ನವದೆಹಲಿ (ಪಿಟಿಐ): ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸ್ಥಾನ ಪಡೆದಿರುವ ಕರ್ನಾಟಕದ ಡಿ.ವಿ.ಸದಾನಂದಗೌಡ ಅವರಿಗೆ ಮಹತ್ವದ ರೈಲ್ವೆ ಖಾತೆ, ಅನಂತ್ ಕುಮಾರ್ ಅವರಿಗೆ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ದೊರೆತರೆ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಅವರಿಗೆ ನಾಗರಿಕ ವಿಮಾನಯಾನ ಖಾತೆ ಒಲಿದಿದೆ.

ಬಿಜೆಪಿ ಹಿರಿಯ ಮುಖಂಡ ರಾಜನಾಥ್ ಸಿಂಗ್ ಅವರು ಕೇಂದ್ರದ ನೂತನ ಗೃಹ ಸಚಿವರಾಗಿ ನೇಮಕಗೊಂಡಿದ್ದರೆ ಸುಷ್ಮಾ ಸ್ವರಾಜ್ ಅವರಿಗೆ ವಿದೇಶಾಂಗ ವ್ಯವಹಾರಗಳ ಹೊಣೆ ವಹಿಸಲಾಗಿದೆ. ಅರುಣ್ ಜೇಟ್ಲಿ ಅವರಿಗೆ ಹಣಕಾಸು ಖಾತೆ ನೀಡಲಾಗಿದೆ.

ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ಬಳಿಕ ನರೇಂದ್ರ ಮೋದಿ ಅವರು ಖಾತೆ ಹಂಚಿಕೆ ಮಾಡಿದ್ದು, ಜೇಟ್ಲಿ ಅವರಿಗೆ ರಕ್ಷಣಾ ಖಾತೆಯನ್ನು ಹೆಚ್ಚುವರಿಯಾಗಿ ವಹಿಸಿದ್ದಾರೆ. ಏಳು ಸಚಿವಾಲಯಗಳಡಿ 17 ಸಂಬಂಧಿತ ಖಾತೆಗಳನ್ನು ತಂದಿರುವುದು ಖಾತೆ ಹಂಚಿಕೆಯ ವಿಶೇಷ.

ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಮೋದಿ ಅವರು ತಮ್ಮ ಬಳಿ ಸದ್ಯ ಐದು ಅಧಿಕೃತ ಖಾತೆ, ಪ್ರಮುಖ ನೀತಿ ನಿರೂಪಕ ವಿಷಯಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರದ ಜೊತೆಗೆ ಹಂಚಿಕೆಯಾಗದೆ ಉಳಿದ ಖಾತೆಗಳನ್ನು ತಮ್ಮ ಬಳಿ ಇರಿಸಿಕೊಂಡಿದ್ದಾರೆ.

ಖಾತೆ ಹಂಚಿಕೆ ವಿವರ
ನರೇಂದ್ರ ಮೋದಿ –ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿ, ಅಣು ಇಂಧನ ಇಲಾಖೆ, ಬಾಹ್ಯಾಕಾಶ ಇಲಾಖೆ, ಎಲ್ಲಾ ಪ್ರಮುಖ ನೀತಿ ನಿರೂಪಕ ವಿಷಯಗಳು ಹಾಗೂ ಹಂಚಿಕೆಯಾಗದೇ ಉಳಿದ ಖಾತೆ

