ಮಂಗಳವಾರ, 1 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಂಸ್ಕೃತಿಕ ಪರಂಪರೆಯ ವಸ್ತುಸಂಗ್ರಹಾಲಯ ಅನಾವರಣ

Published : 7 ಫೆಬ್ರುವರಿ 2015, 6:32 IST
ಫಾಲೋ ಮಾಡಿ
Comments

ಧಾರವಾಡ: ‘ಸಾಹಿತ್ಯ, ಕಲೆ ಹಾಗೂ ಸಾಂಸ್ಕೃತಿಕ ಲೋಕದ ಕೇಂದ್ರ ಬಿಂದುವಾಗಿರುವ ಧಾರವಾಡದಲ್ಲಿ ಸಾಂಸ್ಕೃತಿಕ ಪರಂಪರೆಯ ವಸ್ತು ಸಂಗ್ರಹಾಲಯದ ಕೊರತೆ ಇತ್ತು. ಆ ಕೊರತೆಯನ್ನು ಇಂಟ್ಯಾಕ್‌ ಸಂಸ್ಥೆ ಇದೀಗ ನಿವಾರಣೆ ಮಾಡಿದೆ’ ಎಂದು ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಹೇಳಿದರು.

ಇಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿ ಶುಕ್ರವಾರ ಸಾಂಸ್ಕೃತಿಕ ಪರಂಪರೆಯ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಇಂಟ್ಯಾಕ್ ಸಂಸ್ಥೆಯು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ವಸ್ತು ಸಂಗ್ರಹಾಲಯವನ್ನು ಪಾಲಿಕೆ ಆವರಣದಲ್ಲಿ ತೆರೆದಿದ್ದು, ಅದಕ್ಕೆ ಬೇಕಾದ ಅಗತ್ಯ ಸಹಕಾರ, ಸೌಲಭ್ಯವನ್ನು ನೀಡುವ ನಿಟ್ಟಿನಲ್ಲಿ ಪಾಲಿಕೆ ಹಾಗೂ ಸರ್ಕಾರ ಲಕ್ಷ್ಯ ವಹಿಸಬೇಕು’ ಎಂದರು.

ಸಂಗೀತ, ಸಾಹಿತ್ಯ, ಕಲೆ ಹಾಗೂ ಸಾಮಾಜಿಕ ಸೇವೆಯ ಮೂಲಕ ಗಮನ ಸೆಳೆದ ಸಾಧಕರ ವ್ಯಕ್ತಿಗಳ ಚಿತ್ರಣ ಈ ವಸ್ತು ಸಂಗ್ರಹಾಲಯದಲ್ಲಿ ಅನಾವರಣಗೊಂಡಿದೆ. ಒಂದೇ ಸೂರಿನಡಿ ೪೫ ಕ್ಕೂ ಹೆಚ್ಚು ಗಣ್ಯರ ಭಾವಚಿತ್ರಗಳ ಪೋಟೋ ಗ್ಯಾಲರಿ, ಅದರೊಂದಿಗೆ ಆಯಾ ವ್ಯಕ್ತಿಗಳ ಸಾಧನೆ, ಸೇವೆಯ ಮಾಹಿತಿಯೂ ಇಲ್ಲಿದೆ.

ಶ್ರೇಷ್ಠ ಸಾಹಿತಿ, ಕವಿಗಳಿಗೆ ಲಭಿಸಿದ ಪುರಸ್ಕಾರ, ಪ್ರಶಸ್ತಿ ಸೇರಿದಂತೆ ಅವರ ಹಳೆಯ ಜೀವನ ಮೆಲಕು ಹಾಕುವ ಕಪ್ಪುಬಿಳುಪಿನ ಚಿತ್ರಗಳೂ ಪ್ರದರ್ಶನಕ್ಕಿವೆ. ಖ್ಯಾತ ಛಾಯಾಚಿತ್ರಕಾರ ಕುಮಾರ ಕಾಟೇನಹಳ್ಳಿ ಅವರ ಕೈಚಳಕದಲ್ಲಿ ಸಿದ್ಧಗೊಂಡಿರುವ ಸಾಧಕರ ಪೋಟೋ ಗ್ಯಾಲರಿ ಎಲ್ಲರ ಕಣ್ಮನ ಸೆಳೆಯುತ್ತಿದೆ.

ಡಾ.ವಿ.ಕೃ.ಗೋಕಾಕ, ಬೆಟಗೇರಿ ಕೃಷ್ಣಶರ್ಮ, ಪಂ.ಮಲ್ಲಿಕಾರ್ಜುನ ಮನಸೂರ, ಪಂ.ಭೀಮಸೇನ ಜೋಶಿ, ಡಾ.ಪುಟ್ಟರಾಜ ಗವಾಯಿ, ಪಂ.ಪಂಚಾಕ್ಷರಿ ಗವಾಯಿ, ಡಾ.ಗಂಗೂಬಾಯಿ ಹಾನಗಲ್‌ ಸೇರಿದಂತೆ ಇತರ ಗಣ್ಯರ ಭಾವಚಿತ್ರಗಳು ಇಲ್ಲಿ ಅನಾವರಣಗೊಂಡಿವೆ.

೧೬ನೇ ಶತಮಾನದ ಮಂಗರಸ ವಿರಚಿತ ಸೂಪಶಾಸ್ತ್ರದ ಪ್ರತಿ, ಉತ್ತರ ಕರ್ನಾಟಕ ಭಾಗದಿಂದ ಮೊದಲ ಬಾರಿಗೆ ಲೆಫ್ಟಿನಂಟ್ ಜನರಲ್ ಆಗಿ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿದ ಎಸ್.ಸಿ.ಸರದೇಶಪಾಂಡೆ ಅವರು ಧರಿಸಿದ್ದ ಸೈನಿಕ ಬಟ್ಟೆ, ಖ್ಯಾತ ಚಿತ್ರ ಕಲಾವಿದ ಕೆ.ಕೆ.ಹೆಬ್ಬಾರ ರಚಿಸಿದ ಛಾಯಾಚಿತ್ರ ಸೇರಿದಂತೆ ಇನ್ನಿತರ ವೈಶಿಷ್ಯತೆಗಳನ್ನು ಇಲ್ಲಿ ನೋಡಬಹುದು.

ಇಂಟ್ಯಾಕ್ ಸಂಸ್ಥೆಯ ಸಂಚಾಲಕ ಎನ್.ಪಿ.ಭಟ್ಟ, ಶಾಸಕ ಅರವಿಂದ ಬೆಲ್ಲದ, ಮೇಯರ್ ಶಿವು ಹಿರೇಮಠ, ಪಾಲಿಕೆ ವಿರೋಧ ಪಕ್ಷದ ನಾಯಕ ಯಾಸೀನ್‌ ಹಾವೇರಿಪೇಟ, ಪಾಲಿಕೆ ಆಯುಕ್ತ ನೂರ ಮನ್ಸೂರ್‌, ಇಂಟ್ಯಾಕ್‌ ಸಂಸ್ಥೆಯ ಸಂಚಾಲಕ ಎನ್.ಪಿ.ಭಟ್‌್, ಗಿರಿಜಾ ಅರುಣಕುಮಾರ, ಅರ್ಚನಾ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT