ತಮ್ಮ ಅನಿಸಿಕೆಗಳಿಗೆ ಅಕ್ಷರ ರೂಪ ಕೊಡುವುದು ಕೆಲವರ ಹವ್ಯಾಸವಾಗಿರುತ್ತದೆ. ಈ ವೈವಿಧ್ಯಮಯ ಬರವಣಿಗೆಯನ್ನು ಮುದ್ರಿತ ರೂಪದಲ್ಲಿ ಪ್ರಕಟಿಸಿ ಅದನ್ನು ಇತರರಿಗೂ ತಲುಪಿಸಬೇಕು ಎನ್ನುವ ಉಮೇದೂ ಅನೇಕರಲ್ಲಿ ಇರುತ್ತದೆ.

ಆದರೆ, ಕಥೆ, ಕವನ, ಪ್ರವಾಸ ಕಥನ, ಹಾಸ್ಯ, ನಾಟಕ – ಇಂತಹ ವೈವಿಧ್ಯಮಯ ಬರವಣಿಗೆಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು, ಪ್ರಕಾಶಕರನ್ನು ಹುಡುಕಲು, ಬಿಡುಗಡೆ ಮಾಡಲು ಸಾಕಷ್ಟು ಹರ ಸಾಹಸ ಪಡಬೇಕಾಗುತ್ತದೆ. ಜತೆಗೆ ಕಿಸೆಗೂ ಭಾರವಾಗುತ್ತದೆ. ಮುದ್ರಿತ ಪ್ರತಿಗಳೆಲ್ಲ ಮಾರಾಟಗೊಳ್ಳುವ ಭರವಸೆ ಏನೂ ಇರುವದಿಲ್ಲ. ಹೀಗಾಗಿ ಪುಸ್ತಕ ಪ್ರಕಟಿಸಿ ಕೈಸುಟ್ಟುಕೊಂಡವರ ಸಾಕಷ್ಟು ನಿದರ್ಶನಗಳೂ ಇವೆ.

ಪುಸ್ತಕಗಳ ಪ್ರಕಟಣೆಗೂ ಈಗ ಒಂದು ಮೊಬೈಲ್ ಆ್ಯಪ್ ಸಿದ್ಧಗೊಂಡಿದೆ. ಕೇರಳದ ನಾಲ್ಕು ಮಂದಿ ಸಮಾನ ಆಸಕ್ತರು ಸೇರಿಕೊಂಡು ಆನ್ಲೈನ್ ಪ್ರಕಾಶನ ಸಂಸ್ಥೆ ‘ವಾಲ್ಮೀಕಿ ಡಾಟ್ ಕಾಂ’ (www.valmeeki.com) ಹುಟ್ಟು ಹಾಕಿದ್ದಾರೆ. ಹೊಸ ಬರಹಗಾರರಿಗೆ ಮೊಬೈಲ್ ಆ್ಯಪ್ನ ನೆರವು ಒದಗಿಸಲು ಈ ಸ್ಟಾರ್ಟ್ಅಪ್ ನೆರವಾಗುತ್ತಿದೆ.

ಕುರುವಿಲ್ಲ ಚಾಕೊ (ಸಿಇಒ) ಅವರು ಈ ತಂಡದ ಮುಖ್ಯಸ್ಥರಾಗಿ ಸ್ಟಾರ್ಟ್ಅಪ್ ಅನ್ನು ಮುನ್ನಡೆಸುತ್ತಿದ್ದಾರೆ. ಪ್ರಾದೇಶಿಕ ಭಾಷೆಗಳಿಗೆ ದೇಶದ ವಿವಿಧ ಭಾಷೆಗಳ ಮಧ್ಯೆ ಸಂಪರ್ಕ ಕಲ್ಪಿಸಿಕೊಡುವುದು ಆನ್ಲೈನ್ ಪ್ರಕಾಶನ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.

