ಉಡುಪಿ: ಗ್ರಾಮ ದೇವತೆಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸ ಬಾರದು. ಹಾಗೆ ಮಾಡಿದರೆ ಗ್ರಾಮೀಣ ಜನರ ಜ್ಞಾನನಿಧಿಯನ್ನು ಅವಗಣನೆ ಮಾಡಿದಂತೆ ಎಂದು ಕವಿ ಸಿದ್ಧಲಿಂಗಯ್ಯ ಹೇಳಿದರು.

ಶ್ರೀಕೃಷ್ಣ ಪಠ, ಪರ್ಯಾಯ ಪೇಜಾ ವರ ಮಠ ಶರನ್ನವರಾತ್ರಿಯ ಅಂಗವಾಗಿ ಆಯೋಜಿಸಿರುವ ವಿಶೇಷ ಸಾಹಿತ್ಯ ಉಪನ್ಯಾಸ ಸರಣಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಂಗಳ ವಾರ ‘ಮಾತನಾಡುವ ದೇವರುಗಳು’ ವಿಷಯ ಕುರಿತು ಉಪನ್ಯಾಸ ನೀಡಿದರು.

ಗ್ರಾಮ ದೇವತೆಗಳ ಸಮೃದ್ಧಿ ಆಚರಣೆಗಳಿದ್ದು ಅವು ನಮ್ಮ ಬದುಕಿನ ಅವಿಭಾಜ್ಯ ಅಂಗ. ಗ್ರಾಮ ದೇವತೆಗಳ ಪುರಾಣ, ಕಥೆ ಅಭ್ಯಾಸ ಮಾಡಿದರೆ ಅದರಲ್ಲಿ ಆ ಜನಾಂಗದ ಭಾವನೆ, ಚಿಂತನೆ ಹಾಗೂ ಮಹಿಳೆಯರ ಕನಸುಗಳು ಇರುವುದು ಗೊತ್ತಾಗುತ್ತದೆ ಎಂದು ಹೇಳಿದರು.

ಗ್ರಾಮ ದೇವತೆಗಳ ಬಗ್ಗೆ ಅಧ್ಯಯನ ಮಾಡುವಾಗ ರೈತರು, ಕೂಲಿ ಕಾರ್ಮಿ ಕರು, ಬಡವರು ಹಾಗೂ ಮಹಿಳೆ ಯರನ್ನು ಭೇಟಿ ಮಾಡಿದಾಗ ಅವರಲ್ಲಿ ಪಾರಂಪರಿಕ ಜ್ಞಾನ ಇರುವುದು ಗೊತ್ತಾ ಯಿತು.

ಆದರೆ, ಅವರ ಜ್ಞಾನ ಹಾಗೂ ದೃಷ್ಟಿಕೋನವನ್ನು ನಾವು ಪರಿಗಣಿಸು ತ್ತಿಲ್ಲ. ಮೈದುಂಬಿ ಬರುವ ಗ್ರಾಮ ದೇವತೆಯ ಪರಿಕಲ್ಪನೆಯಲ್ಲಿ ಅವರ ಚಿಂತನಾ ಕ್ರಮ ವ್ಯಕ್ತವಾಗುತ್ತವೆ. ಎಲ್ಲರಿಗೂ ಆಹಾರ, ವಸತಿ ಹಾಗೂ ಬಟ್ಟೆ ಸಿಗಬೇಕು ಎಂಬ ಮನುಷ್ಯನ ಅಂತ ರಂಗದ ಭಾವನೆ ಮೈದುಂಬಿ ಬರುವ ದೇವರಲ್ಲಿ ವ್ಯಕ್ತವಾಗುತ್ತದೆ ಎಂದು ಅವರು ಹಲವು ಉದಾಹರಣೆಗಳ ಮೂಲಕ ವಿವರಿಸಿರು.

32 ವರ್ಷಗಳ ಹಿಂದೆ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದೆ. ಬಹಳ ಅನುಮಾನದಿಂದಲೇ ಅವರ ಬಳಿ ಹೋಗಿದ್ದೆ. ಅಲ್ಲಿಂದ ಇಲ್ಲಿಯ ವರೆಗೆ ಅವರ ಚಟುವಟಿಕೆಗಳನ್ನು ನೋಡುತ್ತಿ ರುವ ನನಗೆ ಅವರ ಮೇಲಿದ್ದ ಅನು ಮಾನ ಹೋಗಿ ಅಭಿಮಾನ ಮೂಡಿದೆ. ಭಕ್ತಿ, ಗೌರವ ಹೆಚ್ಚಾಗಿದೆ. ಶೋಷಿತ ಸಮಾಜದ ಸುಧಾರಣೆಯ ಹಾಗೂ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಅವರು ಮಾಡುತ್ತಿದ್ದು ಅದನ್ನು ಮುಂದು ವರಿಸಬೇಕು ಎಂದು ಅವರು ಹೇಳಿದರು.

ವಿಶ್ವೇಶತೀರ್ಥ ಸ್ವಾಮೀಜಿ ಮಾತ ನಾಡಿ, ದೇವರನ್ನು ಮಾನವ ರೂಪದಲ್ಲಿ ಕಂಡು ಅದರಿಂದ ಮಾನವೀಯತೆ ಬೆಳೆಸುವ ಕೆಲಸ ಆಗಬೇಕು. ನೈತಿಕತೆ ಬೆಳೆಸುವ ಕಾರ್ಯ ಗ್ರಾಮ ದೇವತೆ ಗಳಿಂದ ನಡೆಯುತ್ತಿದೆ. ಗ್ರಾಮೀಣ ಜನರ ನಿರ್ಮಲ ಭಾವನೆ, ದೇವರ ಮೇಲಿನ ನಂಬಿಕೆ ಮತ್ತು ವಿಶ್ವಾಸದಿಂದ ಅದ್ಭುತ ಪರಿವರ್ತನೆ ಆಗಿದೆ. ಸರ್ಕಾರ ಹಾಗೂ ನ್ಯಾಯಾಲಯದಿಂದ ಆಗದ ನೈತಿಕತೆ ಬೆಳೆಸುವ ಕಾರ್ಯ ಗ್ರಾಮ ದೇವತೆಗಳಿಂದ ಆಗಿದೆ ಎಂದರು.

ಸಾಹಿತಿ ಡಾ.ತಾಳ್ತಜೆ ವಸಂತ ಕುಮಾರ ಅವರು, ‘ನಮ್ಮ ಪರಿಸರ’ ವಿಷಯ ಕುರಿತು ಮಾತನಾಡಿದರು. ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹಮೂರ್ತಿ ಇದ್ದರು. ವಾಸುದೇವ ಭಟ್ ಕಾರ್ಯಕ್ರಮ ನಿರೂಪಿಸಿದರು.

ಪೇಜಾವರ ಸ್ವಾಮೀಜಿ ಅವರ ಅಸ್ಪೃಶ್ಯತಾ ನಿವಾರಣಾ ಕಾರ್ಯ ಪ್ರಶ್ನಾತೀತ. ದಲಿತ ಕೇರಿಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ ಮೊದಲ ಸ್ವಾಮೀಜಿ ಅವರು.
-ಸಿದ್ದಲಿಂಗಯ್ಯ, ಕವಿ

ಸಾಂಸ್ಕೃತಿಕ ಹಾಗೂ ಪ್ರಾಕೃತಿಕ ಪರಿಸರದ ಕಡೆಗೆ ಜನರು ಗಮನ ಹರಿಸಬೇಕು.
-ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.