ಮೈಸೂರು: ‘ಆಚೆಗೆ ನೂಕಲ್ಪಟ್ಟಿರುವವರು, ನೂಕಲ್ಪಡುತ್ತಿರುವವರು, ಆದಿವಾಸಿಗಳು, ಅಲ್ಪಸಂಖ್ಯಾತರು ಆಮೆಯನ್ನು ಕುಲಚಿಹ್ನೆಯಾಗಿಟ್ಟುಕೊಳ್ಳಬೇಕು’ ಎಂದು ಸಾಹಿತಿ ದೇವನೂರ ಮಹಾದೇವ ಹೇಳಿದರು.

ಆಸ್ಟ್ರೇಲಿಯಾ ಸರ್ಕಾರದ ಆಸ್ಟ್ರೇಲಿಯಾ ಕೌನ್ಸಿಲ್ ಫಾರ್ ದಿ ಆರ್ಟ್ಸ್ ಸಹಭಾಗಿತ್ವದಲ್ಲಿ ಮಾನಸಗಂಗೋತ್ರಿಯ ಇಂಗ್ಲಿಷ್ ಅಧ್ಯಯನ ವಿಭಾಗದಲ್ಲಿ ಆಯೋಜಿಸಿರುವ ‘ಕನಸಿನ ನಂತರ: ಆಸ್ಟ್ರೇಲಿಯಾ ಮೂಲನಿವಾಸಿ ಸಾಹಿತ್ಯ’ ಕುರಿತ ಅಂತರರಾಷ್ಟ್ರೀಯಮಟ್ಟದ ವಿಚಾರ ಸಂಕಿರಣದ ಉದ್ಘಾಟನೆಯಲ್ಲಿ ಸೋಮವಾರ ಅವರು ಆಶಯ ಭಾಷಣ ಮಾಡಿದರು.

‘ಆಮೆಯು ಚಿಪ್ಪು ಇರುವುದರಿಂದ ತನ್ನನ್ನು ರಕ್ಷಿಸಿಕೊಳ್ಳುತ್ತದೆ. ಆಮೆಯ ನಿಧಾನವಾದ ನಡಿಗೆ, ಏಟು ಬಿದ್ದರೂ ಸಾಯದಂತೆ ನೋಡಿಕೊಳ್ಳುವ ಚಿಪ್ಪು, ಅಪಾಯ ಎದುರಾದಾಗ ತಲೆಯನ್ನು ಒಳಗೆ ಎಳೆದುಕೊಳ್ಳುವ ಬಗೆ ಇವೆಲ್ಲವನ್ನೂ ನಾವು ಮೈಗೂಡಿಸಿಕೊಳ್ಳಬೇಕು’ ಎಂದರು.

‘ಆಸ್ಟ್ರೇಲಿಯಾ ಬಗ್ಗೆ ಮತ್ತು ಅಲ್ಲಿನ ಜೀವನ ಹಾಗೂ ಸಾಹಿತ್ಯದ ಬಗ್ಗೆ ಹೆಚ್ಚಾಗಿ ನನಗೆ ತಿಳಿದಿಲ್ಲ. ನಾಲ್ಕಾರು ದಿನಗಳ ಹಿಂದೆ ಒಂದಷ್ಟನ್ನು ಓದಿ ತಿಳಿದುಕೊಂಡಿದ್ದೇನೆ ಅಷ್ಟೇ. ಆಸ್ಟ್ರೇಲಿಯಾಕ್ಕೂ ಹಾಗೂ ಅಲ್ಲಿನ ಚೊಚ್ಚಲ ಮಕ್ಕಳಾದ ಮೂಲವಾಸಿಗಳಿಗೂ ಸಂಬಂಧವಿದೆ. ಆಸ್ಟ್ರೇಲಿಯಾ ಮೂಲನಿವಾಸಿಗಳ ದಂತಕಥೆಗಳಲ್ಲಿ, ಮೂಲನಿವಾಸಿಗಳ ಮೇಲೆ ನಡೆದ ಅಮಾನುಷ ಹಾಗೂ ನರಭಕ್ಷಕ ಕೃತ್ಯಗಳ ಪ್ರಸ್ತಾಪ ಇದೆ. ಐರೋಪ್ಯರ ದಾಳಿಗೆ ತತ್ತರಿಸಿದ ಅಲ್ಲಿನ ಮೂಲನಿವಾಸಿಗಳು ಬಹಳ ನೋವು ಅನುಭವಿಸಿದ್ದಾರೆ. ಅಲ್ಲಿ ಇಂದೂ ಭೂಮಿಗೆ ಪಾಠ ಮಾಡಬಲ್ಲ ದಂತಕತೆಗಳಿವೆ’ ಎಂದು ಹೇಳಿದರು.