ಹೊಸ ಲೇಖಕರನ್ನು ಸಂಶೋಧಿಸಿ ಅವರ ಬರವಣಿಗೆಯು ಆನ್ಲೈನ್ನಲ್ಲಿ ಪ್ರಕಟಗೊಳ್ಳಲು ಈ ಸ್ಟಾರ್ಟ್ಅಪ್ ನೆರವಾಗುತ್ತಿದೆ. ಸದ್ಯಕ್ಕೆ ಈ ‘ವಾಲ್ಮೀಕಿ’ಯು ಮಲಯಾಳಿ, ಕನ್ನಡ, ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಬರಹಗಳನ್ನು ಪ್ರಕಟಿಸುತ್ತಿದೆ.ಈ ಸ್ಟಾರ್ಟ್ಅಪ್ನ ನಾಲ್ವರು ಯುವಕರೆಲ್ಲರೂ ಕೇರಳದವರು. ಮುಖ್ಯಸ್ಥ ಕುರುವಿಲ್ಲ ಚಾಕೊ ಅವರನ್ನು ಹೊರತುಪಡಿಸಿದರೆ ಉಳಿದ ಮೂವರು ಒಂದೇ ಕಾಲೇಜಿನ ಸಹಪಾಠಿಗಳು.

ಆರಂಭದಲ್ಲಿ ಕೊಚ್ಚಿಯಲ್ಲಿ ಕಾರ್ಯಾರಂಭ ಮಾಡಿದ್ದ ಸಂಸ್ಥೆ 2016ರ ಏಪ್ರಿಲ್ನಲ್ಲಿ ಮೈಸೂರಿಗೆ ಸ್ಥಳಾಂತರಗೊಂಡಿದೆ. ಸಂಸ್ಥೆಯ ಡಿಜಿಟಲ್ ಪ್ರಕಾಶನ ಚಟುವಟಿಕೆಯು ದಿನೇ ದಿನೇ ಹೆಚ್ಚುತ್ತಲೇ ಸಾಗಿದೆ.

ಈ ಆನ್ಲೈನ್ ಪ್ರಕಾಶನ ಸಂಸ್ಥೆಯಲ್ಲಿ ಹಳಬರ ಕೃತಿಗಳಿಗಿಂತ ಹೊ, ಉದಯೋನ್ಮುಖರ ಹೊಸ ಕೃತಿಗಳಿಗೆ ಮಾತ್ರ ಅವಕಾಶ ಇದೆ. ಈಗಾಗಲೇ ಪ್ರಕಟಗೊಂಡ, ಪುಸ್ತಕ ರೂಪದಲ್ಲಿ ಇರುವ ಕೃತಿಗಳಿಗೂ ಇಲ್ಲಿ ಅವಕಾಶ ಇಲ್ಲ. ಹಳೆಯ ಸಾಹಿತಿಗಳ ಹೊಸ ಕೃತಿಗಳಿಗೆ ಮಾತ್ರ ಇಲ್ಲಿ ಕೆಲಮಟ್ಟಿಗೆ ಅವಕಾಶ ಇದೆ.

‘ಎಲ್ಲ ಭಾಷೆಗಳ ಹಿರಿಯ ಸಾಹಿತಿಗಳ ಮೇರು ಕೃತಿಗಳನ್ನು ಕೈಯಲ್ಲಿ ಹಿಡಿದುಕೊಂಡು ಓದುವ ಅನುಭವವೇ ಬೇರೆ. ಹೊಸ ಪೀಳಿಗೆಯ ಡಿಜಿಟಲ್ ಓದುಗರಿಗೆ ಮೊಬೈಲ್ನಲ್ಲಿ ಅರ್ಧ ಗಂಟೆಯಲ್ಲಿ ಓದಿ ಮುಗಿಸಬಹುದಾದ ಸಣ್ಣ ಕೃತಿಗಳು ಹೆಚ್ಚಾಗಿ ಆಕರ್ಷಿಸುತ್ತಿವೆ. ಹೀಗಾಗಿ ಅವರಿಗೆ ವೇದಿಕೆ ಕಲ್ಪಿಸಿಕೊಡುವುದು ನಮ್ಮ ಉದ್ದೇಶವಾಗಿದೆ’ ಎಂದು ಕುರುವಿಲ್ಲ ಹೇಳುತ್ತಾರೆ.