ಸಂಪುಟ ದರ್ಜೆ ಸಚಿವರು
ರಾಜನಾಥ್ ಸಿಂಗ್ – ಗೃಹ ಖಾತೆ
ಸುಷ್ಮಾ ಸ್ವರಾಜ್– ವಿದೇಶಾಂಗ ಹಾಗೂ ಭಾರತದ ಸಾಗರೋತ್ತರ ವ್ಯವಹಾರಗಳು
ಅರುಣ್ ಜೇಟ್ಲಿ – ಹಣಕಾಸು, ರಕ್ಷಣೆ ಹಾಗೂ ಕಾರ್ಪೋರೆಟ್ ವ್ಯವಹಾರಗಳ ಖಾತೆ
ವೆಂಕಯ್ಯ ನಾಯ್ಡು - ಸಂಸದೀಯ ವ್ಯವಹಾರ, ನಗರಾಭಿವೃದ್ಧಿ, ಹೌಸಿಂಗ್ ಮತ್ತು ನಗರ ಪ್ರದೇಶದ ಬಡತನ ನಿರ್ಮೂಲನೆ
ನಿತಿನ್ ಗಡ್ಕರಿ - ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಶಿಪ್ಪಿಂಗ್ ಖಾತೆ
ಡಿ.ವಿ.ಸದಾನಂದಗೌಡ -ರೈಲ್ವೆ
ಉಮಾ ಭಾರತಿ - ಜಲಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಗಂಗಾ ಪುನಃಶ್ಚೇತನ
ಡಾ.ನಜ್ಮಾ ಎ. ಹೆಪ್ತುಲ್ಲಾ - ಅಲ್ಪಸಂಖ್ಯಾತ ಖಾತೆ
ಗೋಪಿನಾಥರಾವ್ ಮುಂಡೆ - ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ , ಕುಡಿಯುವ ನೀರು ಹಾಗೂ ನೈರ್ಮಲೀಕರಣ
ರಾಮ್ ವಿಲಾಸ್ ಪಾಸ್ವಾನ್ - ಗ್ರಾಹಕ ವ್ಯವಹಾರ, ಆಹಾರ ಹಾಗೂ ಪಡಿತರ ವಿತರಣೆ
ಕಲ್ ರಾಜ್ ಮಿಶ್ರಾ - ಅತಿಚಿಕ್ಕ, ಚಿಕ್ಕ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆ
ಮೇನಕಾ ಸಂಜಯ್ ಗಾಂಧಿ - ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಅನಂತ್ ಕುಮಾರ್ - ರಾಸಾಯನಿಕ ಹಾಗೂ ರಸಗೊಬ್ಬರ
ರವಿಶಂಕರ್ ಪ್ರಸಾದ್ - ಸಂವಹನ ಹಾಗೂ ಮಾಹಿತಿ ತಂತ್ರಜ್ಞಾನ, ಕಾನೂನು ಮತ್ತು ನ್ಯಾಯ
ಅಶೋಕ್ ಗಜಪತಿ ರಾಜು - ನಾಗರಿಕ ವಿಮಾನಯಾನ
ಅನಂತ್ ಗೀತೆ - ಬೃಹತ್ ಕೈಗಾರಿಕೆ ಹಾಗೂ ಸರ್ಕಾರಿ ಉದ್ದಿಮೆಗಳು.
ಹರ್ ಸಿಮೃತ್ ಕೌರ್ ಬಾದಲ್ - ಆಹಾರ ಸಂಸ್ಕರಣೆ ಕೈಗಾರಿಕೆ
ನರೇಂದ್ರ ಸಿಂಗ್ ತೋಮರ್ - ಗಣಿ, ಉಕ್ಕು,ಕಾರ್ಮಿಕ ಹಾಗೂ ಉದ್ಯೋಗ
ಜುವಲ್ ಓರಮ್ - ಬುಡಕಟ್ಟು ವ್ಯವಹಾರಗಳ ಖಾತೆ
ರಾಧಾಮೋಹನ್ ಸಿಂಗ್ -ಕೃಷಿ
ಥಾವರ್ ಚಂದ್ ಗೆಹ್ಲೋಟ್ - ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ
ಸ್ಮೃತಿ ಜುಬಿನ್ ಇರಾನಿ - ಮಾನವ ಸಂಪನ್ಮೂಲ ಅಭಿವೃದ್ಧಿ
ಡಾ. ಹರ್ಷವರ್ಧನ್ - ಆರೋಗ್ಯ ಹಾಗೂ ಕುಟುಂಬ ಕಲ್ಯಾಣ

