ತಂತ್ರಜ್ಞಾನ ಕ್ಷೇತ್ರದಲ್ಲೂ ದೊಡ್ಡ ಮಟ್ಟದ ದರೋಡೆಗಳಾಗುತ್ತಿವೆ. ಕಂಪೆನಿಯೊಂದು ಅಭಿವೃದ್ಧಿಪಡಿಸಿದ ವಿನ್ಯಾಸಗಳನ್ನು ಅಥವಾ ಪ್ರೋಗ್ರಾಂಗಳನ್ನು ಮತ್ತೊಂದು ಕಂಪೆನಿ ನಕಲು ಮಾಡಿಕೊಳ್ಳುವುದು ಅಥವಾ ಅಂಥದ್ದೇ ಸೌಲಭ್ಯವನ್ನು ಅಭಿವೃದ್ಧಿಪಡಿಸಿ ತನ್ನ ಗ್ರಾಹಕರನ್ನು ಉಳಿಸಿಕೊಳ್ಳುವುದು ಸಾಮಾನ್ಯ ಎನ್ನುವಂತಾಗಿದೆ. ನೇರವಾಗಿ ನಡೆಯುವ ಇಂತಹ ಕಳ್ಳತನಗಳನ್ನು ಹೊಸ ಆವಿಷ್ಕಾರ ಎನ್ನುವಂತೆ ಕಂಪೆನಿಗಳು ಬಿಂಬಿಸುತ್ತವೆ ಎನ್ನುವುದು ಅಪ್ಲಿಕೇಷನ್ ಅಭಿವೃದ್ಧಿದಾರರ ಆಕ್ರೋಶ.

ಸ್ಮಾರ್ಟ್ಫೋನ್ಗಳು ಜನಪ್ರಿಯವಾದ ನಂತರ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಎರಡೂ ಕ್ಷೇತ್ರಗಳಲ್ಲಿ ಈ ರೀತಿಯ ಸೋರಿಕೆಗಳು ಹೆಚ್ಚುತ್ತಿದೆ. ಇತ್ತೀಚೆಗೆ ‘ಸ್ನ್ಯಾಪ್ಚಾಟ್’ ಎಂಬ ವಿಡಿಯೊ ಮೆಸೇಜಿಂಗ್ ಮೊಬೈಲ್ ಅಪ್ಲಿಕೇಷನ್ನಲ್ಲಿರುವ ‘ಲೈವ್ ಸ್ಟೋರಿ’ ಸೌಲಭ್ಯವನ್ನು ಫೇಸ್ಬುಕ್ ತನ್ನ ಮೊಬೈಲ್ ಮೆಸೆಂಜರ್ ಅಪ್ಲಿಕೇಷನ್ನಲ್ಲೂ ಯಥಾವತ್ತಾಗಿ ಅಳವಡಿಸಿಕೊಂಡಿದೆ. ವರ್ಷದ ಹಿಂದೆ ಸ್ನ್ಯಾಪ್ಚಾಟ್ನಿಂದ ಸೋರಿಕೆ ಮಾಡಿದ್ದ ಇದೇ ಸೌಲಭ್ಯವನ್ನು ಇನ್ಸ್ಟಾಗ್ರಾಂ ಬಳಸಿಕೊಂಡಿತ್ತು. ಸದ್ಯ ಇನ್ಸ್ಟಾಗ್ರಾಂ ಫೇಸ್ಬುಕ್ ಒಡೆತನದಲ್ಲಿದೆ.

2011ರಲ್ಲಿ ಮಾರುಕಟ್ಟೆ ಪ್ರವೇಶಿಸಿರುವ ‘ಸ್ನ್ಯಾಪ್ಚಾಟ್’ ಕಂಪೆನಿ, ಬಳಕೆದಾರರ ದೃಷ್ಟಿಯಿಂದ ಫೇಸ್ಬುಕ್ನಷ್ಟು ದೊಡ್ಡದಲ್ಲದಿದ್ದರೂ, ಅತ್ಯಂತ ಕಡಿಮೆ ಅವಧಿಯಲ್ಲೇ 16 ಕೋಟಿ ಬಳಕೆದಾರರನ್ನು ಸಂಪಾದಿಸಿದ ಹೆಗ್ಗಳಿಕೆ ಹೊಂದಿದೆ.

ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿಗಳು ಹುಟ್ಟುಹಾಕಿರುವ ಕಂಪೆನಿಯು ಚಿತ್ರಗಳ ಮೂಲಕ ನಡೆಸುವ ಸಂವಹನಕ್ಕೆ ಹೆಸರುವಾಸಿ. ವಿಶೇಷವೆಂದರೆ ಅಪ್ಲಿಕೇಷನ್ ಮೂಲಕ ನಡೆಸುವ ಸಂದೇಶಗಳು, ಕೆಲವೇ ನಿಮಿಷಗಳ ಕಾಲ ಮಾತ್ರ ಮೊಬೈಲ್ ಪರದೆಯಲ್ಲಿ ಇರುತ್ತದೆ. ನಂತರ ಸ್ವಯಂಚಾಲಿತವಾಗಿ ಅಳಿಸಿಹೋಗುತ್ತವೆ. ಈ ಅಪ್ಲಿಕೇಷನ್ನಲ್ಲಿ ಕಾಣಿಸಿಕೊಂಡ ‘ಮೈ ಸ್ಟೋರಿ’ ಮತ್ತು ‘ಡಿಸ್ಕವರ್’ ಎಂಬ ಸೌಲಭ್ಯಕ್ಕೆ ಯುವಜನತೆ ಮಾರುಹೋಗಿದ್ದಾರೆ. ಇದೀಗ ಹೆಚ್ಚೂ ಕಡಿಮೆ ಇದೇ ಸೌಲಭ್ಯವನ್ನು ಫೇಸ್ಬುಕ್ ಯಥಾವತ್ ಬಳಸಿಕೊಂಡಿದೆ. ಇದರ ಜತೆಗೆ ಆಗ್ಮಟೆಡ್ ರಿಯಾಲಿಟಿ ಆಧರಿಸಿದ ಹೊಸ ತಂತ್ರಜ್ಞಾನವನ್ನೂ ಪರಿಚಯಿಸಿದೆ.

ಮಾರುಕಟ್ಟೆ ವಿಸ್ತರಿಸಲು ಹೊಸ ಸೌಲಭ್ಯ, ಪ್ರೋಗ್ರಾಂಗಳನ್ನು ಅಭಿವೃದ್ಧಿಪಡಿಸುವುದಕ್ಕಿಂತ ಅಥವಾ ಅದಕ್ಕಾಗಿ ಬಂಡವಾಳ ಸುರಿಯುವುದಕ್ಕಿಂತಲೂ ಮುಖ್ಯವಾಗಿ, ಇನ್ನೊಬ್ಬರ ಬಳಿ ಇರುವ ತಂತ್ರಜ್ಞಾನ ಅಥವಾ ಸೌಲಭ್ಯವನ್ನು ತನ್ನ ಬಳಿಯೂ ಹೊಂದುವುದು ಮಾರುಕಟ್ಟೆ ವಿಸ್ತರಣೆ ದೃಷ್ಟಿಯಿಂದ ಅಷ್ಟೇ ಮುಖ್ಯ ಎನ್ನುವುದನ್ನು ಫೇಸ್ಬುಕ್ ಕಂಡುಕೊಂಡಿದೆ.

5 ವರ್ಷಗಳ ಹಿಂದೆ ಫೇಸ್ಬುಕ್ ಬಳಕೆದಾರರು ‘ಕಮೆಂಟ್’ ಮಾಡುತ್ತಿದ್ದ ಅಥವಾ ಸ್ಟೇಟಸ್ ಅಪ್ಡೇಟ್ ಮಾಡುತ್ತಿದ್ದ ಪ್ರಮಾಣ ಕಡಿಮೆ ಇತ್ತು. ಇದನ್ನು ಹೆಚ್ಚಿಸಲು ಕಂಪೆನಿ ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಲಿಲ್ಲ. ಬದಲಿಗೆ ಇಂತಹ ಸಂವಹನಕ್ಕೆ ಹೆಸರಾಗಿದ್ದ ಇನ್ಸ್ಟಾಗ್ರಾಂ ಅನ್ನೇ ಖರೀದಿಸಿತು.

