಲದ ಏಸಿಯೊ ಅವರು ಆಯ್ಕೆಯಾಗಿದ್ದರೆ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಗಿರುತ್ತಿತ್ತು.

ಹೀಗಾಗಿ ಎರಡು ಕೆಟ್ಟ ಆಯ್ಕೆಗಳಲ್ಲಿ ನಾನು ಕಡಿಮೆ ಕೆಟ್ಟದ್ದನ್ನೇ ಆಯ್ಕೆ ಮಾಡಿಕೊಂಡೆ’ ಎನ್ನುತ್ತಾರೆ ೨೮ರ ಯುವಕ ಡೀಗೊ ಬರ್ನಾರ್ಡೊ. ಇದು ಬರ್ನಾರ್ಡೊ ಒಬ್ಬನ ಮಾತಲ್ಲ; ಇದೇ ಧಾಟಿಯ ಮಾತು ಹಲವರದ್ದೂ ಆಗಿದೆ. ಫಲಿತಾಂಶದ ನಂತರ ಚುನಾವಣೆಯ ಗೆಲುವಿಗಾಗಿ ರೌಸೆಫ್ ಅವರನ್ನು ಅಭಿನಂದಿಸಿದ ನೆವೆಸ್ ಟಿ.ವಿ ಭಾಷಣದಲ್ಲಿ ಮಾತನಾಡಿ, ‘ಬ್ರೆಜಿಲ್ ರಾಷ್ಟ್ರವನ್ನು ಒಗ್ಗೂಡಿಸುವುದೇ ಈಗಿನ ಅತ್ಯಂತ ದೊಡ್ಡ ಆದ್ಯತೆ’ ಎಂದಿದ್ದಾರೆ. ರೌಸೆಫ್ ಕೂಡ ‘ರಾಜಿ ಸಂಧಾನ’ದ ಮಾತುಗಳನ್ನು ಆಡಿದ್ದಾರೆ. ‘ರಾಷ್ಟ್ರಾಧ್ಯಕ್ಷೆಯಾಗಿ ನಾನು ಚರ್ಚೆಗಳಿಗೆ ಮುಕ್ತಳಾಗಿದ್ದೇನೆ’ ಎಂದಿದ್ದಾರೆ.

ವರ್ಕರ್‌್ಸ ಪಕ್ಷದ ಅತ್ಯಲ್ಪ ಮುನ್ನಡೆಯು ರಾಷ್ಟ್ರದಲ್ಲಿನ ವರ್ಗ ಸಂಘರ್ಷವನ್ನು ಕೂಡ ಪ್ರತಿಫಲಿಸಿದೆ. ಡಿಲ್ಮಾ ಅವರು ಬಡವರೇ ಹೆಚ್ಚಾಗಿರುವ ಈಶಾನ್ಯ ಭಾಗದಲ್ಲಿ ಪ್ರಯಾಸವೇ ಇಲ್ಲದೆ ಜಯಗಳಿಸಿದ್ದರೆ ನೆವೆಸ್ ರಾಷ್ಟ್ರದ ಅತ್ಯಂತ ಸಿರಿವಂತ ಹಾಗೂ ಜನದಟ್ಟಣೆಯ ಪ್ರಾಂತ್ಯವಾದ ಸಾವೊಪೌಲೊದಲ್ಲಿ ಸುಲಭವಾಗಿ ಗೆದ್ದಿದ್ದಾರೆ. ೧೯೮೦ರಲ್ಲಿ ಅಸ್ತಿತ್ವಕ್ಕೆ ಬಂದ ವರ್ಕರ್‌್ಸ ಪಕ್ಷವು ಇದೀಗ ನಾಲ್ಕನೇ ಬಾರಿಗೆ ಅಧಿಕಾರ ಹಿಡಿಯುತ್ತಿದೆ. ಅಲ್ಲದೇ ಪಕ್ಷದ ಮುಖಂಡರು ೨೦೧೮ರಲ್ಲಿ ನಡೆಯಲಿರುವ ಮುಂದಿನ ಚುನಾವಣೆಯಲ್ಲೂ ಅಧಿಕಾರ ಉಳಿಸಿಕೊಳ್ಳುವುದರ ಮೇಲೆ ಕಣ್ಣು ನೆಟ್ಟಿದ್ದಾರೆ.