ರಾಜ್ಯ ಖಾತೆ ಸಚಿವರು
ವಿ.ಕೆ.ಸಿಂಗ್ - ಈಶಾನ್ಯ ರಾಜ್ಯಗಳ ಅಭಿವೃದ್ಧಿ (ಸ್ವತಂತ್ರ), ವಿದೇಶಾಂಗ ವ್ಯವಹಾರ, ಭಾರತದ ಸಾಗರೋತ್ತರ ವ್ಯವಹಾರ
ಇಂದ್ರಜಿತ್ ಸಿಂಗ್ ರಾವ್ - ಯೋಜನಾ (ಸ್ವತಂತ್ರ), ಸಂಖ್ಯಾ ಹಾಗೂ ಯೋಜನೆಗಳ ಅನುಷ್ಠಾನ (ಸ್ವತಂತ್ರ), ರಕ್ಷಣೆ
ಸಂತೋಷ್ ಕುಮಾರ್ ಗಂಗ್ವಾರ್ - ಟೆಕ್ಸ್‌ಟೈಲ್ಸ್ (ಸ್ವತಂತ್ರ), ಸಂಸದೀಯ ವ್ಯವಹಾರಗಳು, ಜಲಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಗಂಗಾ ಪುನಃಶ್ಚೇತನ
ಶ್ರೀಪಾದ್ ನಾಯ್ಕ್ – ಸಂಸ್ಕೃತಿ (ಸ್ವತಂತ್ರ), ಪ್ರವಾಸೋದ್ಯಮ (ಸ್ವತಂತ್ರ)
ಧರ್ಮೇಂದ್ರ ಪ್ರಧಾನ್ – ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ (ಸ್ವತಂತ್ರ)
ಸರ್ವಾನಂದ್ ಸೋನೊವಾಲ್ – ಕೌಶಲ ಅಭಿವೃದ್ಧಿ, ವಾಣಿಜೋದ್ಯಮ, ಯುವಜನ ಹಾಗೂ ಕ್ರೀಡಾ ಇಲಾಖೆ(ಸ್ವತಂತ್ರ)
ಪ್ರಕಾಶ್ ಜಾವಡೇಕರ್ – ಮಾಹಿತಿ ಹಾಗೂ ಪ್ರಸಾರ (ಸ್ವತಂತ್ರ), ಪರಿಸರ, ಅರಣ್ಯಹಾಗೂ ಹವಾಮಾನ ಬದಲಾವಣೆ (ಸ್ವತಂತ್ರ), ಸಂಸದೀಯ ವ್ಯವಹಾರ
ಪಿಯುಷ್ ಗೋಯಲ್ – ಇಂಧನ (ಸ್ವತಂತ್ರ), ಕಲ್ಲಿದ್ದಲು (ಸ್ವತಂತ್ರ), ಹೊಸ ಮತ್ತು ನವೀಕರಿಸಬಹುದಾದ ಇಂಧನ (ಸ್ವತಂತ್ರ)
ಡಾ.ಜಿತೇಂದ್ರ ಸಿಂಗ್ – ವಿಜ್ಞಾನ ಮತ್ತು ತಂತ್ರಜ್ಞಾನ (ಸ್ವತಂತ್ರ), ಭೂ ವಿಜ್ಞಾನ (ಸ್ವತಂತ್ರ), ಪ್ರಧಾನಿ ಸಚಿವಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಅಣು ಇಂಧನ, ಬಾಹ್ಯಾಕಾಶ
ನಿರ್ಮಲಾ ಸೀತಾರಾಮನ್ – ವಾಣಿಜ್ಯ ಹಾಗೂ ಕೈಗಾರಿಕಾ (ಸ್ವತಂತ್ರ), ಹಣಕಾಸು, ಕಾರ್ಪೋರೆಟ್ ವ್ಯವಹಾರಗಳು
ಜಿ.ಎ.ಸಿದ್ದೇಶ್ವರ್ – ನಾಗರಿಕ ವಿಮಾನಯಾನ
ಮನೋಜ್ ಸಿನ್ಹಾ – ರೈಲ್ವೆ
ನಿಹಾಲ್ ಚಂದ್ – ರಾಸಾಯನಿಕ ಹಾಗೂ ರಸಗೊಬ್ಬರ
ಉಪೇಂದ್ರ ಕುಶ್ವಾಹ್ – ಗ್ರಾಮೀಣಾಭಿವೃದ್ಧಿ, ಪಂಜಾಯತ್ ರಾಜ್, ಕುಡಿಯುವ ನೀರು ಹಾಗೂ ನೈರ್ಮಲೀಕರಣ
ಪಿ.ರಾಧಾಕೃಷ್ಣನ್ – ಬೃಹತ್ ಗಾತ್ರದ ಕೈಗಾರಿಕೆ ಹಾಗೂ ಸರ್ಕಾರಿ ಉದ್ದಿಮೆಗಳು
ಕಿರಣ್ ರಿಜಿಜು – ಗೃಹ
ಕೃಷ್ಣ ಪಾಲ್ ಗುಜ್ಜಾರ್ – ರಸ್ತೆ ಸಾರಿಗೆ ಹಾಗೂ ಹೆದ್ದಾರಿ, ಶಿಪ್ಪಿಂಗ್
ಡಾ.ಸಂಜೀವ್ ಕುಮಾರ್ ಬನ್ಯಾಲ್ – ಕೃಷಿ, ಆಹಾರ ಸಂಸ್ಕರಣೆ ಕೈಗಾರಿಕೆಗಳು
ಮನ್‌ಸುಖ್‌ಭಾಯ್ ವಾಸವ – ಬುಡಕಟ್ಟು ವ್ಯವಹಾರಗಳು
ರಾವ್‌ಸಾಹೇಬ್ ದಾನ್ವೆ– ಗ್ರಾಹಕ ವ್ಯವಹಾರಗಳು, ಆಹಾರ ಹಾಗೂ ಪಡಿತರ ವಿತರಣೆ
ವಿಷ್ಣು ದೇವ್ ಸಾಯ್ – ಗಣಿ, ಉಕ್ಕು, ಕಾರ್ಮಿಕ ಹಾಗೂ ಉದ್ಯೋಗ
ಸುದರ್ಶನ್ ಭಗತ್ –  ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.