ಬೆಂಗಳೂರು: ದೇಶದ 23 ಭಾಷೆಗಳಲ್ಲಿ ಅನುವಾದಗೊಂಡಿರುವ ವಚನ ಸಂಪುಟಗಳ ಲೋಕಾರ್ಪಣೆ ಹಾಗೂ ಬಸವ ಸಮಿತಿಯ ಸುವರ್ಣ ಮಹೋತ್ಸವ ನವದೆಹಲಿಯ ವಿಜ್ಞಾನ ಭವನದಲ್ಲಿ ಇದೇ 29ರಂದು ನಡೆಯಲಿದೆ.

ಬಸವ ಸಮಿತಿಯ ಟ್ರಸ್ಟಿ ಆಗಿರುವ ಬೇಲಿಮಠದ ಶಿವರುದ್ರ ಸ್ವಾಮೀಜಿ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಂಪುಟವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡುವರು. ಇದೇ ವೇಳೆ ಬಸವ ಜಯಂತಿ ನಡೆಯಲಿದೆ’ ಎಂದರು.

‘ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಮಾರ್ಗದರ್ಶನದಲ್ಲಿ 10 ವರ್ಷಗಳ ಹಿಂದೆ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. 200 ಅನುವಾದಕರ ನೆರವು ಪಡೆಯಲಾಗಿತ್ತು. ಇದಕ್ಕೆ ₹2.50 ಕೋಟಿ ವೆಚ್ಚವಾಗಿದ್ದು, ರಾಜ್ಯ ಸರ್ಕಾರ ₹1 ಕೋಟಿ ಅನುದಾನ ನೀಡಿದೆ. ಉಳಿದ ಮೊತ್ತವನ್ನು ಬಸವ ಸಮಿತಿ ಭರಿಸಿದೆ’ ಎಂದರು.

ಜಪಾನ್, ಜರ್ಮನಿ, ಫ್ರೆಂಚ್, ಅರೆಬಿಕ್ ಭಾಷೆಗಳಲ್ಲೂ ಬಸವಾದಿ ಶರಣರ ವಚನಗಳನ್ನು ಅನುವಾದ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.

ಯಾವ ಭಾಷೆಗಳಿಗೆ ಅನುವಾದ

ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಉರ್ದು, ಸಂಸ್ಕೃತ, ಮರಾಠಿ, ಬೆಂಗಾಲಿ, ಪಂಜಾಬಿ, ಸಿಂಧಿ, ಗುಜರಾತಿ, ಕೊಂಕಣಿ, ಮೈಥಿಲಿ, ಕಾಶ್ಮೀರಿ, ಓರಿಯಾ, ಸಂತಾಲಿ, ರಾಜಸ್ತಾನಿ, ಮಲಯಾಳಂ, ತುಳು, ಜೋಜ್ಪುರಿ, ಕೊಡವ ಹಾಗೂ ಅಸ್ಸಾಮಿ.

ಅಂಕಿಅಂಶ

173 ಶರಣರ ವಚನಗಳು

2500 ಸಂಪುಟದಲ್ಲಿರುವ ವಚನಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.