ಬೆಂಗಳೂರು: ಎಂ.ಟಿ. ವಾಸುದೇವನ್ ನಾಯರ್ ಅವರ 'ರಂಡಾಮೂಳಂ' ಕೃತಿಯನ್ನು 'ಮಹಾಭಾರತ' ಎಂಬ ಹೆಸರಿನಲ್ಲಿ ಸಿನಿಮಾ ಮಾಡಿದರೆ ಅದನ್ನು ತೆರೆ ಕಾಣಲು ಬಿಡುವುದಿಲ್ಲ ಎಂದು ಹಿಂದೂ ಐಕ್ಯವೇದಿ ಅಧ್ಯಕ್ಷೆ ಕೆ.ಪಿ. ಶಶಿಕಲಾ ಬೆದರಿಕೆಯೊಡ್ಡಿದ್ದಾರೆ.

ಮಹಾಭಾರತವನ್ನು ತಿರುಚಿ ಬರೆದ ಕೃತಿ ರಂಡಾಮೂಳಂ. ಆ ಹೆಸರಿನಲ್ಲಿಯೇ ಸಿನಿಮಾ ಮಾಡಲಿ. ರಂಡಾಮೂಳಂನ್ನು ಮಹಾಭಾರತ ಎಂದು ಹೆಸರಿಟ್ಟು ಸಿನಿಮಾ ಮಂದಿರಗಳಲ್ಲಿ ಪ್ರದರ್ಶಿಸಲು ನಾವು ಬಿಡೆವು ಎಂದು ಶಶಿಕಲಾ ಹೇಳಿದ್ದಾರೆ.

ಮಹಾಭಾರತ ನಂಬಿಕೆಗೆ ಸಂಬಂಧಪಟ್ಟದ್ದು. ಇತಿಹಾಸವನ್ನೂ, ನಂಬಿಕೆಯನ್ನೂ ತಿರುಚಿದ ಕೃತಿಯನ್ನು ಮಹಾಭಾರತ ಎಂದು ಹೆಸರಿಟ್ಟರೆ ಅದನ್ನು ನಾವು ಒಪ್ಪುವುದಿಲ್ಲ.

ರಂಡಾಮೂಳಂ ಕೃತಿ ಆಧರಿತ ಸಿನಿಮಾಗೆ ಮಹಾಭಾರತ ಎಂದು ಹೆಸರು ಘೋಷಿಸಿದ ವೇಳೆ ಸಂಘ ಪರಿವಾರದ ಸದಸ್ಯರು ಸಾಮಾಜಿಕ ತಾಣಗಳಲ್ಲಿ ಪ್ರತಿಭಟನೆ ವ್ಯಕ್ತ ಪಡಿಸಿದ್ದರು.

ಅರಬ್ ಒಕ್ಕೂಟದಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಉದ್ಯಮಿ ಬಿ.ಆರ್.ಶೆಟ್ಟಿ ಈ ಚಲನಚಿತ್ರದ ನಿರ್ಮಾಪಕರು. ಜಾಹೀರಾತು ಚಿತ್ರಗಳ ನಿರ್ದೇಶಕ ವಿ.ಎ.ಶ್ರೀಕುಮಾರ್ ಮೆನನ್ ಮಹಾಭಾರತ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ₹1000 ಕೋಟಿ ಬಜೆಟ್ ವೆಚ್ಚದಲ್ಲಿ ನಿರ್ಮಾಣವಾಗುವ 'ಮಹಾಭಾರತ' ಎರಡು ಭಾಗಗಳಲ್ಲಿ ತೆರೆ ಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.