ಸುವರ್ಣ ವಿಧಾನಸೌಧ (ಬೆಳಗಾವಿ): ಮೈಸೂರು ರೇಷ್ಮೆ ಸೀರೆಯ ಬಗ್ಗೆ ವಿಧಾನ ಪರಿಷತ್ನಲ್ಲಿ ಗುರುವಾರ ಸ್ವಾರಸ್ಯಕರ ಚರ್ಚೆ ನಡೆಯಿತು. ರೇಷ್ಮೆ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವತಃ ಈ ಚರ್ಚೆಯಲ್ಲಿ ಭಾಗವಹಿಸಿ ಸದನದಲ್ಲಿ ನಗುವಿನ ಅಲೆ ಎಬ್ಬಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ನ ಪಟೇಲ್ ಶಿವರಾಂ ಅವರು ರಾಜ್ಯದಲ್ಲಿನ ರೇಷ್ಮೆ ಕೃಷಿಯ ಉತ್ತೇಜನಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತಾಗಿ ಮುಖ್ಯಮಂತ್ರಿ ಅವರಿಗೆ ಪ್ರಶ್ನೆ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ರೇಷ್ಮೆ ಕೃಷಿ ಉತ್ತೇಜನಕ್ಕೆ ಬಜೆಟ್ನಲ್ಲಿ ರೂ 30 ಕೋಟಿ ಮೀಸಲಿಡಲಾಗಿದೆ. ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿದೆ ಎನ್ನುತ್ತಲೇ ಮಾತನ್ನು ಮೈಸೂರು ರೇಷ್ಮೆ ಸೀರೆಯತ್ತ ಹೊರಳಿಸಿದರು.

‘ಜಾಗತಿಕ ಮಟ್ಟದಲ್ಲಿ ಮೈಸೂರು ರೇಷ್ಮೆ ಸೀರೆಗೆ ಖ್ಯಾತಿ ಇದೆ. ಈ ಸೀರೆ ಗುಣಮಟ್ಟದಲ್ಲಿ ಉತ್ಕೃಷ್ಟವಾದುದು’ ಎಂದು ಹೇಳಿದ ಅವರು, ‘ಏನಮ್ಮಾ ತಾರಾ... ಮೈಸೂರು ಸಿಲ್ಕ್ ಸೀರೆ ತಗೊಂಡಿದ್ದಿಯೇನಮ್ಮಾ’ ಎಂದು ಪ್ರಶ್ನಿಸಿದಾಗ ಸದನದಲ್ಲಿ ನಗುವಿನ ಅಲೆ. ಅಷ್ಟಕ್ಕೇ ಸುಮ್ಮನಿರದೆ ಸೀರೆಯ ಗುಣಮಟ್ಟಕ್ಕೆ ಉದಾಹರಣೆ ಯೊಂದನ್ನು ನೀಡಿದ ಅವರು, ‘ಈ ಸೀರೆ 50ರಿಂದ 60 ವರ್ಷ ಬಾಳಿಕೆ ಬರುತ್ತದೆ’ ಎಂದರು. ‘ಮದುವೆ, ಶೋಭನಕ್ಕೆ ಈ ಸೀರೆಯನ್ನು ಕೊಡುವ ಸಂಪ್ರದಾಯವಿದೆ’ ಎಂದು ಮಾತು ಮುಂದುವರಿಸಿದ ಸಿದ್ದರಾಮಯ್ಯ, ‘ಶೋಭನ ಅಂದ್ರೆ ಏನು ಗೊತ್ತಾ...?’ ಎಂದು ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದಾಗಲೂ ಸಭೆಯಲ್ಲಿ ನಗು ಉಂಟಾಯಿತು.

‘ಇಲ್ಲ ಸರ್, ನೀವೇ ವಿವರಿಸಿ’ ಎಂದು ಬಿಜೆಪಿ ಸದಸ್ಯರೊಬ್ಬರು ಸಿದ್ದರಾಮಯ್ಯ ಅವರನ್ನು ಕೇಳಿದರು. ‘ಹಳ್ಳಿಯಲ್ಲಿ ಹುಟ್ಟಿದವನಿಗೆ ಶೋಭನ ಅಂದ್ರೆ ಏನು ಅಂತ ಗೊತ್ತಿಲ್ಲದಿದ್ದರೆ....? ಸಭಾಪತಿಗಳಿಗೆ ಇದು ಅರ್ಥವಾಗಿದೆ’ ಎಂದು ಅವರು ಪ್ರತಿಕ್ರಿಯಿಸಿದಾಗ ಸದನದಲ್ಲಿ ಮತ್ತೆ ನಗೆ ಬುಗ್ಗೆ ಸ್ಫೋಟಿಸಿತು.

ಚೀನಾ ರೇಷ್ಮೆ ನಿಷೇಧಿಸಿ: ಚೀನಾ ರೇಷ್ಮೆ ಬಟ್ಟೆಗಳನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ರಾಜ್ಯದ ರೇಷ್ಮೆ ಬಟ್ಟೆಗಳಿಗೆ ಬೇಡಿಕೆ ಸಿಗುತ್ತಿಲ್ಲ. ಚೀನಾ ರೇಷ್ಮೆ ಆಮದಿಗೆ ನಿಷೇಧ ಹೇರಬೇಕು ಎಂದು ಜೆಡಿಎಸ್ನ ಸಂದೇಶ್ ನಾಗರಾಜ್ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.