ಮೈಸೂರು: ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿ ಅವರ ಬದುಕು ಹಾಗೂ ಅವರ ಕೃತಿಗಳ ಕುರಿತ ‘ಎಂದೆಂದೂ ಮುಗಿಯದ ಕಥೆ’ ನಾಟಕವನ್ನು ರಾಜ್ಯದಾದ್ಯಂತ ಪ್ರದರ್ಶಿಸಲು ಇಲ್ಲಿನ ‘ಪರಿವರ್ತನ’ ರಂಗ ತಂಡ ಸಜ್ಜಾಗಿದೆ.

ನಗರದ ಸೋಮಾನಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿರುವ, ರಂಗಕರ್ಮಿ ಎಸ್.ಆರ್. ರಮೇಶ್ ಅವರ ಪರಿಕಲ್ಪನೆ, ವಿನ್ಯಾಸ ಹಾಗೂ ನಿರ್ದೇಶನದ ‘ಎಂದೆಂದೂ ಮುಗಿಯದ ಕಥೆ’ ನಾಟಕ ಈಗಾಗಲೇ 18 ಪ್ರದರ್ಶನಗಳನ್ನು ಕಂಡಿದೆ. 2011ರಲ್ಲಿ ಪ್ರದರ್ಶನಗೊಂಡ ಈ ಪ್ರಯೋಗವನ್ನು ಅನಂತಮೂರ್ತಿ ಇಲ್ಲಿಯ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

‘ಈ ಪ್ರಯೋಗ ಚೆನ್ನಾಗಿದೆ. ಎಲ್ಲೂ ಅತಿರೇಕಕ್ಕೆ ಹೋಗದೆ, ಹೊಗಳದೆ, ತೆಗಳದೆ ಯಥಾವತ್ತಾಗಿ ನಿರೂಪಿಸಿದ್ದಾರೆ ಎಂದು ಮೆಚ್ಚುಗೆಯಾಡಿದ್ದರು. ಬೆಂಗಳೂರಿನ ರಂಗ ಶಂಕರ ರಂಗಮಂದಿರದಲ್ಲಿ ನಡೆದ ಪ್ರದರ್ಶನದಲ್ಲಿ ಕುಟುಂಬ ಸಮೇತರಾಗಿ ಬಂದು ನೋಡಿದ್ದರು. ಹೀಗೆಯೇ ಸಮಕಾಲೀನ ಸಾಹಿತಿಗಳ ಬದುಕು ಹಾಗೂ ಕೃತಿಗಳ ಕುರಿತು ನಾಟಕವಾದರೆ ಹೆಚ್ಚು ಜನರಿಗೆ ತಲುಪಲು ಸಾಧ್ಯ ಎಂದಿದ್ದರು’ ಎಂದು ಸ್ಮರಿಸಿಕೊಳ್ಳುತ್ತಾರೆ ಎಸ್.ಆರ್. ರಮೇಶ್.

ನಾಟಕದಲ್ಲಿ ಏನೇನಿದೆ?: ಅನಂತಮೂರ್ತಿ ಅವರ ‘ಅವಸ್ಥೆ’ ಕಾದಂಬರಿಯಲ್ಲಿಯ ಚಿತ್ರಣವನ್ನು 45 ನಿಮಿಷಗಳವರೆಗೆ ನಾಟಕದಲ್ಲಿ ಕಟ್ಟಿಕೊಡಲಾಗಿದೆ. ನಂತರ ‘ಸಂಸ್ಕಾರ’ ಕಾಂದಬರಿಯ ನಾರಾಣಪ್ಪ ಹಾಗೂ ಪ್ರಾಣೇಶಾಚಾರ್ಯರ ನಡುವಣ ಬೌದ್ಧಿಕ ಸಂಘರ್ಷದ ದೃಶ್ಯಗಳಿವೆ. ‘ಭಾರತೀಪುರ’ ಕಾದಂಬರಿಯ ನಾಯಕ ಜಗನ್ನಾಥ್, ಕೆಳವರ್ಗದವರಿಗೆ ಸಾಲಿಗ್ರಾಮ ಮುಟ್ಟಿಸುವ ಮೂಲಕ ಜಾತಿ ವ್ಯವಸ್ಥೆ ಮೀರುವ ಪ್ರಯತ್ನದ ದೃಶ್ಯವಿದೆ.

ನಂತರ ‘ಆಕಾಶ ಮತ್ತು ಬೆಕ್ಕು’ ಕಥೆಯ ತಂದೆ ಹಾಗೂ ಮಗನ ನಡುವೆ ನಡೆಯುವ ಸಂಘರ್ಷ, ‘ಕ್ಲಿಪ್ ಜಾಯಿಂಟ್’ ಕಥೆಯ ಪಾಶ್ಚಾತ್ಯ ಹಾಗೂ ದೇಸಿ ಸಂಸ್ಕೃತಿಗಳ ವೈರುಧ್ಯ ಅನಾವರಣದ ದೃಶ್ಯಗಳಿರುತ್ತವೆ. ನಾಟಕದ ಕೊನೆಗೆ ‘ಎಂದೆಂದೂ ಮುಗಿಯದ ಕಥೆ’ ನಿರೂಪಣೆ ಇರುತ್ತದೆ. ಯಾವುದೇ ಕಥೆಯು ನಿರಂತರವಾಗಿ ಸಾಗುತ್ತಿರುತ್ತದೆ ಎನ್ನುವುದನ್ನು ಬಿಂಬಿಸುವ ದೃಶ್ಯವಿರುತ್ತದೆ.

