ಬೆಂಗಳೂರು:  ‘ದೇಶದ ಎಲ್ಲ ಭಾಷೆಗಳು ಹಾಗೂ ಕಾಲಘಟ್ಟಗಳ ಸಾಹಿತ್ಯದ ಮೇಲೆ ಭಾಗವತ ಪ್ರಭಾವ ಬೀರಿದೆ’ ಎಂದು ಶತಾವಧಾನಿ ಆರ್. ಗಣೇಶ್ ಹೇಳಿದರು.

ಭಾರತೀಯ ವಿದ್ಯಾಭವನ ಮತ್ತು ಇಸ್ಕಾನ್ ಸಂಸ್ಥೆಯ ಆಶ್ರಯದಲ್ಲಿ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಭಾಗವತ ಸಂದೇಶ’ ರಾಷ್ಟ್ರೀಯ ಅಧಿವೇಶನದಲ್ಲಿ ಅವರು ಮಾತನಾಡಿದರು.

‘ಭಾರತೀಯ ಸಾಹಿತ್ಯ, ಸಂಗೀತ, ನೃತ್ಯ ಮತ್ತು ರಂಗಭೂಮಿ ಪ್ರಕಾರಗಳಿಗೆ ಭಾಗವತ ಪ್ರೇರಣೆಯಾಗಿದೆ. ಕನ್ನಡದಲ್ಲಿ ದಾಸ ಸಾಹಿತ್ಯ, ಕುವೆಂಪು ಮತ್ತು ಎಚ್.ಎಸ್.ವೆಂಕಟೇಶಮೂರ್ತಿ ಅವರ ಸಾಹಿತ್ಯಕ್ಕೂ ಸ್ಫೂರ್ತಿಯಾಗಿದೆ. ಚಲನಚಿತ್ರಗಳಿಗೂ ಪ್ರೇರಣೆ ನೀಡಿದೆ’ ಎಂದರು.

ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಪದ್ಮಾಶೇಖರ್ ಮಾತನಾಡಿ, ‘ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲಲು ಭಾಗವತ ನೆರವಾಗುತ್ತದೆ. ದ್ರೌಪದಿ ವಸ್ತ್ರಾಪಹರಣ ಮತ್ತು

ಸೀತೆಯ ಅಗ್ನಿ ಪ್ರವೇಶ ಪ್ರಶ್ನಾರ್ಹ ವಾ ದರೂ, ಇಂದಿನ ಹೆಣ್ಣಿನ ಶೋಷಣೆಯ ಮುನ್ಸೂಚನೆ ಆಗಲೇ ಇತ್ತು’ ಎಂದು ತಿಳಿಸಿದರು. ಈ ಅಧಿವೇಶನವು ಜೂನ್ 18ರವರೆಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.