ಆ ಮೂಲಕ ಇನ್ಸ್ಟಾಗ್ರಾಂನ 60 ಕೋಟಿ ಬಳಕೆದಾರರು ಫೇಸ್ಬುಕ್ ನೆಟ್ವರ್ಕ್ ವ್ಯಾಪ್ತಿಗೆ ಬಂದರು. ನಂತರ ವಾಟ್ಸ್ಆ್ಯಪ್ ಎಂಬ ಮೊಬೈಲ್ ಅಪ್ಲಿಕೇಷನ್ ಜನಪ್ರಿಯತೆಯ ಉತ್ತುಂಗಕ್ಕೆ ಏರಿತು. ಕಂಪೆನಿ ನಿಧಾನವಾಗಿ ಅದನ್ನೂ ಬುಟ್ಟಿಗೆ ಹಾಕಿಕೊಂಡಿತು. ಅದರ ಜತೆಯಲ್ಲಿ 100 ಕೋಟಿ ಗ್ರಾಹಕರು ಫೇಸ್ಬುಕ್ ಜಾಲಕ್ಕೆ ಬಂದರು. ಸಾಮಾಜಿಕ ಜಾಲ ತಾಣದಲ್ಲಿ ಬಲವಾಗಿ ಬೇರೂರಲು ಮತ್ತು ಪ್ರತಿಸ್ಪರ್ಧಿಗಳು ತಲೆಎತ್ತದಂತೆ ಮಾಡಲು ನೆಟ್ವರ್ಕ್ ವಿಸ್ತರಣೆ ಅತ್ಯಂತ ಮುಖ್ಯ ಎನ್ನುವುದನ್ನು ಫೇಸ್ಬುಕ್ ಸ್ಥಾಪಕ ಜುಕರ್ಬರ್ಗ್ ಕಂಡುಕೊಂಡಿದ್ದಾರೆ.

ಹೀಗೆ ಒಂದೊಂದೇ ಕಂಪೆನಿಗಳನ್ನು ಖರೀದಿಸುತ್ತಾ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳ ಮಾಡಿಕೊಳ್ಳುವ ಮೂಲಕ ಅವರು ಮಾರುಕಟ್ಟೆ ವಿಸ್ತರಣೆ ಮಾಡಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ₹ 300 ಕೋಟಿಗೆ ‘ಸ್ನ್ಯಾಪ್ಚಾಟ್’ ಖರೀದಿಸಲು ಫೇಸ್ಬುಕ್ ಪ್ರಸ್ತಾವ ಮುಂದಿಟ್ಟಿದೆ. ಆದರೆ, ಕಂಪೆನಿ ಇದನ್ನು ತಳ್ಳಿಹಾಕಿದೆ.
ಪ್ರತಿಯೊಂದು ಸೋಷಿಯಲ್ ನೆಟ್ವರ್ಕ್ ಕಂಪೆನಿಯೂ, ಹೊಸ ಹೊಸ ಸೋಷಿಯಲ್ ಫೀಚರ್ ಅಥವಾ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಪ್ರವೇಶಿಸುತ್ತದೆ. ಒಂದು ಅಪ್ಲಿಕೇಷನ್ನಲ್ಲಿ ಇಲ್ಲದ ಸೌಲಭ್ಯ, ಅಥವಾ ಆಕರ್ಷಣೆಯ ಬೆನ್ನುಹತ್ತಿ ಗ್ರಾಹಕರು ಇನ್ನೊಂದು ಅಪ್ಲಿಕೇಷನ್ಗೆ ವಲಸೆ ಹೋಗುತ್ತಾರೆ. ಇದನ್ನು ತಡೆಯಲು ಕಂಪೆನಿಗಳು ಕಂಡುಕೊಂಡಿರುವ ಸರಳ ಯೋಜನೆ, ಆ ಪ್ರೋಗ್ರಾಂ ಅನ್ನು ನಕಲು ಮಾಡುವುದು ಅಥವಾ ಆ ಕಂಪೆನಿಯನ್ನೇ ಖರೀದಿಸುವುದು.

