ಬೆಂಗಳೂರು: ‘ಯಾವುದೇ ಭಾಷೆಯ ಕುರಿತು ತಿರಸ್ಕಾರ ಇರಬಾರದು. ಬದಲಿಗೆ ಅನ್ಯ ಭಾಷೆಗಳನ್ನೂ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಸಂಶೋಧಕ ಡಾ.ಷ.ಶೆಟ್ಟರ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ವಿದ್ವತ್ ದತ್ತಿ ಹಾಗೂ ಟಿ.ಗಿರಿಜಾ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎಲ್ಲ ಭಾಷೆಗಳಲ್ಲೂ ಉತ್ತಮ ಸಾಹಿತ್ಯವಿದೆ. ಭಾಷೆಗಳನ್ನು ಕಲಿಯುವುದರಿಂದ ವೈವಿಧ್ಯಮಯ ಸಾಹಿತ್ಯದ ಪರಿಚಯ ನಮಗೆ ಆಗುತ್ತದೆ. ಇಂದು ಜಾನಪದ ಕುರಿತ ಅಧ್ಯಯನ ಹೆಚ್ಚಿದೆ. ಆದರೆ, ಕನ್ನಡ ಭಾಷೆಯ ಬಗ್ಗೆ ತಿಳಿಯುವ ಆಸಕ್ತಿ ಕಡಿಮೆ ಆಗುತ್ತಿದೆ. ಈ ಸ್ಥಿತಿ ಯಾವುದೇ ಭಾಷೆಗೆ ಬರಬಾರದು’ ಎಂದು ತಿಳಿಸಿದರು.

ಪುರಸ್ಕೃತ ವಿ.ಜಿ.ಪೂಜಾರ್ ಮಾತನಾಡಿ, ‘ಇಂದಿನ ಕನ್ನಡ ಅಧ್ಯಾಪಕರಿಗೆ ಸಂಧಿ, ಸಮಾಸಗಳೇ ಸರಿಯಾಗಿ ತಿಳಿದಿಲ್ಲ. ಪಿಎಚ್.ಡಿ. ಪಡೆದವರಿಗೆ ಸರಿಯಾದ ಬರವಣಿಗೆ ಬರಲ್ಲ. ವಿದ್ವತ್ ಪರಂಪರೆ ಕ್ಷೀಣಿಸುತ್ತಿದೆ’ ಎಂದು ಹೇಳಿದರು.

ಲೇಖಕರಾದ ಡಾ.ವಿ.ಜಿ.ಪೂಜಾರ್ ಅವರಿಗೆ ಟಿ.ವಿ.ವೆಂಕಟಾಚಲಶಾಸ್ತ್ರಿ ದತ್ತಿ ಪ್ರಶಸ್ತಿ ಮತ್ತು ಲೇಖಕಿಯರಾದ ಡಾ.ವಿಜಯಶ್ರೀ ಸಬರದ, ಡಾ.ಕೆ.ಆರ್.ಸಂಧ್ಯಾರೆಡ್ಡಿ ಅವರಿಗೆ ಟಿ.ಗಿರಿಜಾ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಗಳು ತಲಾ ₹ 10 ಸಾವಿರ ಒಳಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.