ಬೆಂಗಳೂರು: ಪಿಆರ್ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 10ನೇ ಚಿತ್ರದ ಬಗ್ಗೆ ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ವಿನಿ ಅವರುಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಆಚಾರ್ & ಕೋ’ ಪಿಆರ್ಕೆ ಪ್ರೊಡಕ್ಷನ್ಸ್ನ 10ನೇ ಚಿತ್ರವಾಗಿದೆ. 60ನೇ ದಶಕದ ಬೆಂಗಳೂರನ್ನು ನಿಮ್ಮ ಮುಂದೆ ತರಲು ಒಂದು ಪ್ರಯತ್ನ. ಇದು ನಮ್ಮ ಸಂಸ್ಥೆಯಿಂದ ಮಹಿಳಾ ನಿರ್ದೇಶನದ ಮೊದಲ ಚಿತ್ರವಾಗಿದ್ದು, ಮುಂಚೂಣಿಯಲ್ಲಿ ಹಲವಾರು ಮಹಿಳೆಯರನ್ನು ಸಹ ಒಳಗೊಂಡಿದೆ’ ಎಂದು ಬರೆದುಕೊಂಡಿದ್ದಾರೆ.

ನಿರ್ದೇಶಕಿ ಸಿಂಧು ಶ್ರೀನಿವಾಸ ಮೂರ್ತಿ ಅವರ ಚೊಚ್ಚಲ ಸಿನಿಮಾ ಇದಾಗಿದೆ. ಸಂಗೀತ ನಿರ್ದೇಶಕಿ ಬಿಂದುಮಾಲಿನಿ, ಸೃಜನಾತ್ಮಕ ನಿರ್ಮಾಪಕಿ ಡಾನ್ನಿಲಾ ಕೊರೆಯಾ ಮತ್ತು ಸ್ಟೈಲಿಸ್ಟ್ ಇಂಚರ ಸುರೇಶ್ ಅವರನ್ನೊಳಗೊಂಡ ತಂಡವಾಗಿದೆ ಎಂದು ವಿವರಿಸಿದ್ದಾರೆ.

ಪಿಆರ್ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ‘ಕವಲುದಾರಿ’, ‘ಮಾಯಾ ಬಜಾರ್’, ‘ಲಾ’, ‘ಫ್ರೆಂಚ್ ಬಿರಿಯಾನಿ’, ‘ಒನ್ ಕಟ್ ಟು ಕಟ್’, ‘ಫ್ಯಾಮಿಲಿ ಪ್ಯಾಕ್’, ‘ಮ್ಯಾನ್ ಆಫ್ ದಿ ಮ್ಯಾಚ್’ ತೆರೆಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹೊಸಬರ ಪ್ರಯತ್ನಗಳಿಗೆ ಬೆನ್ನೆಲುಬಾಗಿ ನಿಲ್ಲುವ ‘ಪಿಆರ್ಕೆ ಪ್ರೊಡಕ್ಷನ್ಸ್’ ಇದೀಗ ಹೊಸ ಸಿನಿಮಾ ಘೋಷಣೆ ಮಾಡಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.

ಈ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಜತೆಗೆ ಗುರುದತ್ ಎ ತಲ್ವಾರ್ ಬಂಡವಾಳ ಹೂಡುತ್ತಿದ್ದಾರೆ.

ಇವನ್ನೂ ಓದಿ...

ಕುವೈತ್ನಲ್ಲಿ ತಮಿಳು ನಟ ವಿಜಯ್ ಅಭಿನಯದ ‘ಬೀಸ್ಟ್’ ಸಿನಿಮಾ ನಿಷೇಧ: ವರದಿ

‘ಮಜಿಲಿ’ ಸಿನಿಮಾಗೆ 3 ವರ್ಷ: ನಾಗ ಚೈತನ್ಯ ಜತೆ ನಟಿಸಿದ್ದ ಸಮಂತಾ ಹೇಳಿದ್ದೇನು?

ಗೋವಾದಲ್ಲಿ ಸಬಾ ಜತೆ ಹೃತಿಕ್ ರೋಷನ್ ಪಾರ್ಟಿ: ಮಾಜಿ ಪತ್ನಿ ಸುಸಾನೆ ಖಾನ್ ಹಾಜರು?

ದಳಪತಿ ವಿಜಯ್ ‘ಬೀಸ್ಟ್’ ಸಿನಿಮಾ ಟ್ರೈಲರ್ ನೋಡಿ ಶಾರುಖ್ ಖಾನ್ ಹೇಳಿದ್ದೇನು?

ಮತ್ತೊಂದು ಹಾಟ್ ಫೋಟೊ ವೈರಲ್: ತಾವೇ ಸ್ವತಃ ಮೇಕಪ್ ಮಾಡಿಕೊಂಡ ದಿಶಾ ಪಟಾನಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.