ನವದೆಹಲಿ (ಪಿಟಿಐ): ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹಂದ್ಯಾಳ್ ಲಕ್ಷ್ಮಿನಾರಾಯಣಸ್ವಾಮಿ ದತ್ತು ಅವರು ಸುಪ್ರೀಂ ಕೋರ್ಟ್‌ನ 42ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಭಾನುವಾರ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ 63 ವರ್ಷದ ಎಚ್.ಎಲ್. ದತ್ತು ಅವರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪ್ರಮಾಣವಚನ ಬೋಧಿಸಿದರು.

ದತ್ತು ಅವರು ನ್ಯಾಯಾಂಗದ ಅತ್ಯುನ್ನತ ಹುದ್ದೆ ಅಲಂಕರಿಸಿದ ಕರ್ನಾಟಕದ ನಾಲ್ಕನೇ ನ್ಯಾಯಮೂರ್ತಿ ಮತ್ತು ಬಳ್ಳಾರಿ ಜಿಲ್ಲೆಯ ಮೊದಲಿಗರು. ಇದಕ್ಕೂ ಹಿಂದೆ ರಾಜ್ಯದ ಇ.ಎಸ್. ವೆಂಕಟರಾಮಯ್ಯ (1989), ಎಂ. ಎನ್. ವೆಂಕಟಾಚಲಯ್ಯ (1993), ಎಸ್. ರಾಜೇಂದ್ರ ಬಾಬು (2004) ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು.

‘2ಜಿ’ ತರಂಗಾಂತರ ಹಂಚಿಕೆ ಹಗರಣದ ವಿಚಾರಣೆ ನಡೆಸುತ್ತಿರುವ ಪೀಠದ ಅಧ್ಯಕ್ಷರೂ ಆಗಿರುವ ದತ್ತು ಅವರ ಅಧಿಕಾರಾವಧಿ ಇನ್ನೂ 14 ತಿಂಗಳ ಕಾಲ ಇದೆ. ಅವರು 2015ರ ಡಿಸೆಂಬರ್ 3ರಂದು ನಿವೃತ್ತರಾಗಲಿದ್ದಾರೆ. ‘ಭಾರತದ ಸರ್ವೋಚ್ಚ ನ್ಯಾಯಾಲಯ ಜಗತ್ತಿನಲ್ಲೇ ಅತ್ಯುತ್ತಮ ನ್ಯಾಯದಾನ ಸಂಸ್ಥೆ. ಇದರ ಘನತೆಯನ್ನು ಮತ್ತಷ್ಟು ಎತ್ತರಿಸಲು ದೇಶವಾಸಿಗಳ ಹಾರೈಕೆಯನ್ನು ಅಪೇಕ್ಷಿಸುವೆ. ಇದರಿಂದ ನನಗೆ ಧೈರ್ಯ ಮತ್ತು ವಿಶ್ವಾಸ ವೃದ್ಧಿಸುತ್ತದೆ’ ಎಂದು ಮುಖ್ಯ ನ್ಯಾಯಮೂರ್ತಿ ನೇಮಕಾತಿ ಕಾಗದಪತ್ರಗಳು ಪ್ರಧಾನಿ ಕಾರ್ಯಾಲಯಕ್ಕೆ ಕಳೆದ ತಿಂಗಳು ತಲುಪಿದ ಸಂದರ್ಭದಲ್ಲಿ ದತ್ತು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.