ಹೀಗಾಗಿಯೇ, ಈ ಹಿಂದೆ ಎರಡು ಸಲ ರಾಷ್ಟ್ರಾಧ್ಯಕ್ಷರಾಗಿದ್ದ ಡ ಸಿಲ್ವ (೨೦೦೩ರಿಂದ ೨೦೧೦ರವರೆಗೆ ) ಅವರೇ ಮುಂದಿನ ಚುನಾವಣೆಯಲ್ಲಿ ರಾಷ್ಟಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕೆಂಬ ಮಾತುಗಳನ್ನು ಈಗಾಗಲೇ ಆಡತೊಡಗಿದ್ದಾರೆ. ಇದೇ ಸಂದರ್ಭದಲ್ಲಿ ಡಿಲ್ಮಾ ಅವರಿಗೆ ಮತ್ತೊಂದು ಅವಧಿಗೆ ಅಧಿಕಾರ ನೀಡಿದ್ದಕ್ಕೆ ಹಲವರಿಗೆ ಸಮಾಧಾನವಿದ್ದರೂ ಕೆಲವರಿಗೆ ಒಂದೇ ಪಕ್ಷ ಹೀಗೆ ದೀರ್ಘಕಾಲ ಅಧಿಕಾರದಲ್ಲಿರುವುದು ಸರಿಯಲ್ಲ ಎಂಬ ಅನಿಸಿಕೆಯೂ ಇದೆ. ಅರ್ಜೆಂಟೀನಾ ಮತ್ತು ವೆನೆಜುವೆಲಾಗಳಲ್ಲಿ ಆದಂತೆ ಇಲ್ಲಿ ಕೂಡ ವರ್ಕರ್‌್ಸ ಪಾರ್ಟಿಯು ಸಾರ್ವಜನಿಕ ಸಂಸ್ಥೆಗಳ ಮೇಲಿನ ನಿಯಂತ್ರಣವನ್ನು ಇನ್ನಷ್ಟು ಬಿಗಿಗೊಳಿಸಬಹುದು ಎಂಬ ಭೀತಿಯೂ ಇದ್ದೇ ಇದೆ.

ಇದೀಗ ಡಿಲ್ಮಾ ಅವರ ಮುಂದೆ ಎರಡು ಆಯ್ಕೆಗಳಿವೆ. ತಮ್ಮ ವಿರುದ್ಧದ ಟೀಕೆಗಳನ್ನೆಲ್ಲಾ ಉಪೇಕ್ಷಿಸಿ ಆರ್ಥಿಕ ಹಿಂಜರಿತ ಹಾಗೂ ಹಣದುಬ್ಬರದ ನಡುವೆಯೂ ಕೈಹಿಡಿದು ಗೆಲುವಿನ ದಡ ಸೇರಿಸಿದ ನೀತಿಗಳನ್ನೇ ಮುಂದುವರಿಸಲು ನಿರ್ಧರಿಸಬಹುದು ಅಥವಾ ಎದುರಾಳಿ ಅಭ್ಯರ್ಥಿ ಪರವಾಗಿಯೂ ಭಾರಿ ಸಂಖ್ಯೆಯಲ್ಲೇ ಮತಗಳು ಚಲಾವಣೆ ಆಗಿರುವುದನ್ನು ಗಂಭೀರವಾಗಿ ತೆಗೆದುಕೊಂಡು ತಮ್ಮ ನೀತಿಗಳಲ್ಲಿ ಬದಲಾವಣೆ ಮಾಡಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.