ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕೇ ವರ್ಷದಲ್ಲಿ ವೈವಾಹಿಕ ಜೀವನದಿಂದ ಹೊರಬಂದು ಸಿಂಗಲ್‌ ಮಾಮ್ ಆದ ನಟಿ ಭಾಮಾ

Published 8 ಮೇ 2024, 12:46 IST
Last Updated 8 ಮೇ 2024, 12:46 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ, ಮಲಯಾಳಂ, ತಮಿಳು ಸೇರಿದಂತೆ ಸುಮಾರು 42 ಸಿನಿಮಾಗಳಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದ ನಟಿ ಭಾಮಾ ಇದೀಗ ತಮ್ಮ ದಾಂಪತ್ಯ ಜೀವನದಿಂದ ಬೇರ್ಪಟ್ಟಿರುವ ಬಗ್ಗೆ ಖಚಿತಪಡಿಸಿದ್ದಾರೆ.

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಭಾಮಾ, ಗಟ್ಟಿಯಾಗಿರುವುದು ಬಿಟ್ಟರೆ ಬೇರೆ ಆಯ್ಕೆಗಳಿಲ್ಲ ಎಂದು ಹೇಳಿದ್ದಾರೆ.

2020ರಲ್ಲಿ ಉದ್ಯಮಿ ಅರುಣ್‌ ಜಗದೀಶ್ ಎಂಬುವವರನ್ನು ವರಿಸಿದ್ದ ಭಾಮಾ ಅವರು ನಾಲ್ಕೇ ವರ್ಷದಲ್ಲಿ ವಿವಾಹ ಮುರಿದು ಬೀಳಲು ಕಾರಣವೇನು ಎಂಬ ಬಗ್ಗೆ ತಿಳಿಸಿಲ್ಲ. ಅವರಿಗೆ ಗೌರಿ ಎಂಬ ಹೆಸರಿನ ಹೆಣ್ಣು ಮಗುವಿದೆ.

‘ಸಿಂಗಲ್ ಮಾಮ್‌ ಆಗುವವರೆಗೂ ನಾನು ಇಷ್ಟೊಂದು ಗಟ್ಟಿಗಿತ್ತಿ ಎಂದು ನನಗೆ ತಿಳಿದಿರಲಿಲ್ಲ. ಗಟ್ಟಿಯಾಗಿರುವುದು ಬಿಟ್ಟರೆ ನನಗೆ ಬೇರೆ ಆಯ್ಕೆಗಳಿಲ್ಲ. ನಾನು ಮತ್ತು ನನ್ನ ಮಗಳು ಅಷ್ಟೇ’ ಎಂದು ಮಗಳೊಂದಿಗಿನ ಫೋಟೊ ಹಂಚಿಕೊಂಡಿದ್ದಾರೆ.

2007ರಲ್ಲಿ ಸಿನಿಮಾ ಬದುಕಿಗೆ ಕಾಲಿಟ್ಟ ಭಾಮಾ ಇದುವರೆಗೂ ತಮಿಳು, ತೆಲುಗು, ಕನ್ನಡ, ಮಲಯಾಳಂ ಸೇರಿದಂತೆ 42 ಸಿನಿಮಾಗಳಲ್ಲಿ ನಟಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಮೊದಲ ಸಲ’ ಚಿತ್ರದ ಮೂಲಕ ಭಾಮಾ ಕನ್ನಡಕ್ಕೆ ಪ್ರವೇಶಿಸಿದ್ದರು. ಅದಾದ ಬಳಿಕ ಶೈಲೂ, ಆಟೋ ರಾಜ ಮುಂತಾದ ಚಿತ್ರಗಳಲ್ಲಿಯೂ ನಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT