ಹಳಿಯಾಳ: ತಾಲ್ಲೂಕಿನಾದ್ಯಂತ ಕಳೆದ 3–4 ದಿನಗಳಿಂದ ನಿರಂತರ ಗುಡುಗು ಸಿಡಿಲಿನ ಮಳೆ ಬಿದ್ದ ಪರಿಣಾಮ ಆಪೂಸ್ ಸಹಿತ ಮಾವಿನ ಹಣ್ಣಿನ ಬೆಲೆ ತೀರಾ ಕುಸಿದು, ಮಾವು ಬೆಳೆದ ರೈತರಿಗೆ ಹಾನಿಯಾಗಿದೆ.

ಎರಡು ವಾರಗಳ ಹಿಂದೆ ಆಪೂಸ್ (ಅಲ್ಫಾನ್ಸೋ) ಮಾವಿನ ಹಣ್ಣಿನ ಫಸಲಿಗೆ ಪ್ರತಿ ಡಜನ್ ಗೆ ₨ 350 ಇದ್ದು ಕಳೆದ 3–4 ದಿನಗಳಿಂದ ಡಜನ್ ಹಣ್ಣಿಗೆ ₨100 ರಿಂದ 80ಕ್ಕೆ ಇಳಿಮುಖವಾಗಿ ಮಾವಿನ ಹಣ್ಣಿನ ಬೆಳೆಗಾರರಿಗೆ ಹಾನಿಯಾಗಿದೆ ಎಂದು ಬೆಳೆಗಾರರು ತಮ್ಮ ಅಳಲು ತೋಡಿಕೊಂಡರು.

ಆಪೂಸ್ ಮಾವಿನ ಹಣ್ಣಿನ ಜೊತೆಗೆ ಪೈರಿ, ಮಲಗೋವಾ, ನಿಲಂ, ಕಲ್ಮಿ, ತೋತಾಪರಿ, ಮಲ್ಲಿಕಾ, ಎಸ್–13, ಈ ಹಣ್ಣಿನ ಬೆಲೆಗಳು ಸಹ ತೀರಾ ಕನಿಷ್ಠ ಮಟ್ಟದಲ್ಲಿ ಮಾರಾಟವಾಗುತ್ತಿದ್ದು, ಮಾರಾಟಗಾರರು ಹಣ್ಣಿನ ಶೇಖರಣೆ ವ್ಯವಸ್ಥೆ ಇಲ್ಲದೆ ಖರೀದಿದಾರರ ಮನಸೋ ಇಚ್ಛೆಯಂತೆ ಹಣ್ಣನ್ನು ಮಾರಾಟ ಮಾಡುತ್ತಿದ್ದಾರೆ.

ಹಳಿಯಾಳ ತಾಲ್ಲೂಕಿನಾದ್ಯಂತ ಒಟ್ಟು 600 ಹೆಕ್ಟೆರ್‌ಗಳಲ್ಲಿ ಮಾವಿನ ಫಸಲನ್ನು ಬೆಳೆಯಲಾಗಿದ್ದು, ತಾಲ್ಲೂಕಿನಾದ್ಯಂತ 27 ರೈತರ ಮಾವಿನ ಬೆಳೆಗಳು ಸಂಪೂರ್ಣ ಹಾನಿಯಾದ ಬಗ್ಗೆ ತೋಟಗಾರಿಕಾ ನಿರ್ದೇಶಕರು ವರದಿ ತಯಾರಿಸಿದ್ದಾರೆ.

ಈ ಹಿಂದೆ ಹಳಿಯಾಳದ ಆಪೂಸ್ ವಿದೇಶಗಳಿಗೆ ರಫ್ತು ಆಗುತ್ತಿದ್ದ ಕಾರಣ ಪಟ್ಟಣದಲ್ಲಿ ಆಪೂಸ್ ಹಣ್ಣಿನ ಮಾರಾಟದಲ್ಲಿ ಕೊರತೆಯಾಗಿ ದರವೂ ಹೆಚ್ಚಿದ್ದು, ಮಾವಿನ ಹಣ್ಣಿನ ಬೆಳೆಗಾರರಿಗೆ ಆರ್ಥಿಕ ಸ್ಥಿತಿ ಸಹ ಕೆಲ ಮಟ್ಟಿಗೆ ಚೇತರಿಕೆಯಾಗಿರುತ್ತಿತ್ತು. ಪ್ರಸಕ್ತ ಸಾಲಿನಲ್ಲಿ ಮಾವಿನ ಹಣ್ಣು ವಿದೇಶಗಳಿಗೆ ರಫ್ತಾಗುವುದನ್ನು ನಿಷೇಧಿಸಿದ್ದರಿಂದ ಮಹಾರಾಷ್ಟ್ರ, ಗೋವಾ, ಆಂಧ್ರ, ಕೇರಳ ಮತ್ತಿತರರ ಭಾಗಗಳಿಂದ ಬರುವ ದಲ್ಲಾಳಿಗಳು ಸಹ ಪ್ರಸಕ್ತ ಸಾಲಿನಲ್ಲಿ ಮಾವಿನ ಹಣ್ಣಿನ ಬೆಳೆಗಾರರ ಫಸಲನ್ನು ಖರೀದಿಸಲು ಬಾರದೇ ಇರುವುದರಿಂದ ರೈತರಿಗೆ ತೀರಾ ಆರ್ಥಿಕ ಹಿನ್ನಡೆಯಾಗಿದೆ.

ಈಗಾಗಲೇ ತಾಲ್ಲೂಕಿನ ಸಾಂಬ್ರಾಣಿ ಮತ್ತಿತರರ ಹೋಬಳಿಗಳಲ್ಲಿ ಗುಡುಗು ಸಿಡಿಲಿನ ಮಳೆಯಿಂದ ಹಾನಿಗಿಡಾದ ಮಾವಿನ ಬೆಳೆ ಫಸಲಿನ ಸ್ಥಳೀಯ ತೋಟಗಾರಿಕೆ ಇಲಾಖೆಯಿಂದ ಸಮೀಕ್ಷೆ ನಡೆಸಿ ಪ್ರತಿ ಕೆ.ಜಿ. ಮಾವಿನ ಬೆಳೆಗೆ ₨ 20 ದರದಂತೆ ₨13 ಲಕ್ಷಕ್ಕೂ ಮಿಕ್ಕಿ ಮಾವಿನ ಫಸಲಿನ ಹಾನಿಯನ್ನು ಅಂದಾಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.