‘... ಕನಕಪುರ ರಸ್ತೆಯ ವಾಜರಹಳ್ಳಿ ಹಾಗೂ ರಘುವನಹಳ್ಳಿ ವ್ಯಾಪ್ತಿಯಲ್ಲಿ ಸ್ವಾಧೀನಪಡಿಸಿಕೊಂಡಿದ್ದ 189 ಎಕರೆ ಕೃಷಿಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ಹೈಕೋರ್ಟ್ ಅನೂರ್ಜಿತಗೊಳಿಸಿದೆ’ (ಪ್ರ.ವಾ., ಏ. 18). ಈ ತೀರ್ಪಿನಿಂದ ತಮ್ಮ ಮನೆಮಠಗಳನ್ನು ಇದ್ದಕ್ಕಿದ್ದಂತೆ ಕಳೆದುಕೊಂಡು ನಿರಾಶ್ರಿತರಾಗಿ ಬೀದಿಗೆ ಬೀಳಲಿರುವ ನೂರಾರು ಕುಟುಂಬಗಳಲ್ಲಿ ‘ಪುಸ್ತಕಮನೆ’ಯ ಹರಿಹರಪ್ರಿಯ ಕೂಡಾ ಒಬ್ಬರು; ಅವರ ಮನೆ ವಾಜರಹಳ್ಳಿಯಲ್ಲಿದೆ.

ಕನ್ನಡ ಓದುಗರಿಗೆ, ಸಂಶೋಧಕರಿಗೆ ಹರಿಹರಪ್ರಿಯ ಅಪರಿಚಿತರೇನಲ್ಲ. ಕಾರಣ, ಅವರು ತಮ್ಮ ಸ್ವಂತ ಹಣದಿಂದ ಸುಮಾರು ಮೂರು ಲಕ್ಷದಷ್ಟು ಪುಸ್ತಕಗಳನ್ನು ಕೊಂಡು ಅವನ್ನು ತಮ್ಮ ಮನೆಯಲ್ಲಿಯೇ ಜೋಡಿಸಿದ್ದಾರೆ. ಅವುಗಳಲ್ಲಿ ಪ್ರಾಚೀನ, ಅಲಭ್ಯ, ಅಪರೂಪದ ಕನ್ನಡ-ತೆಲುಗು-ಇಂಗ್ಲಿಷ್ ಪುಸ್ತಕಗಳು, ಒಂದೂವರೆ ಶತಮಾನದಷ್ಟು ಹಿಂದಿನ ವೃತ್ತಪತ್ರಿಕೆಗಳು, ಪದಕೋಶಗಳು, ಇತ್ಯಾದಿಗಳಿವೆ.

ಇವರ ಈ ಪುಸ್ತಕ ಭಂಡಾರದ ಉಪಯೋಗ ಪಡೆಯದ ಸಾಹಿತ್ಯಾಸಕ್ತರು ಹಾಗೂ ಸಂಶೋಧಕರು ಕರ್ನಾಟಕದಲ್ಲಿ ಇಲ್ಲವೇ ಇಲ್ಲ ಎನ್ನಬಹುದು; ಪುಸ್ತಕಗಳ ಅವಶ್ಯಕತೆಯಿರುವ ಯಾರಿಗೂ ಯಾವ ಶುಲ್ಕವನ್ನೂ ಪಡೆಯದೆ ಆ ಪುಸ್ತಕಗಳನ್ನು ಇವರು ಒದಗಿಸುತ್ತಾರೆ. ಹರಿಹರಪ್ರಿಯರ ಈ ಸಾಹಿತ್ಯಸೇವೆಯನ್ನು ಗಮನಿಸಿ, ಇಪ್ಪತ್ತು ವರ್ಷಗಳ ಹಿಂದೆಯೇ ಕರ್ನಾಟಕ ಸರ್ಕಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು.

ಈಗ ಅವರು, ತಮ್ಮ ಕುಟುಂಬ ಹಾಗೂ ಪುಸ್ತಕಭಂಡಾರದೊಡನೆ ಅಸಹಾಯಕರಾಗಿ ತಮ್ಮ ತಲೆಯ ಮೇಲಿನ ಸೂರನ್ನು ಕಳೆದುಕೊಳ್ಳಲಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ, ಸಾಹಿತ್ಯ ಸಂಸ್ಥೆಗಳು ಹಾಗೂ ಸಾಹಿತ್ಯಾಸಕ್ತರು ಅವರ ನೆರವಿಗೆ ಬಂದು ಅವರನ್ನು ಹಾಗೂ ಅವರ ‘ಪುಸ್ತಕಮನೆ’ಯನ್ನು ಉಳಿಸಿಕೊಳ್ಳಬೇಕು. ಇದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ನಾನು ಭಾವಿಸಿದ್ದೇನೆ.
–ಸಿ.ಎನ್. ರಾಮಚಂದ್ರನ್, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.