ದೇಶ–ವಿದೇಶಗಳ 104 ಉಪಗ್ರಹಗಳನ್ನು ಒಂದೇ ರಾಕೆಟ್‌ನಲ್ಲಿ ಕಕ್ಷೆಗೆ ಹಾರಿಬಿಡುವ ಮೂಲಕ ಇಸ್ರೊ ವಿಶ್ವದಾಖಲೆಯನ್ನೇ ನಿರ್ಮಿಸಿದೆ. ಈ ಮೂಲಕ ಉಡಾವಣೆ ವಿಚಾರದಲ್ಲಿ ತಾಂತ್ರಿಕವಾಗಿ ಪ್ರಬಲ ದೇಶಗಳಿಗೂ ಸಡ್ಡುಹೊಡೆದಿದೆ. ಇದು ಇಡೀ ದೇಶವೇ ಹೆಮ್ಮೆಪಡುವ ಗಳಿಗೆ. ಈ ಹಿಂದೆ ಭಾರತದ ಹಲವು ಸಂಸ್ಥೆಗಳಿಗೆ ಉನ್ನತ ತಂತ್ರಜ್ಞಾನ ವರ್ಗಾವಣೆ ಮಾಡಲು ಅಮೆರಿಕ ನಿರಾಕರಿಸಿತ್ತು.

ಭಾರತದ ಮಿತ್ರರಾಷ್ಟ್ರ ಎಂದೇ ಬಿಂಬಿತವಾಗಿದ್ದ ರಷ್ಯಾ ಸಹ ಕ್ರಯೋಜನಿಕ್ ರಾಕೆಟ್ ತಂತ್ರಜ್ಞಾನ ವರ್ಗಾವಣೆಗೆ ಹಿಂದೇಟು ಹೊಡೆದಿತ್ತು. ಈ ಎಲ್ಲಾ ತೊಡಕುಗಳನ್ನು ಸ್ವದೇಶಿ ಸಂಶೋಧನೆಯ ಮೂಲಕವೇ ನಿವಾರಿಸಿಕೊಂಡು ಇಸ್ರೊ ವಿಜ್ಞಾನಿಗಳು ಮಾಡಿರುವ ಸಾಧನೆಯನ್ನು ಮೆಚ್ಚಲೇಬೇಕು. ನಂಬಿಕೆಗೆ ಅರ್ಹ ಎಂದೇ ಖ್ಯಾತವಾಗಿರುವ ಪಿಎಸ್‌ಎಲ್‌ವಿ– ಸಿ 37 ರಾಕೆಟ್ 39ನೇ ಸಲ ಉಪಗ್ರಹಗಳನ್ನು ಕಕ್ಷೆಗೆ ಕರಾರುವಾಕ್ಕಾಗಿ ತಲುಪಿಸಿದೆ. ಬುಧವಾರ ಬೆಳಿಗ್ಗೆ ಶ್ರೀಹರಿಕೋಟದಿಂದ ಚಿಮ್ಮಿದ 28 ನಿಮಿಷಗಳಲ್ಲಿ ಉಡಾವಣಾ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣವಾಗಿದೆ. 2014ರಲ್ಲಿ ರಷ್ಯಾ 37 ಉಪಗ್ರಹಗಳನ್ನು ಗಗನಕ್ಕೆ ಹಾರಿಸಿದ್ದನ್ನು ಬಿಟ್ಟರೆ ಇಂತಹ ದೊಡ್ಡ ಪ್ರಮಾಣದ ಉಡಾವಣೆಯನ್ನು ಯಾವ ದೇಶವೂ ನಡೆಸಿಲ್ಲ. ಹೀಗಾಗಿಯೇ ಇಸ್ರೊ ನಡೆಸಿರುವ ಉಡಾವಣೆ ಅತಿ ಮಹತ್ವದ್ದು.