‘ನಾವು ಈ ಸ್ಟಾರ್ಟ್ಅಪ್ ಆರಂಭಿಸಿದಾಗ ನಮಗೆ ಯಾರೊಬ್ಬರೂ ಪ್ರತಿಸ್ಪರ್ಧಿಗಳು ಇದ್ದಿರಲಿಲ್ಲ. ಈಗ ಈ ಆನ್ಲೈನ್ ಪ್ರಕಾಶನ ವಹಿವಾಟಿನಲ್ಲಿ ಇರುವ ಅವಕಾಶ ಬಳಸಿಕೊಳ್ಳಲು ಇತರರೂ ಮಾರುಕಟ್ಟೆ ಪ್ರವೇಶಿಸಿದ್ದಾರೆ. ಆದರೆ, ನಮ್ಮದು ಅವರಿಗಿಂತ ಭಿನ್ನವಾದ ಪ್ರಕಾಶನ ವಹಿವಾಟು ಆಗಿದೆ.

‘ಸಂಸ್ಥೆಯ ಆ್ಯಪ್ ಮತ್ತು ಅಂತರ್ಜಾಲ ತಾಣದಲ್ಲಿ ಮಾತ್ರ ಸಂಸ್ಥೆಯ ಪ್ರಕಟಣೆಗಳನ್ನು ಓದಬಹುದು. ಇಲ್ಲಿ ಪ್ರಕಟವಾಗುವ ಬರಹ, ಕತೆ – ಕವನ ಸಂಕಲನಗಳನ್ನು ಇತರರಿಗೆ ಎರವಲು ನೀಡುವ ಹಾಗಿಲ್ಲ.

‘ಆರಂಭದಲ್ಲಿ ಸಾಹಿತ್ಯ ಸಮ್ಮೇಳನ, ಲೇಖಕರ ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬರಹಗಾರರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವು. ಸಾಹಿತ್ಯದ ಬಗ್ಗೆ ಒಲವು ಇರುವವರು ಶಿಫಾರಸು ಮಾಡಿದ ಲೇಖಕರನ್ನು ಗುರುತಿಸುತ್ತಿದ್ದೇವು. ಈಗ ನಮ್ಮದೇ ಆದ ಆಯ್ಕೆ ಸಮಿತಿಯು ಲೇಖಕರನ್ನು ಗುರುತಿಸುತ್ತದೆ. ಅವರ ಬರಹಗಳನ್ನು ಉಚಿತವಾಗಿ ಆನ್ಲೈನ್ನಲ್ಲಿ ಪ್ರಕಟಿಸಲಾಗುವುದು.

ಆಸಕ್ತರು ತಮ್ಮ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಬೇಕು ಎಂದು ಬಯಸಿದ್ದರೆ ‘ವಾಲ್ಮೀಕಿ’ ತಂಡವು ಅದನ್ನೂ ನೆರವೇರಿಸುತ್ತದೆ. ಇದಕ್ಕೆ ಲೇಖಕರು ಹಣ ಪಾವತಿಸಬೇಕಾಗುತ್ತದೆ.‘ಹಸ್ತಪ್ರತಿಗಳನ್ನು ಟೈಪ್ ಮಾಡಿ, ವ್ಯಾಕರಣ ಸರಿಪಡಿಸಿ, ಅಂದದ ಮುಖಪುಟ ರಚಿಸಿ ಸೀಮಿತ ಸಂಖ್ಯೆಯಲ್ಲಿ ಪುಸ್ತಕಗಳನ್ನು ಮುದ್ರಿಸಿ ಕೊಡುವ ಕೆಲಸವನ್ನೂ ಈ ಸ್ಟಾರ್ಟ್ಅಪ್ ಅಚ್ಚುಕಟ್ಟಾಗಿ ಪೂರ್ಣಗೊಳಿಸಿ ಕೊಡುತ್ತದೆ.

ಮುದ್ರಣ ಪ್ರತಿಗಳು ಸಾವಿರ ಸಂಖ್ಯೆಯಲ್ಲಿ ಮಾತ್ರ ಇರುವುದಿಲ್ಲ. ಸ್ನೇಹಿತರು, ಬಂಧುಗಳು ಹೀಗೆ ಸೀಮಿತ ಸಂಖ್ಯೆಯಲ್ಲಿ ವಿತರಿಸಲು 30ರಿಂದ 40 ಪ್ರತಿಗಳನ್ನಷ್ಟೇ ಮುದ್ರಿಸಲಾಗುವುದು’ ಎಂದು ಕುರುವಿಲ್ಲ ಹೇಳುತ್ತಾರೆ.

ಲಾಭ ಹೇಗೆ?

ಹೊಸ ಬರಹಗಾರರ ಕೃತಿಗಳನ್ನು ಇಲ್ಲಿ ಉಚಿತವಾಗಿ ಪ್ರಕಟಿಸಲಾಗುವುದು. ಆಸಕ್ತರು ಈ ಕೃತಿಗಳನ್ನು ಓದಲು, ಡೌನ್ಲೋಡ್ ಮಾಡಿಕೊಳ್ಳಲು ₹ 30 ರಿಂದ ₹ 50ರವರೆಗೆ ಹಣ ಪಾವತಿಸಬೇಕು. ಆನ್ಲೈನ್ನಲ್ಲಿಯೇ ಸುಲಭವಾಗಿ ಹಣ ಪಾವತಿಸಬಹುದಾಗಿದೆ.

ಆ್ಯಪ್ ಮತ್ತು ಅಂತರ್ಜಾಲ ತಾಣದಲ್ಲಿ ಮಾರಾಟಗೊಳ್ಳುವ ಇಂತಹ ಪುಸ್ತಕಗಳ ಮಾರಾಟದಿಂದ ಬರುವ ಹಣದಲ್ಲಿ ಶೇ 50 ರಷ್ಟು ಗೌರವಧನವನ್ನು ಲೇಖಕರಿಗೆ ವಿತರಿಸಲಾಗುವುದು. ಕೆಲ ಬರಹಗಾರರು ತಮ್ಮ ಕೃತಿಗಳನ್ನು ಉಚಿತವಾಗಿಯೇ ಓದಲಿ ಎಂದೂ ಬಯಸುತ್ತಾರೆ.

ವಿಶ್ವದಾದ್ಯಂತ 20 ಲಕ್ಷ ಓದುಗರು ಮತ್ತು ವಿವಿಧ ಭಾಷೆಗಳ 5,000 ಬರಹಗಾರರನ್ನು ತಲುಪುವ ಉದ್ದೇಶ ತಮಗೆ ಇದೆ ಎಂದು ಕುರುವಿಲ್ಲ ಹೇಳುತ್ತಾರೆ. ಸದ್ಯಕ್ಕೆ ಈ ಆನ್ಲೈನ್ ಪ್ರಕಾಶನದ ವಹಿವಾಟು ಸುಸ್ಥಿರವಾಗಿದೆ. ಮುಂಬರುವ ದಿನಗಳಲ್ಲಿ ಲಾಭದತ್ತ ಸಾಗಲಿದೆ. ‘ಪುಸ್ತಕ ರೂಪದಲ್ಲಿ 1,000 ಪ್ರತಿಗಳನ್ನು ಮುದ್ರಿಸಲು ₹ 25 ಸಾವಿರದವರೆಗೆ ವೆಚ್ಚ ಮಾಡಬೇಕಾಗುತ್ತದೆ.

ಜತೆಗೆ ಅವುಗಳನ್ನು ವಿತರಿಸುವ, ಸಂಗ್ರಹಿಸಿ ಇಟ್ಟುಕೊಳ್ಳುವುದೂ ಸಮಸ್ಯೆಯಾಗಿರುತ್ತದೆ. ಗರಿಷ್ಠ 96 ಪುಟಗಳ, 96 ಪ್ರತಿಗಳಿಗೆ ₹ 10ರಿಂದ ₹ 12 ಸಾವಿರ ವೆಚ್ಚ ಬರಲಿದೆ. ನಂತರದ ಪ್ರತಿಗಳಿಗೆ ₹ 4,000 ಮಾತ್ರ ವೆಚ್ಚ ಬರಲಿದೆ’ ಎಂದು ಕುರುವಿಲ್ಲ ಹೇಳುತ್ತಾರೆ. ಹಿಂದಿ, ಮರಾಠಿ, ಬಂಗಾಳಿ ಮತ್ತು ತೆಲುಗು ಭಾಷೆಗಳಿಗೂ ಸದ್ಯದಲ್ಲೇ ವಹಿವಾಟು ವಿಸ್ತರಣೆ ಮಾಡಲು ಸಂಸ್ಥೆ ಉದ್ದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.