ಭಾನುವಾರ, 2 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBK 10 | ಕಿಚ್ಚನ ಪಂಚಾಯ್ತಿ: ಈ ವಾರ ಬಿಗ್‌ಬಾಸ್‌ ಪ್ರಯಾಣ ಮುಗಿಸುವವರು ಯಾರು?

Published 16 ಡಿಸೆಂಬರ್ 2023, 7:10 IST
Last Updated 16 ಡಿಸೆಂಬರ್ 2023, 7:10 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್‌ಬಾಸ್‌ ಮನೆ ಈ ವಾರ ಪ್ರಾಥಮಿಕ ಶಾಲೆಯಾಗಿ ಬದಲಾಗಿತ್ತು. ಬಿಗ್‌ಬಾಸ್ ಶಾಲೆಯಲ್ಲಿಯೇ ಉಳಿದುಕೊಳ್ಳುವವರು ಯಾರು? ಮನೆಗೆ ಹೋಗುವವರಾರು ಎಂಬ ಕುತೂಹಲ ಇಂದಿನ ಕಿಚ್ಚನ ಪಂಚಾಯ್ತಿಯಲ್ಲಿ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

ದಿನದಿಂದ ದಿನಕ್ಕೆ ಮನೆ ಸದಸ್ಯರು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ದೊಡ್ಮನೆಯಲ್ಲಿ ಆಟ ಕಠಿಣವಾಗುತ್ತಿದ್ದಂತೆ ಮನೆಮಂದಿಯ ಭಾವನೆಗಳು, ಅವರವರ ಅಭಿಪ್ರಾಯಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ.

ಈ ವಾರ ಮನೆಯಲ್ಲಿ

ಬಿಗ್‌ಬಾಸ್‌ ಮನೆ ಪ್ರಾಥಮಿಕ ಶಾಲೆಯಾಗಿ ಬದಲಾಗಿತ್ತು. ಮನೆಮಂದಿಯಲ್ಲಿಯೇ ಕೆಲವರು ಶಿಕ್ಷಕರಾದರೆ ಮತ್ತೆ ಕೆಲವರು ವಿದ್ಯಾರ್ಥಿಗಳಾಗಿದ್ದರು.

ಶಿಕ್ಷರಾದ ಮನೆಮಂದಿ ವಿಶೇಷ ತರಗತಿಗಳ ಮೂಲಕ ಮನೆಯ ಇನ್ನಿತರೆ ವಿಷಯಗಳು, ಆಟಗಾರರ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರೆ, ವಿದ್ಯಾರ್ಥಿಗಳಾಗಿದ್ದ ಸ್ಪರ್ಧಿಗಳು ಮಕ್ಕಳಂತೆ ಪಾಠದ ಜತೆಗೆ ಆಟ, ಚೇಷ್ಟೆ ಮಾಡಿ ಆನಂದಿಸಿದ್ದಾರೆ.

ಊಟದ ವಿಚಾರಕ್ಕೆ ಜಗಳವಾಡುತ್ತಿದ್ದ ಮನೆಮಂದಿಗೆ ಕಿಚ್ಚನ ಕೈಯಾರೆ ತಯಾರಿಸಿದ ಭರ್ಜರಿ ಭೋಜನ ಲಭಿಸಿದೆ. ಕಿಚ್ಚ ಸುದೀಪ್ ಅವರು ಊಟದ ಜತೆಗೆ ಪ್ರತಿಯೊಬ್ಬರಿಗೂ ವಿಶೇಷ ಸಂದೇಶ ರವಾನಿಸಿದ್ದಾರೆ. ಸ್ಪರ್ಧಿಗಳು ಈ ಸಂದೇಶ ತಮ್ಮ ಆಟದ ವೈಖರಿಯ ಪ್ರತಿಬಿಂಬ ಎಂಬಂತೆ ಭಾವಿಸಿದ್ದಾರೆ.

ಈ ವಾರದ ಕಳಪೆ ಪಟ್ಟ ಪವಿಗೆ ಸಿಕ್ಕಿದೆ. ತುಕಾಲಿ ಸಂತೋಷ್‌ ಉತ್ತಮ ಸದಸ್ಯ ಎನಿಸಿಕೊಂಡರು.

ನಾಮಿನೇಷನ್

ಈ ವಾರ ಮನೆಯಿಂದ ಹೊರಹೊಗಲು ನಾಮಿನೇಷನ್‌ ಆಗಿರುವ ಸ್ಪರ್ಧಿಗಳು ವಿನಯ್‌, ಸಂಗೀತಾ, ಮೈಕಲ್, ಪವಿ, ಪ್ರತಾಪ್, ಸಿರಿ,

ಹಾಗಾದರೆ ಈ ಆರು ಮಂದಿಯ ಪೈಕಿ ಬಿಗ್‌ಬಾಸ್‌ ಪ್ರಯಾಣ ಮುಗಿಸುವವರಾರು ಕಾದು ನೋಡಬೇಕಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT