ಬೆಂಗಳೂರು: ಆನೇಕಲ್ ತಾಲ್ಲೂಕಿನ ಚಿಕ್ಕನಾಗಮಂಗಲದಲ್ಲಿ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪಿಸಲು ಫ್ರಾನ್ಸ್‌ನ 3 ವೇಜ್ ಎನರ್ಜಿ ಕಂಪೆನಿಯು ಪ್ರಸ್ತಾವ ಸಲ್ಲಿಸಿದೆ.

ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ಪ್ರಸ್ತಾವದ ಕುರಿತು ಚರ್ಚಿಸಲಾಯಿತು. ಕಸದಿಂದ ವಿದ್ಯುತ್ ತಯಾರಿಕೆ ಕುರಿತು ಕಂಪೆನಿಯ ಪ್ರತಿನಿಧಿಗಳು ವಿವರಿಸಿದರು.

‘₹2,260 ಕೋಟಿ ವೆಚ್ಚದಲ್ಲಿ 500 ಟನ್ ಘನತ್ಯಾಜ್ಯ ಸಾಮರ್ಥ್ಯದ ಘಟಕವನ್ನು ಕಂಪೆನಿ ಸ್ಥಾಪಿಸಲಿದೆ. ಇದಕ್ಕೆ ಪಾಲಿಕೆಯು ಯಾವುದೇ ಖರ್ಚು ಮಾಡುವುದಿಲ್ಲ. ಘಟಕದಲ್ಲಿ ತಯಾರಾಗುವ ವಿದ್ಯುತ್ ಅನ್ನು ಬೆಸ್ಕಾಂ ಖರೀದಿ ಮಾಡಲಿದೆ. ಬೆಸ್ಕಾಂ ಒಂದು ಯೂನಿಟ್‌ಗೆ ₹7.09 ನೀಡಲಿದೆ’ ಎಂದು ಬಿಬಿಎಂಪಿ ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್ ಖಾನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿದಿನ 500 ಟನ್ ಕಸವನ್ನು ಪಾಲಿಕೆಯಿಂದಲೇ ಪಡೆಯಲು ಸಾಧ್ಯವಿಲ್ಲ. 300 ಟನ್ ಕಸವನ್ನು ಪಾಲಿಕೆಯಿಂದ, 200 ಟನ್ ಕಸವನ್ನು ಖಾಸಗಿಯವರಿಂದ ಪಡೆಯುತ್ತೇವೆ. ಶೇ 90ರಷ್ಟು ಕಸವನ್ನು ವಿದ್ಯುಚ್ಛಕ್ತಿಯನ್ನಾಗಿ, ಉಳಿದ ಕಸವನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸುತ್ತೇವೆ ಎಂದು ಕಂಪೆನಿಯವರು ಪ್ರಸ್ತಾವದಲ್ಲಿ ತಿಳಿಸಿದ್ದಾರೆ’ ಎಂದರು.

‘ಈ ಪ್ರಸ್ತಾವವನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಾಗಿದೆ. ಸಂಪುಟ ಸಭೆಯ ಅನುಮೋದನೆ ಬಳಿಕ ಘಟಕ ಸ್ಥಾಪಿಸಲಾಗುತ್ತದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.