ಇದರೊಂದಿಗೆ ಅನಂತಮೂರ್ತಿ ಅವರ ವಿಮರ್ಶೆ, ಸಾಮಾಜಿಕ ಚಿಂತನೆ, ಪರಿಸರ ಕಾಳಜಿ ಕುರಿತ ಲೇಖನಗಳ ನಿರೂಪಣೆ ಇರುತ್ತದೆ. ಅಲ್ಲದೆ, ಅವರ ಬಾಲ್ಯ, ವಿದ್ಯಾಭ್ಯಾಸದ ವಿವರಗಳನ್ನು ಕೊಲಾಜ್ ಮಾಡಲಾಗಿದೆ. ಒಟ್ಟು ಒಂದು ಗಂಟೆ 45 ನಿಮಿಷಗಳ ಈ ನಾಟಕದಲ್ಲಿ ಅನಂತಮೂರ್ತಿಯಾಗಿ ಹಾಗೂ ಕಥೆ, ಕಾದಂಬರಿಗಳ ಪಾತ್ರಗಳಾಗಿ ಜಯರಾಮ್ ತಾತಾಚಾರ್ಯ ಪಾತ್ರ ನಿರ್ವಹಿಸುತ್ತಾರೆ. ಜತೆಗೆ, ‘ಅಧ್ಯಾಪಕ’ ಎನ್ನುವವರು ಅಭಿನಯಿಸುತ್ತಾರೆ. ಉಳಿದ ಕೆಲ ಪಾತ್ರಗಳಲ್ಲಿ ಹೊಸಬರು ಇರುತ್ತಾರೆ.

ಅರುಣ್ಕುಮಾರ್ ಅವರ ಬೆಳಕು, ಮಾಧವ ಖರೆ ಅವರ ರಂಗಸಜ್ಜಿಕೆ, ಬಿ.ಎಂ. ರಾಮಚಂದ್ರ ಅವರ ಪ್ರಸಾಧನ ಇರುತ್ತದೆ.
‘ರಮೇಶ್ ಅವರು ನಾಟಕ ಕುರಿತು ಹೇಳಿದಾಗ ಹೇಗೆ ನಾಟಕ ಮಾಡುವುದೆಂಬ ಚಿಂತೆಯಾಗಿತ್ತು. ಆಮೇಲೆ ಒಂದೊಂದೇ ಕೃತಿಗಳನ್ನು ಆಯ್ದುಕೊಂಡೆವು. ಅದರಲ್ಲೂ ಸಂಸ್ಕಾರ ಕಾದಂಬರಿಯ ನಾರಾಣಪ್ಪ ಪಾತ್ರ ಮಾಡಿದಾಗ ಥ್ರಿಲ್ ಆಗಿದ್ದೆ. ನಾಟಕದೊಳಗೆ ಅನಂತಮೂರ್ತಿ ಪಾತ್ರವಾಗುತ್ತಿದ್ದೆ. ಇದೊಂದು ಸವಾಲಿನ ಪಾತ್ರ. ನಟನಾಗಿ ಒಳ್ಳೆಯ ಅನುಭವ ನನಗೆ. ಮೂಲ ಅನಂತಮೂರ್ತಿ ಎದುರಿಗೆ ಅನಂತಮೂರ್ತಿ ಪಾತ್ರಧಾರಿಯಾಗಿ ಹಾಗೂ ಅವರ ಕಥೆ, ಕಾದಂಬರಿಗಳಲ್ಲಿಯ ಅನಂತಮೂರ್ತಿಯಾಗಿ ಅಭಿನಯಿಸಿದ್ದು ಖುಷಿ ಕೊಟ್ಟಿತ್ತು’ ಎಂದು ಸ್ಮರಿಸುತ್ತಾರೆ ಜಯರಾಮ್ ತಾತಾಚಾರ್.

‘ಅನಂತಮೂರ್ತಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ರಾಜ್ಯದಾದ್ಯಂತ ಈ ಪ್ರಯೋಗವನ್ನು ಪ್ರದರ್ಶಿಸಲು ಸಜ್ಜಾಗುತ್ತಿದ್ದೇವೆ. ಈ ಪ್ರಯೋಗದ ಮೂಲಕ ಅನಂತಮೂರ್ತಿ ಅವರ ಬದುಕು ಕಥೆ, ಕಾದಂಬರಿ, ವಿಮರ್ಶೆ ಅರಿಯಲು ಪ್ರೇಕ್ಷಕರಿಗೆ ಸಾಧ್ಯವಾಗುತ್ತದೆ. ಆಸಕ್ತರು ನಮ್ಮ ಪರಿವರ್ತನ ತಂಡದ ನಟ ಹಾಗೂ ಸಂಘಟಕ ಮಾಧವ ಖರೆ (98451 11038) ಅವರನ್ನು ಸಂಪರ್ಕಿಸಬಹುದು’ ಎಂದು ಹಂಬಲ ನಾಟಕದ ನಿರ್ದೇಶಕ ರಮೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.