ರತ್ನಾಕರವರ್ಣಿ ವೇದಿಕೆ (ವಿದ್ಯಾಗಿರಿ, ಮೂಡುಬಿದಿರೆ): ‘ಮಹಿಳೆಯರ ಹಕ್ಕಿಗಾಗಿ ನಡೆಯುವ ಹೋರಾಟಗಳನ್ನು ಜಾತಿ, ಧರ್ಮ, ವರ್ಗವನ್ನು ಮುಂದಿಟ್ಟುಕೊಂಡು ಒಡೆಯುವ ಕೆಲಸ ಮಾಡಲಾಗುತ್ತಿದೆ. ಮಹಿಳಾ ಹೋರಾಟಗಾರರನ್ನು ಒಟ್ಟುಗೂಡಿಸುವ ಕೆಲಸವನ್ನು ಮಾಡಬೇಕಿದೆ’ ಎಂದು ಹಿರಿಯ ಸಂಶೋಧಕಿ ಡಾ. ಗಾಯತ್ರಿ ನಾವಡ ಅಭಿಪ್ರಾಯಪಟ್ಟರು.

ಇಲ್ಲಿ ನಡೆಯುತ್ತಿರುವ 12ನೇ ನುಡಿಸಿರಿಯಲ್ಲಿ ಭಾಗವಹಿಸಿ ‘ಮಹಿಳಾ ಚಳವಳಿ: ಹೊಸತನದ ಹುಡುಕಾಟ’ ವಿಷಯದ ಕುರಿತು ಮಾತನಾಡಿದ ಅವರು, ‘ರಾಜಕೀಯ, ಸಾಮಾಜಿಕ ಮತ್ತು ಮಾಧ್ಯಮ ಪ್ರೇರಿತವಾಗಿ ಮಹಿಳಾ ಹೋರಾಟಗಳು ದಿಕ್ಕು ತಪ್ಪುತ್ತಿವೆ. ಹೋರಾಟಗಳನ್ನು ಸರಿದಾರಿಗೆ ತರುವ ಕೆಲಸ ಮಾಡಬೇಕಾಗಿದೆ’ ಎಂದು ಹೇಳಿದರು.

‘ಧರ್ಮಾಂಧತೆಯ ಭಯೋತ್ಪಾದನೆಯಿಂದಾಗಿ ಮಹಿಳೆ ಕಷ್ಟ ಪಡುತ್ತಿದ್ದಾಳೆ. ಧರ್ಮಗಳನ್ನು ಮೀರಿ ಲಿಂಗತ್ವದ ನೆಲೆಯಲ್ಲಿ ಒಟ್ಟಾಗಿ ಈ ಸಮಸ್ಯೆಯ ವಿರುದ್ಧ ಹೋರಾಡಬೇಕಿದೆ. ದೆಹಲಿಯಲ್ಲಿ ನಿರ್ಭಯಾ ಪ್ರಕರಣವನ್ನು ವಿರೋಧಿಸಿ ನಡೆಸಿದ ಪ್ರತಿಭಟನೆ, ಇತರ ಅತ್ಯಾಚಾರ ಪ್ರಕರಣಗಳು ನಡೆದಾಗ ಏಕೆ ಕಾಣಲಿಲ್ಲ ಎಂದು ಪ್ರಶ್ನಿಸಿದ ಅವರು, ‘ರಾಜಕೀಯ ಲಾಭಕ್ಕಾಗಿ ಮಹಿಳಾ ಹೋರಾಟಗಳನ್ನು ಹಾದಿತಪ್ಪಿಸುವ ಕೆಲಸ ನಿಲ್ಲಬೇಕು’ ಎಂದು ಪ್ರತಿಪಾದಿಸಿದರು.

‘ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಈ ಪ್ರಕರಣಗಳಿಗೆ ಕಡಿವಾಣ ಹಾಕಬೇಕೆಂದರೆ ಮೊದಲು ಯುವಕರನ್ನು ಹೆಣ್ಣುಮಕ್ಕಳನ್ನು ಗೌರವದಿಂದ ನೋಡುವುದನ್ನು, ಗ್ರಹಿಸುವುದನ್ನು ಕಲಿಸಬೇಕಾಗಿದೆ. ಇದು ಮನೆಗಳಿಂದಲೇ ನಡೆಯಬೇಕು. ಅಲ್ಲದೆ, ಮಹಿಳಾ ಸಾಗಾಟವೂ ಇಂದು ಸಮಾಜಕ್ಕೆ ಕಾಡುತ್ತಿರುವ ದೊಡ್ಡ ಸಮಸ್ಯೆ. ಇದನ್ನು ಬಗೆಹರಿಸಲು ಹೋರಾಟಗಳು ನಡೆಯಬೇಕಿದೆ’ ಎಂದು ಹೇಳಿದರು.

‘ಸ್ವಾತಂತ್ರ್ಯಪೂರ್ವದ ಹೋರಾಟದಿಂದ ಹಿಡಿದು, ಸ್ವಾತಂತ್ರ್ಯೋತ್ತರ ಹೋರಾಟಗಳಲ್ಲಿ ಮಹಿಳೆಯರು ಸಕ್ರಿಯರಾಗಿ ಭಾಗವಹಿಸಿದ್ದಾರೆ. ಮಹಿಳೆಯರು ಬೀದಿಗಿಳಿಯದೆ ಮನೆಯೊಳಗಿದ್ದುಕೊಂಡೇ ಪ್ರತಿಭಟನೆ ನಡೆಸಿದ್ದಾರೆ. ಮಹಿಳಾ ಪರ ಪುರುಷರಿಂದ ಮಹಿಳಾ ಹೋರಾಟಗಳು ಬೆಳೆದು ಬಂದಿದೆ ಅದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ’ ಎಂದು ಹೇಳಿದರು.

‘ಮಹಿಳೆಯರು ಅಧಿಕಾರ ಪಡೆದರೆ ಆಕೆಯ ಪತಿ, ಪುತ್ರರು ಅಧಿಕಾರ ನಡೆಸುತ್ತಾರೆ ಎಂದು ವಾದಿಸುವವರಿಗೆ, ಅನಕ್ಷರಸ್ಥ ಗ್ರಾಮಸ್ಥನೊಬ್ಬ ಊರಿನ ಹಿರಿಯರ, ಸ್ವಾಮೀಜಿಗಳ ನಿರ್ದೇಶನದಂತೆ ಅಧಿಕಾರ ನಡೆಸುತ್ತಿರುವುದು ಯಾಕೆ ಕಾಣಿಸುತ್ತಿಲ್ಲ’ ಎಂದು ಪ್ರಶ್ನಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಇದ್ದರು.

ದೇಶದಲ್ಲಿ ಅಸಹಿಷ್ಣುತೆ ಜಾಸ್ತಿ ಆಗುತ್ತಿದೆ ಎಂದು ವಿರೋಧಿಸಿ ಅನೇಕರು ಪ್ರಶಸ್ತಿಗಳನ್ನು ಮರಳಿಸುತ್ತಿದ್ದಾರೆ. ಆದರೆ, ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಹೀಗೆ ಏಕೆ ಮಾಡಲಿಲ್ಲ?
- ಡಾ. ಗಾಯತ್ರಿ ನಾವಡ,
ಹೋರಾಟಗಾರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.