ಚಿತ್ರದುರ್ಗ: ‘ರಂಗಕಾಶಿ’ ಎಂದೇ ಖ್ಯಾತಿಪಡೆದಿರುವ ಹೊಸದುರ್ಗ ತಾಲ್ಲೂಕಿನ ಸಾಣೆಹಳ್ಳಿಯಲ್ಲಿ ಶಿವಕುಮಾರಸ್ವಾಮಿ ಕಲಾಸಂಘದ ವತಿಯಿಂದ ಐದು ದಿನಗಳ ರಾಷ್ಟ್ರೀಯ ನಾಟಕೋತ್ಸವವನ್ನು ಆಯೋಜಿಸಲಾಗಿದ್ದು, ಇದೇ ಭಾನುವಾರದಿಂದ ನಾಟಕೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಾಗುತ್ತಿದೆ.

ನಾಟಕೋತ್ಸವದ ಮೊದಲ ದಿನದ ಭಾನುವಾರ ಕನ್ನಡ ರಾಜ್ಯೋತ್ಸವ. ರಾಜ್ಯೋತ್ಸವವನ್ನು ಕನ್ನಡ ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಚ್.ಜಿ. ಲಕ್ಕಪ್ಪಗೌಡ ಅವರು ಉದ್ಘಾಟಿಸಲಿದ್ದಾರೆ.

ಹಿರಿಯ ರಂಗಕರ್ಮಿ, ನಟ ಎಚ್. ಜಿ ದತ್ತಾತ್ರೇಯ (ದತ್ತಣ್ಣ) ರಾಷ್ಟ್ರೀಯ ನಾಟಕೋತ್ಸವ ಉದ್ಘಾಟಿಸಲಿದ್ದಾರೆ. ಸಂಸದ ಬಿ ಎಸ್ ಯಡಿಯೂರಪ್ಪ ಅವರು ಶಿವಸಂಚಾರದ ನಾಟಕಗಳನ್ನು ಉದ್ಘಾಟಿಸಲಿದ್ದಾರೆ. ಅದೇ ದಿನ ‘ಆತ್ಮಶುದ್ಧಿ’, ‘ಕಲಿಕೆಯ ಹೆಜ್ಜೆಗಳು’, ತೋಟಗಾರಿಕಾ ಬೆಳೆಗಳು’, ‘ಶಿವಸಂಚಾರ-15ರ ಪರಿಚಯ ಪತ್ರ’ ಲೋಕಾರ್ಪಣೆಗೊಳ್ಳಲಿವೆ.

ಕಲಬುರ್ಗಿ ಸ್ಮರಣಾರ್ಥ ವಚನಕಮ್ಮಟ: ಖ್ಯಾಥ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿಯವರ ಹತ್ಯೆ ನಡೆದಿರುವ ಹಿನ್ನಲೆಯಲ್ಲಿ ಅವರ ಗೌರವಾರ್ಥ ನವೆಂಬರ್ 2–3 ರಂದು ಹಗಲು ವೇಳೆಯಲ್ಲಿ ‘ವಚನ ಕಮ್ಮಟ’ ಶಿಬಿರ ನಡೆಯಲಿದೆ. ಜಿಲ್ಲೆಯ ಪ್ರೌಢಶಾಲೆಗಳ 50 ಶಿಕ್ಷಕರು ಶಿಬಿರಾರ್ಥಿಗಳಾಗಿ ಭಾಗವಹಿಸುವರು. ಶಿಬಿರದ ಉದ್ಘಾಟನೆಯನ್ನು ಡಾ. ಗಿರಡ್ಡಿ ಗೋವಿಂದರಾಜು ನೆರವೇರಿಸುವರು. ಸಾಹಿತಿ ಓ.ಎಲ್.ನಾಗಭೂಷಣ ಸ್ವಾಮಿ ಶಿಬಿರದ ನಿರ್ದೇಶಕರಾಗಿರುತ್ತಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಸಾಹಿತಿ ಡಾ. ಚಂದ್ರಶೇಖರ ನಂಗಲಿ, ಕವಿ ಚಂದ್ರಶೇಖರ ತಾಳ್ಯ, ಡಾ.ಬಸವರಾಜ ಕಲ್ಗುಡಿ, ಡಾ.ಎಂ ಎಸ್ ಆಶಾದೇವಿ, ಡಾ.ಲೋಕೇಶ್ ಅಗಸನಕಟ್ಟೆ ಭಾಗವಹಿಸುವರು.

ನ.6 ಶಿವಕುಮಾರ ಪ್ರಶಸ್ತಿ ಪ್ರದಾನ: ರಂಗ ಭೂಮಿಯಲ್ಲಿ ಮಹತ್ವದ ಸಾಧನೆ ಮಾಡಿದ ಪ್ರತಿಭಾನ್ವಿತರಿಗೆ ಪ್ರತಿವರ್ಷದಂತೆ ‘ಶ್ರೀ ಶಿವಕುಮಾರ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಈ ವರ್ಷ ರಂಗಕರ್ಮಿ ಡಾ.ಸುಭದ್ರಮ್ಮ ಮನ್ಸೂರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನ. 6ರ ನಾಟಕೋತ್ಸವದ ಸಮಾರೋಪದಂದು ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಪ್ರದರ್ಶನಗೊಳ್ಳುವ ನಾಟಕಗಳು
* ನ.1– ‘ನಾನು ಚಂದಗುಪ್ತನೆಂಬ ಮೌರ್ಯ’

* ನ.2– ‘ಜೈ ಹೋ! ರತ್ನ!!’

* ನ.3– ‘ಪ್ರಚಂಡ ರಾವಣ’

* ನ.4–‘ಧನ್ವಂತರಿ ಚಿಕಿತ್ಸೆ

* ನ.5–‘ಪ್ರತಿಮಾ’

* ನ.6– ‘ತವನಿಧಿ ದಾಸಿಮಯ್ಯ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.