‘ಭಾರತದಲ್ಲಿ ಅಪರಿಚಿತರು ಪರಸ್ಪರ ಭೇಟಿಯಾದಾಗ ಸಾಮಾನ್ಯವಾಗಿ ಕೇಳುವ ಮೊದಲ ಪ್ರಶ್ನೆ, ನೀವು ಯಾವ ಜನ? ಈ ರೀತಿ ಕೇಳುವವರು ಜನರೇ, ಹೇಳುವವರೂ ಜನರೇ ಆಗಿರುತ್ತಾರೆ. ಆದರೆ, ಈ ಪ್ರಶ್ನೆ ಯಾಕೆ? ಪರಿಪಾಠ ಯಾಕೆ ಎಂಬುದು ನನ್ನನ್ನು ಅಸಂಗತವಾಗಿ ಕಾಡುತ್ತಿರುವ ಪ್ರಶ್ನೆಯಾಗಿದೆ. ನೀನು ಯಾವ ಜಾತಿಯವನು ಎಂಬುದು ಈ ಪ್ರಶ್ನೆಯ ಒಳಅರ್ಥವಾ-ಗಿದೆ. ಒಂದು ಜಾತಿಗೆ ಸೇರಿದವರು ಒಂದು ಜನ, ಮತ್ತೊಂದು ಜಾತಿಗೆ ಸೇರಿದವರು ಮತ್ತೊಂದು ಜನ. ಇಂದು ಜನರ ನಡುವೆ ಸಂಬಂಧವೇ ಇಲ್ಲ, ಇಡೀ ಜಗತ್ತೇ ಬೇರೆಯಾಗಿದೆ. ಇದನ್ನು ನೆನಪಿಸಿಕೊಂಡರೆ ತುಂಬಾ ವಿಷಾದವಾಗುತ್ತದೆ’ ಎಂದರು.

‘ಇದಕ್ಕಿಂತ ಭೀಕರವಾದುದು ಎಂದರೆ, 1770ರಲ್ಲಿ ಆಸ್ಟ್ರೇಲಿಯಾ ಸುತ್ತಿದ ಬ್ರಿಟನ್ ನಾವಿಕ ಕ್ಯಾಪ್ಟನ್ ಜೇಮ್ಸ್ ಕುಕ್ ಎಂಬಾತ ಸುಮಾರು 60 ಸಾವಿರ ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದ ಲಕ್ಷಾಂತರ ಮೂಲನಿವಾಸಿಗಳನ್ನು ಲೆಕ್ಕಿಸದೆ, ಅವರ ಅಸ್ತಿತ್ವ ಪರಿಗಣಿಸದೇ ಆಸ್ಟ್ರೇಲಿಯಾವನ್ನು ನಿರ್ಜನ ಭೂಮಿ ಎಂದು ಘೋಷಣೆ ಮಾಡಿದ್ದು. ಈ ಐರೋಪ್ಯನ ಕಣ್ಣಿಗೆ ಮೂಲ ನಿವಾಸಿಗಳು ಜನರಾಗಿ ಕಾಣುವುದಿಲ್ಲ. ಇದು ಮನುಷ್ಯತ್ವದ ಭೀಕರ ದುರಂತ’ ಎಂದರು

ನೋವಿಗೆ ಒಳಗಾದವರು ದೇಹಕ್ಕೆ ಮನಸ್ಸಿಗೆ ಶರಣಾಗುವುದರ ಅನಿವಾರ್ಯತೆ, ವಿವೇಕ ಪಡೆಯುತ್ತಾರೆ. ದೈಹಿಕ ಹಸಿವು, ನೋವು ಮತ್ತು ಭಯದ ಪರಿಣಾಮ ನಿಯಂತ್ರಿಸಿಕೊಳ್ಳುವುದು ಒಂದು ಸಾಮರ್ಥ್ಯ. ಆದರೆ, ನಾವು ಇಂದು ನಮ್ಮ ಮಕ್ಕಳಿಗೆ ಹಸಿವಾಗದಂತೆ, ನೋವಾಗದಂತೆ ಮತ್ತು ಭಯವಾಗದಂತೆ ಬೆಳೆಸುತ್ತಿದ್ದೇವೆ. ಹೀಗೆ, ಮಕ್ಕಳನ್ನು ಬೆಳೆಸುತ್ತಿರುವ ಜನಾಂಗಕ್ಕೆ ಆಸ್ಟ್ರೇಲಿಯಾ ಮೂಲವಾಸಿಗಳ ಕಥೆ ಕಪಾಳಕ್ಕೆ ಹೊಡೆಯುವಂತಿದೆ’ ಎಂದರು.

ಆಸ್ಟ್ರೇಲಿಯಾದ ಮೂಲನಿವಾಸಿಗಳ ಕುರಿತ ವಿವಿಧ ದಂತಕಥೆಗಳ ಬಗ್ಗೆ ಅವರು ಉಲ್ಲೇಖಿಸಿದರು.

ವಿಶ್ರಾಂತ ಕುಲಪತಿ ಪ್ರೊ.ಕೆ.ಸಿ. ಬೆಳ್ಳಿಯಪ್ಪ, ಪ್ರೊ.ಸಿ.ಪಿ. ರವಿಚಂದ್ರ ಮಾತನಾಡಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ.ಮಹದೇವ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಸುಮಿತ್ರಾಬಾಯಿ, ಪ್ರೊ.ಕೆ.ಟಿ. ಸುನೀತಾ ಇದ್ದರು.

ನಂತರ ಸಂವಾದ ನಡೆಯಿತು. ಆಸ್ಟ್ರೇಲಿಯಾ ಆದಿವಾಸಿ ಬರಹಗಾರರಾದ ಮೇರಿ ಮುಂಕಾರ, ಡಾ.ಜೀಯಾನೈನ್ ಲೀಯಾನೆ, ಡಾ.ಡೈಲಾನ್ ಕೋಲ್ಮನ್, ಬ್ರೆಂಟನ್ ಮೆಕೆನ್ನ ಮೊದಲಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.