ಜನಪ್ರಿಯವಾಗಿದ್ದ ಸೌಲಭ್ಯವೊಂದು ಸಾರ್ವತ್ರಿಕವಾಗಿ ಲಭಿಸುವ ಸ್ಥಿತಿ ಬಂದಾಗ ಅದನ್ನು ಅಭಿವೃದ್ಧಿಪಡಿಸಿದ ಮೂಲ ಕಂಪೆನಿ ಸಹಜವಾಗಿಯೇ ಮಾರುಕಟ್ಟೆಯಲ್ಲಿ ನೆಲೆನಿಲ್ಲಲಾಗದೆ ಅವಸಾನ ಹೊಂದುತ್ತದೆ. ಆದರೆ, ಎಲ್ಲ ಕಾಲದಲ್ಲೂ ಈ ತಂತ್ರ ಯಶಸ್ವಿಯಾಗುವುದಿಲ್ಲ. ಸ್ವಂತವಾಗಿಯೂ ಕೆಲವು ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲೇಬೇಕಾಗುತ್ತದೆ. ಈ ದೂರದೃಷ್ಟಿ ಇಟ್ಟುಕೊಂಡೇ ಫೇಸ್ಬುಕ್ ಆಗ್ಮಂಟೆಟ್ ರಿಯಾಲಿಟಿ ಮತ್ತು ವರ್ಚುವಲ್ ರಿಯಾಲಿಟಿ ತಂತ್ರಜ್ಞಾನ ಆಧರಿಸಿದ ಕೆಲವು ಸೌಲಭ್ಯಗಳನ್ನು ಪರಿಚಯಿಸಲು ಹೊರಟಿದೆ.

ಬಳಕೆದಾರರು ತಮ್ಮ ಚಿತ್ರಗಳಿಗೆ ಮತ್ತು ವಿಡಿಯೊಗಳಿಗೆ ಡಿಜಿಟಲ್ ಎಫೆಕ್ಟ್ಗಳನ್ನು ಕೊಡುವ ಸೌಲಭ್ಯ ಇದಾಗಿದೆ. ಅಂದರೆ ಸುಮ್ಮನೆ ನಿಂತಿರುವ ಮಹಿಳೆಯೊಬ್ಬಳು ವಾಂತಿ ಮಾಡಿಕೊಳ್ಳುವಂತೆ ಮಾಡುವುದು, ಚಿತ್ರದ ಹಿಂದೆ ಮಳೆ ಸುರಿಯುವಂತೆ, ಕಾಮನಬಿಲ್ಲು ಮೂಡುವಂತೆ ಮಾಡುವುದು ಹೀಗೆ ಹತ್ತು ಹಲವು ಮೋಜಿನ ಅಂಶಗಳು ಇದರಲ್ಲಿವೆ. ಸಾಮಾಜಿಕ ಜಾಲ ತಾಣಗಳ ಸ್ಪರ್ಧೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಇದೆಲ್ಲಾ ಅನಿವಾರ್ಯವಾಗಿದೆ. ಚಿಕ್ಕ ಕಂಪೆನಿಗಳ ಹೊಸ ಹೊಸ ಹೊಳಹುಗಳನ್ನು ಕದ್ದು ಅದನ್ನು ಆವಿಷ್ಕಾರ ಎಂಬಂತೆ ಬಿಂಬಿಸಿಕೊಳ್ಳವುದು ನೈತಿಕವಾಗಿ ಸರಿಯಲ್ಲ ಎನ್ನುತ್ತಾರೆ ಸ್ಫೈಗಲ್ ಕಂಪೆನಯ ಹಣಕಾಸು ಅಧಿಕಾರಿ ಮಿರಾಂಡಾ ಕೆರ್.
(ನ್ಯೂಯಾರ್ಕ್ ಟೈಮ್ಸ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.