104 ಉಪಗ್ರಹಗಳ ಪೈಕಿ 101 ಅಂತರರಾಷ್ಟ್ರೀಯ ಗ್ರಾಹಕರಿಗೆ ಸೇರಿದ್ದು. 96 ಉಪಗ್ರಹಗಳು ಅಮೆರಿಕದ ಎರಡು ಸಂಸ್ಥೆಗಳಿಗೆ ಸೇರಿದ್ದರೆ, ತಲಾ ಒಂದೊಂದು ಉಪಗ್ರಹ ಇಸ್ರೇಲ್, ಕಜಕಿಸ್ತಾನ, ನೆದರ್ಲೆಂಡ್, ಸ್ವಿಟ್ಜರ್ಲೆಂಡ್ ಹಾಗೂ ಯುಎಇಗೆ ಸೇರಿವೆ. ಹಾರಿರುವ ಉಪಗ್ರಹಗಳ ಪೈಕಿ ಭಾರತದ ಕಾರ್ಟೋಸ್ಯಾಟ್ ಅತಿತೂಕದ್ದು. ಇದು ಮುಂದಿನ ದಿನಗಳಲ್ಲಿ ಭಾರತದ ನೆರೆ ದೇಶಗಳ ಮೇಲೆ ಕಣ್ಣಿಡಲು ಅತಿ ಮಹತ್ವದ ಪಾತ್ರವನ್ನು ವಹಿಸಲಿದೆ. ನಾಲ್ಕು ಹಂತಗಳಲ್ಲಿ, ಕೆಲವೇ ಸೆಕೆಂಡ್‌ಗಳ ಅಂತರದಲ್ಲಿ, ಪರಸ್ಪರ ತಾಕದಂತೆ ಉಪಗ್ರಹಗಳನ್ನು ನಾಜೂಕಾಗಿ ಕಕ್ಷೆಗೆ ತಳ್ಳಲಾಗಿದೆ. ಈ ತಂತ್ರಜ್ಞಾನವೇ ವಿನೂತನ. ಕಡಿಮೆ ವೆಚ್ಚದ ಉಡಾವಣೆಯಿಂದಾಗಿ ಮತ್ತಷ್ಟು ವಿದೇಶಿ ಗ್ರಾಹಕರು ಇಸ್ರೊಗೆ ದೊರಕಬಹುದು.

ಇದೀಗ ಅಮೆರಿಕದ ಸ್ಪೇಸ್ ಎಕ್ಸ್ ಸಂಸ್ಥೆಯು ಮರು ಬಳಸಬಹುದಾದ ರಾಕೆಟ್ ಮೂಲಕ ಉಡಾವಣಾ ವೆಚ್ಚವನ್ನು ಕಡಿಮೆ ಮಾಡಿದೆ. ಆದರೆ ಇಸ್ರೊ ಹೆಚ್ಚು ಉಪಗ್ರಹಗಳನ್ನು ಒಂದೇ ರಾಕೆಟ್ ಮೂಲಕ ಹಾರಿಸಿ ಉಡಾವಣಾ ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡಿದೆ. ಸ್ಪೇಸ್ ಎಕ್ಸ್‌ನ ವೆಚ್ಚಕ್ಕೆ ಹೋಲಿಸಿದರೆ ಇಸ್ರೊ ಉಡಾವಣಾ ವೆಚ್ಚ ಶೇ 33 ಮಾತ್ರ. ಉಳಿತಾಯ ಮಾಡುವ ಈ ವಾಣಿಜ್ಯ ಆಯಾಮವೇ ಇಸ್ರೊಗೆ ಶ್ರೀರಕ್ಷೆಯಾಗಲಿದೆ.

ಮುಂದಿನ ದಿನಗಳಲ್ಲಿ ಶುಕ್ರಗ್ರಹಕ್ಕೆ ಪರಿಭ್ರಮಣ ಉಪಗ್ರಹ ಕಳುಹಿಸುವ ಇಸ್ರೊ ಯೋಜನೆಗೆ ಸಹಕರಿಸಲು ನಾಸಾ ಹಾಗೂ ಮಂಗಳ ಗ್ರಹಕ್ಕೆ ಆರು ಚಕ್ರದ ರೋವರ್ ಕಳುಹಿಸುವ ಯೋಜನೆಗೆ ಕೈಜೋಡಿಸಲು ಫ್ರಾನ್ಸ್ ಆಸಕ್ತಿ ತೋರುತ್ತಿವೆ. ಅಂತರರಾಷ್ಟ್ರೀಯ ವೈಜ್ಞಾನಿಕ ಸಂಶೋಧನೆಯಲ್ಲಿ ಭಾರತದ ಹೆಸರು ರಾರಾಜಿಸಲು ಇಂತಹ ಕಾರ್ಯಕ್ರಮಗಳು, ಸಾಧನೆಗಳು ಮತ್ತಷ್ಟು ಬೇಕು. ಜೊತೆಗೆ ಬಾಹ್ಯಾಕಾಶ ಸಂಶೋಧನೆ ಚಟುವಟಿಕೆಗಳಲ್ಲಿ ನಮ್ಮ ಯುವ ಜನರು ಹೆಚ್ಚಿನ ಆಸಕ್ತಿ ತಳೆಯಲು ಇಂತಹ ಕಾರ್ಯಕ್ರಮಗಳು ಸ್ಫೂರ್ತಿಯ ಸೆಲೆಯಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.