ಬೆಂಗಳೂರು: ಸ್ವೀಡನ್‌ನ ನೊಬೆಲ್ ಮೀಡಿಯಾ ಮತ್ತು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ‘ನೊಬೆಲ್ ಪ್ರೈಜ್ ಸರಣಿ’ ಕಾರ್ಯಕ್ರಮ ಹಮ್ಮಿಕೊಂಡಿವೆ.

ಹತ್ತು ನೊಬೆಲ್ ವಿಜ್ಞಾನಿಗಳ ಪೈಕಿ ಆರು ವಿಜ್ಞಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಖಚಿತವಾಗಿದೆ. ಈ ವಿಜ್ಞಾನಿಗಳು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೂ ಭೇಟಿ ನೀಡಲಿದ್ದಾರೆ. ನೊಬೆಲ್ ಸರಣಿಯ ಮೊದಲ ಕಾರ್ಯಕ್ರಮ ಗುಜರಾತ್‌ನ ರಾಜಧಾನಿಯಲ್ಲಿ 2017 ರ ಜನವರಿ 9 ರಿಂದ 11 ರವರೆಗೆ ನಡೆಯಲಿದೆ.

ಜ. 13 ರಂದು ಬೆಂಗಳೂರಿಗೆ ನೊಬೆಲ್ ವಿಜೇತರು ಭೇಟಿ ನೀಡಲಿದ್ದಾರೆ. ಇಲ್ಲಿ ವಿಶೇಷ ಉಪನ್ಯಾಸ . ನೊಬೆಲ್ ವಿಜೇತರ ಸಂಶೋಧನೆಗಳ ಕುರಿತು ವಿಜ್ಞಾನ ಪ್ರದರ್ಶನವು ನೊಬೆಲ್ ಮೀಡಿಯಾದಿಂದ ನಡೆಯಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಮೂಲಗಳು ತಿಳಿಸಿವೆ.

ಏನಿದು ನೊಬೆಲ್ ಸರಣಿ: ವಿಜ್ಞಾನದ ವಿದ್ಯಾರ್ಥಿಗಳಲ್ಲಿ ಸೃಜನಶೀಲ ಚಿಂತನೆ ಬೆಳೆಸುವುದು ಮತ್ತು ಸಂಶೋಧನೆ ನಡೆಸಲು ದೇಶದ ಪ್ರಖ್ಯಾತ ವಿಜ್ಞಾನಿಗಳ ಜೊತೆ ನೊಬೆಲ್ ವಿಜೇತ ವಿಜ್ಞಾನಿಗಳು ಜಂಟಿ ಪ್ರಯತ್ನ ನಡೆಸುವುದು ನೊಬೆಲ್ ಪ್ರೈಜ್ ಸರಣಿಯ ಉದ್ದೇಶ.

ವಿದ್ಯಾರ್ಥಿಗಳಿಗೆ ಅವಕಾಶ: ಪಿಯುಸಿ ವಿದ್ಯಾರ್ಥಿಗಳು ವಿಜ್ಞಾನದ ಕುರಿತಂತೆ ಹೊಸ ಪರಿಕಲ್ಪನೆಗಳ ಕುರಿತು 150 ಪದಗಳಲ್ಲಿ ಬರೆಯುವ ಸ್ಪರ್ಧೆ . ಈ ಕುರಿತು ಹೆಚ್ಚಿನ ಮಾಹಿತಿಗೆ http://ideathon.nobelprizeseries.in/guideline ವೆಬ್‌ಸೈಟ್ ವೀಕ್ಷಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.